ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಸಬ್ ಮಿಷನ್ ಅಧ್ಯಕ್ಷ ಅಂಶುಮಂತ್ ಎಲ್ಲರಿಗೂ ಕಾಡಿ ಬೇಡಿಕೊಂಡು ಕಟ್ಟಡಕ್ಕೆ ಹೆಸರು ಬೀಳುವವರೆಗೆ ಅವಕಾಶ ಕೊರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಗಗನಯಾನಿ ನೆಲದ ಸಮಸ್ಯೆಗಳಿರಲಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಏನು ನಡೆಯುತ್ತದೆ ಎಂದು ನೋಡಲು ಸಾಧ್ಯವಿಲ್ಲ. ಇನ್ನೂ ಕಾಂಗ್ರೆಸ್ ಶಾಸಕರುಗಳು ಹಣದ ಹಿಂದೆ ಬಿದ್ದಿರುವುದರ ಜೊತೆಗೆ ಸಾಟಿ(ಹೊಂದಾಣಿಕೆ) ರಾಜಕಾರಣ ಮಾಡಿಕೊಂಡಿದ್ದಾರೆ ಇದಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆ ಸಾಕ್ಷಿ ಎಂದು ಕಾಂಗ್ರೆಸ್ ನವರು ಮಾತನಾಡುತ್ತಿದ್ದಾರೆ.
ಈ ಸಂಬಂಧ ರಾಜೀನಾಮೆ ನೀಡಿರುವೆ ಎಂದು ಹೇಳಿದ್ದ ಎಂ.ಎಲ್.ಮೂರ್ತಿ ಮನೆಗೆ ಹೋಗಿ ಮೂಗಿಗೆ ತುಪ್ಪ ಸವರಿ ಬಂದಿದ್ದಾರೆ. ಇವರೆಲ್ಲರ ಮಧ್ಯೆ ಜಿಲ್ಲಾ ಕಾಂಗ್ರೆಸ್ನಲ್ಲಿ” ಹೆಣ್ಣುಮಕ್ಕಳು”ಸ್ಟ್ರಾಂಗ್ ಗುರು ಎಂಬ ಹಾಡು ಜೋರಾಗಿ ಕೇಳಿ ಬರುತ್ತಿದೆ.
ಚಿಕ್ಕಮಗಳೂರಿನಲ್ಲಿ ಗಾಯತ್ರಿ ಶಾಂತೇಗೌಡ ಮತ್ತು ಮೂಡಿಗೆರೆಯಲ್ಲಿ ಶಾಸಕಿ ನಯನ ಮೋಟಮ್ಮ ಸ್ಟ್ರಾಂಗ್ ಆಗಿದ್ದಾರೆ ಎನ್ನಲಾಗುತ್ತಿದೆ. ಗಾಯತ್ರಿ ಶಾಂತೇಗೌಡ ಸ್ವಲ್ಪ ಮೌನಕ್ಕೆ ಜಾರಿದಂತೆ ಕಂಡು ಬಂದರು ಹೈಕಾಮಾಂಡ್ ಮುಂದೆ ಅದರಲ್ಲೂ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರು.
ಅಕಸ್ಮಾತ್ತಾಗಿ ರಾಜಕೀಯ ಕ್ಕೆ ಎಂಟ್ರಿ ಕೊಟ್ಟು ಜಿ,ಪಂ ಸದಸ್ಯರಾಗಿ ,ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯರಾದರು.ಆದರೆ ಕಳೆದ ಹತ್ತು ವರ್ಷಗಳಿಂದ ಯಾವ ಸ್ಥಾನ ಸಿಕ್ಕಿಲ್ಲ. ವಿಧಾನ ಪರಿಷತ್ ಮತ ಎಣಿಕೆ ಲೋಪ ಪ್ರಶ್ನೆ ಮಾಡಿ ಹೈಕೋರ್ಟ್ ಮುಗಿಸಿ ಸುಪ್ರೀಂ ಕೋರ್ಟ್ ನಲ್ಲಿ ಪರವಾಗಿ ತೀರ್ಪು ಬರಬಹುದು ಎಂದು ಕಾಯುತ್ತಿದ್ದಾರೆ.ಜೊತೆಗೆ ಸ್ವಲ್ಪ ಮೌನಕ್ಕೆ ಜಾರಿದ್ದರೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗ ಬೇಕು ಎಂದು ಹಟಕ್ಕೆ ಬಿದ್ದು ಓಡಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ಮಾತನಾಡುತ್ತಿದ್ದಾರೆ.ಹಾಲಿ ಅಧ್ಯಕ್ಷ ಕುರ್ಚಿ ಖಾಲಿ ಮಾಡುತ್ತಿಲ್ಲ ಗಾಯತ್ರಿ ಶಾಂತೇಗೌಡ ಸ್ಟ್ರಾಂಗ್ ಹೀಗಾಗಿ ಅಧ್ಯಕ್ಷರಾಗುತ್ತಾರೆ ಎಂದು ಅವರ ಬೆಂಬಲಿಗರು ಪಟಾಕಿ ಸಿಡಿಸಲು ಕಾಯುತ್ತಿದ್ದಾರೆ.
ಇನ್ನೂ ಮೂಡಿಗೆರೆ ಶಾಸಕಿ ನಯನಮೋಟಮ್ಮ ವೇರಿ,ವೇರಿ ಸ್ಟ್ರಾಂಗ್ ಎಂದು ಕರೆಯಲಾಗುತ್ತಿದೆ.ಇವರ ಗೆಲುವಿಗೆ ಶ್ರಮಿಸಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಯಾ ಪೈಸೆ ಬೆಲೆ ಇಲ್ಲ. ಗೆದ್ದಾಗಿನಿಂದ ನಯನ ಲಡಾಯಿ ನಡೆಸುತ್ತಿದ್ದಾರೆ.ಕಾಂಗ್ರೆಸ್ ನವರು ಒಂದು ಸಭೆ ನಡೆಸಿದರೆ ನಯನ ಪ್ರತಿರೋಧವಾಗಿ ಸಭೆ ನಡೆಸಿ ತಿರುಗೇಟು ನೀಡುತ್ತಿದ್ದಾರೆ.
ಗೆದ್ದಿರುವುದು ಮೂರು ಮತ್ತೊಂದು ಓಟಿನಿಂದ ಆದರೂ ಎಲ್ಲರಿಗೂ ನೀರು ಕುಡಿಯುವಂತೆ ಮಾಡಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಎಲ್.ಶಂಕರ್ ತಮ್ಮ ಊರಿನ ಸಮೀಪದ ರಸ್ತೆಗೆ ಜಾರಕಿಹೊಳೆ ಬಳಿ 5 ಕೋಟಿ ಅನುದಾನ ತಂದು ತಮಗೆ ಬೇಕಾದವರಿಗೆ ಗುತ್ತಿಗೆ ಕೆಲಸ ಮಾಡಲು ಹೇಳಿದ್ದರಂತೆ ಈ ವಿಷಯ ತಿಳಿದ ಶಾಸಕಿ ನಯನ ಜಾರಕಿಹೊಳೆಗೆ ಈ ಕ್ಷೇತ್ರದ ಶಾಸಕಿ ನಾನು ಹೇಳಿದರೆ ಮಾತ್ರ ಅನುದಾನ ಕೊಡಬೇಕು ಎಂದರಲ್ಲದೆ ಗುತ್ತಿಗೆ ಕೆಲಸ ಬೇರೆಯವರಿಗೆ ಕೊಟ್ಟ ಬಗ್ಗೆ ಶಂಕರ್ ಹೇಳಿಕೊಂಡಿದ್ದಾರೆ. ಅಂದರೆ “ಹೆಣ್ಣುಮಕ್ಕಳು ” ಸ್ಟ್ರಾಂಗ್ ಗುರೂ,ಎನ್ನಲು ಅನುಮಾನವಿಲ್ಲ.
“Girls” are strong leaders in the District Congress!
Leave a comment