ಚಿಕ್ಕಮಗಳೂರು: ನಗರಸಭಾ ವ್ಯಾಪ್ತಿಯಲ್ಲಿ ವಿಶೇಷ ಅನುದಾನದಡಿ ಕೈಗೊಂಡಿರುವ ರಸ್ತೆ ಡಾಂಬರೀಕರಣ ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಪರಿಶೀಲಿಸಿದರು.
ಅವರು ಇಂದು ನಗರದ ವಿವಿಧ ವಾರ್ಡ್ಗಳಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ, ‘ಸೈಕಲ್ ತುಳಿ ಸಮಸ್ಯೆ ತಿಳಿ’ ಘೋಷಣೆಯೊಂದಿಗೆ ನಾಗರಿಕರ ಸಮಸ್ಯೆಗಳನ್ನು ಆಲಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಆಗಮಿಸಿ ಮಾತನಾಡಿದರು.
ನಗರದ ರಸ್ತೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸುಮಾರು ೩೨ ಕೋಟಿ ರೂ. ವಿಶೇಷ ಅನುದಾನ ನಗರಸಭೆಗೆ ಬಿಡುಗಡೆಯಾಗಿದ್ದು, ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಿ, ಅರ್ಧಕ್ಕೂ ಹೆಚ್ಚು ರಸ್ತೆಗಳ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಸಮರ್ಪಿಸಿ, ಉಳಿದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದರು.
ವಾರ್ಡ್ ಸಂಖ್ಯೆ ೫ ಚನ್ನಾಪುರ ರಸ್ತೆ, ವಾರ್ಡ್ ಸಂಖ್ಯೆ ೬ ಸೆಂಟ್ಮೇರೀಸ್ ಶಾಲೆ ಬಳಿ, ವಾರ್ಡ್ ಸಂಖ್ಯೆ ೭ ಗಾಂಧಿನಗರ ಆಟೋಸರ್ಕಲ್ ಹತ್ತಿರ ಹಾಗೂ ವಾರ್ಡ್ ಸಂಖ್ಯೆ ೮ ಜಯನಗರ ಸಾಯಿಬಾಬಾ ಮಂದಿರದ ಹತ್ತಿರ, ವಾರ್ಡ್ ನಂ.೧೦ ಉಂಡೇದಾಸರಹಳ್ಳಿ ರಾಮಯ್ಯ ಸರ್ಕಲ್ ಹತ್ತಿರ, ದೀಪ ನರ್ಸಿಂಗ್ ಹೋಂ ಬಳಿ ರಸ್ತೆ ಕಾಮಗಾರಿಗಳನ್ನು ಉದ್ಘಾಟಿಸಿ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಸಿಡಿಎ ಅಧ್ಯಕ್ಷ ಮಂಜೇಗೌಡ, ಮಾಜಿ ಅಧ್ಯಕ್ಷ ಎಂ.ಎಲ್ ಮೂರ್ತಿ, ಆಯುಕ್ತ ಬಸವರಾಜ್, ಎಇಇ ಲೋಕೇಶ್, ಸ್ಥಳೀಯರಾದ ತನೋಜ್ ನಾಯ್ಡ್, ವೆಂಕಟೇಶ್ ನಾಯ್ಡ್, ಕೋಟೆ ಜಗಧೀಶ್, ಕೋಟೆ ಸೋಮಣ್ಣ, ಹಿರೇಮಗಳೂರು ರಾಮಚಂದ್ರ, ಪ್ರಸಾದ್ ಅಮಿನ್, ಇತರರು ಉಪಸ್ಥಿತರಿದ್ದರು.
Inspection of asphalting work of MLA Thammaya Road
Leave a comment