Home namma chikmagalur chikamagalur ಶ್ರೀ ಸಂತ ಸೇವಾಲಾಲ್ ತತ್ವಾದರ್ಶಗಳು ಮಾsರ್ಗದರ್ಶಿ:
chikamagalurHomeLatest Newsnamma chikmagalur

ಶ್ರೀ ಸಂತ ಸೇವಾಲಾಲ್ ತತ್ವಾದರ್ಶಗಳು ಮಾsರ್ಗದರ್ಶಿ:

Share
Share

ಚಿಕ್ಕಮಗಳೂರು:  ಹಿಂಸೆ, ಅಸಮಾನತೆ ಇರುವ ಪ್ರಸ್ತುತ ಸಮಾಜಕ್ಕೆ ಶ್ರೀ ಸಂತ ಸೇವಾಲಾಲ್ ಅವರ ತತ್ವಾದರ್ಶಗಳು ಮಾರ್ಗದರ್ಶನ ನೀಡುತ್ತವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತ, ಬಂಜಾರ ಸಂಘದಿಂದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಸಂತ ಶ್ರೀ ಸೇವಾಲಾಲ್  ಅವರ ೨೮೭ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಸಮಾನತೆ, ಶೋಷಣೆ ಮುಕ್ತ ಮಾಡಿ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಮ ಸಮಾಜ ನಿರ್ಮಿಸಬೇಕು ಎಂಬ ಕಾರಣಕ್ಕೆ ೧೨ನೇ ಶತಮಾನದಲ್ಲಿ ಬಸವಣ್ಣ, ೧೭ನೇ ಶತಮಾನದಲ್ಲಿ ಶ್ರೀ ಸಂತ ಸೇವಾಲಾಲ್, ೨೧ನೇ ಶತಮಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಕುವೆಂಪು ಮತ್ತಿತರೆ ಮಹನೀಯರು ಸಮಾಜ ಸುಧಾರಣೆಗೆ ಹೋರಾಟ ಮಾಡಿದ್ದಾರೆ. ಸತ್ಯ, ಅಹಿಂಸೆ ಪಾಲನೆ ಸೇವಾಲಾಲರ ಧ್ಯೇಯವಾಗಿತ್ತು ಎಂದು ಹೇಳಿದರು.

ಶಾಸಕ ಸಿ.ಟಿ.ರವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂತ ಸೇವಾಲಾಲರು ಬದುಕಿದ್ದಾಗ ಮಾಡಿದ್ದ ಸಮಾಜಮುಖಿ ಕಾರ್ಯಗಳಿಂದ ಸಮಾಜಕ್ಕೊಂದು ಆತ್ಮಶಕ್ತಿಯ ಜಾಗೃತಿ ಮೂಡಿದೆ. ಶ್ರೀಮಂತಿಕೆಯಿಂದಿದ್ದ ಬಂಜಾರ ಸಮಾಜ ಕಾಲದ ಪರಿಸ್ಥಿತಿಗೆ ಸಿಲುಕಿ ಇಂದು ನಿಕೃಷ್ಟ ಸ್ಥಿತಿಯಲ್ಲಿದೆ. ಲಮಾಣಿ ಭಾಷೆ ಮತ್ತು ಸಂಸ್ಕೃತಿ ಉಳಿಸಲು ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಬಂಜಾರ ಅಕಾಡೆಮಿ ಸ್ಥಾಪನೆ ಮಾಡಿದ್ದಾಗಿ ಹೇಳಿದರು.

ಉಪನ್ಯಾಸಕಿ ಮೀನಾಕ್ಷಿ ಬಾಯಿ ಉಪನ್ಯಾಸ ನೀಡಿ, ೧೭೪೯ರಲ್ಲಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲರು ಜನಿಸುವ ಮೂಲಕ ಮಾನವೀಯ ಮೌಲ್ಯಗಳ ಪುನರ್ ಜನ್ಮವಾದಂತಾಯಿತು. ಬಂಜಾರ ಸಮುದಾಯದ ಆತ್ಮಗೌರವದ ಉದಯವಾದಂತಾಯಿತು. ಶಿಕ್ಷಣದಿಂದ ವಂಚಿತರಾಗಿ ಶೋಷಣೆಗೆ ಒಳಗಾಗಿದ್ದ ಬಂಜಾರ ಸಮಾಜಕ್ಕೆ ದಿಕ್ಸೂಚಿಯಾದವರೇ ಸಂತ ಸೇವಲಾಲರು ಎಂದು ಹೇಳಿದರು.

ಬ್ರಿಟೀಷರು ನಮ್ಮ ವಿರುದ್ಧ ಗಿರಿಜನ ಅಪರಾಧ ದಂಡ ಸಂಹಿತೆ ತಂದು ನಮ್ಮನ್ನು ಶೋಷಿಸಿದರು. ನಂತರ ಮೈಸೂರು ಮಹಾರಾಜರ ಕಾಲದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕರಿಸಿದರು ಎಂದು ಹೇಳಿದರು.

ಬಂಜಾರ ಸಮಾಜದ ಮುಖಂಡ ರಾಮನಾಯ್ಕ ಮಾತನಾಡಿದರು. ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಉಪಾಧ್ಯಕ್ಷೆ ಲಲಿತಾಬಾಯಿ ರವಿನಾಯಕ, ಉಪತಹಸೀಲ್ದಾರ್ ಪ್ರಸನ್ನ, ಬಂಜಾರ ಸಂಘದ ಮುಖಂಡರಾದ ಲಾಲ್‌ಸಿಂಗ್, ಆನಂದನಾಯ್ಕ ಮತ್ತಿತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಸ್ವಾಗತಿಸಿದರು.

Sri Sant Sevalal’s principles and ideals guide

Share

Leave a comment

Leave a Reply

Your email address will not be published. Required fields are marked *

Don't Miss

ದಬ್ಬಾಳಿಕೆಯಿಂದ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಯತ್ನ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಬ್ಬಾಳಿಕೆಯ ಮೂಲಕ ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿ

ಚಿಕ್ಕಮಗಳೂರು:  ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿರುವ ಮೂಲ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಬಡ ರೋಗಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ದೊರೆಯುವಂತೆ, ಆಸ್ಪತ್ರೆಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ...

Related Articles

ಬಯಲ ಬಂಗಾರದ”ಈರುಳ್ಳಿ” ಬಲು ದೂರ,ದೂರ

ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ “ಬಯಲ ಬಂಗಾರದ ಬೆಳೆ ಬೆಳೆಯುವ ಕಪ್ಪು ಮಣ್ಣು ಅಜ್ಜಂಪುರ ಮತ್ತು ಕಡೂರು...

ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂ

ಚಿಕ್ಕಮಗಳೂರು:  ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು...

ಆಸ್ತಿ- ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂಪತ್ತು

ಚಿಕ್ಕಮಗಳೂರು:  ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂ ಪತ್ತು. ಈ ಆರೋಗ್ಯಯುತ ಬದುಕು...

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ...