Home namma chikmagalur chikamagalur ಷಡ್ಯಂತರದಿಂದ ಚುನಾವಣೆಯಲ್ಲಿ ಸೂಲು ಅನುಭವಿಸುವಂತಾಯಿತು
chikamagalurHomeLatest Newsnamma chikmagalur

ಷಡ್ಯಂತರದಿಂದ ಚುನಾವಣೆಯಲ್ಲಿ ಸೂಲು ಅನುಭವಿಸುವಂತಾಯಿತು

Share
Share

ಮೂಡಿಗೆರೆ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತದಾರರು ಕೈಗೊಂಡ ನಿರ್ಣಯಕ್ಕೆ ತಲೆ ಬಾಗುತ್ತೇನೆ. ಆದರೆ ತನ್ನ ಗೆಲುವಿಗೆ ವ್ಯವಸ್ಥಿತ ಷಡ್ಯಂತರ ನಡೆದಿದ್ದರಿಂದ ಸೋಲು ಅನುಭವಿಸುಂತಾಯಿತು ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗಾಗಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಎಂಎಲ್‌ಸಿ ಸಿ.ಟಿ.ರವಿ ಸೇರಿದಂತೆ ಎನ್‌ಡಿಎ ಮುಖಂಡರು ಮತ್ತು ಕಾರ್ಯಕರ್ತರು ಕೆಲಸ ಮಾಡಿರುವುದು ಸರ್ವೆ ಸಾಮಾನ್ಯ ಎಂದರು.

ಆದರೆ ಸಹಕಾರ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಸಂಖ್ಯೆ ಕಡಿಮೆ ಇದೆ. ಆದರೂ ಕಾಂಗ್ರೆಸ್‌ನ ಎಲ್ಲಾ ಎಂಎಲ್‌ಎ ಹಾಗೂ ಮುಖಂಡರು ಕೂಡ ಗೆಲುವಿಗಾಗಿ ಶ್ರಮಿಸಿದ್ದರೂ, ಚುನಾವಣೆಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೆ ಗೆಲುವು ಸಾಧ್ಯವಾಗುತ್ತಿತ್ತು ಎಂದು ಹೇಳಿದರು.

ಇಂತಹ ಚುನಾವಣೆಯಲ್ಲಿ ರಾಜಕೀಯ ಮುಖಂಡರು ಪಾಲ್ಗೊಂಡಿರುವ ಬಗ್ಗೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದಕ್ಕೆ ಉತ್ತರ ಅವರಿಂದಲೇ ಪಡೆಯಿರಿ. ತಾನು ಎಲ್ಲರಿಗೂ ಚಿರಪರಿಚಿತನಾಗಿದ್ದೇನೆ.

ರೈತರ ಪರವಾಗಿ ಕಾಳಜಿ ಇಟ್ಟುಕೊಂಡು ವಿಧಾನಸೌಧದ ಮುಂದೆ ಧರಣಿ ಕುಳಿತಿದ್ದೆ. ಹಾಗಾಗಿ ಮಲೆನಾಡು, ಬಯಲುಸೀಮೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಚುನಾವಣೆ ಸ್ಪರ್ಧಿಸಿದ್ದೆ. ಆದರೆ ಲೋಕಪ್ಪಗೌಡ ಎಂಬುವರು ಮತದಾರರ ದಿಕ್ಕು ತಪ್ಪಿಸಿದ್ದ ಕಾರಣ ತನಗೆ ಸೋಲು ಉಂಟಾಗಿದೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಹಕಾರಿ ಸಂಘಗಳ ಚುನಾವಣೆಗೆ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರಿಗೆ ಅವಕಾಶ ಸಿಗುವಂತೆ ಸದನದಲ್ಲಿ ಮಂಡನೆಯಾಗಿರುವುದಕ್ಕೆ ರಾಜ್ಯಪಾಲರು ಸಹಿ ಹಾಕಬೇಕೆಂದು ಒತ್ತಾಯಿಸಿದರು.

The conspiracy led to the election being lost.

 

 

Share

Leave a comment

Leave a Reply

Your email address will not be published. Required fields are marked *

Don't Miss

ಕಳ್ಳರ ತಂಡ ಬಂಧನ-32.74 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶ

ತರೀಕೆರೆ: ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ತರೀಕೆರೆ ಉಪ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಅಂತರಜಿಲ್ಲಾ ಕಳ್ಳರ ತಂಡವನ್ನು ಬಂಧಿಸಿ ಸುಮಾರು 32.74 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು...

ಕಾಡು ಹಂದಿ ದಾಳಿಗೆ ಮಹಿಳೆ ಗಂಭೀರ ಗಾಯ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಕಾಡಾನೆ ಮತ್ತು ಕಾಡೆಮ್ಮೆಗಳ ಬೆನ್ನಲ್ಲೇ ಇದೀಗ ಕಾಡು ಹಂದಿಗಳ ಭೀತಿ ಹೆಚ್ಚಾಗಿದೆ. ಮೂಡಿಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ತೋಟದಲ್ಲಿ...

Related Articles

“ಕುರ್ಚಿ” ಮಹಾತ್ಮೆ: ಶೃಂಗೇರಿಯಲ್ಲಿ ಕಾಂಗ್ರೆಸ್ VS ಬಿಜೆಪಿ ದಂಗಲ್

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿಯ ಮಾಜಿ...

ಬಾಲ್ಯ ವಿವಾಹ ನಡೆದರೆ ಪೋಕ್ಸೋ ಪ್ರಕರಣ ದಾಖಲಿಸಲು ಸೂಚನೆ

ಚಿಕ್ಕಮಗಳೂರು: ಬಾಲ್ಯ ವಿವಾಹಕ್ಕೆ ನಿಷೇಧವಿದ್ದರೂ, ರಹಸ್ಯವಾಗಿ ಅಪ್ರಾಪ್ತರ ಮದುವೆ ನಡೆದರೆ ಪೋಕ್ಸೋ ಕಾಯಿದೆಯಡಿಯಲ್ಲೂ ಪ್ರಕರಣ ದಾಖಲಿಸುವಂತೆ...

ಜೀವರಾಜ್ ವಿರುದ್ಧದ FIRಗೆ ಹೈಕೋರ್ಟ್ ತಡೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ...

ನಗರಸಭೆಯ 2.60 ಕೋಟಿ ರು. ವೆಚ್ಚದ ಫುಡ್ ಕೋರ್ಟ್ ಗೆ ಚಾಲನೆ

ಚಿಕ್ಕಮಗಳೂರು: ನಗರದ ಜನರ ಹಿತದೃಷ್ಟಿಯಿಂದ ಏನು ಮಾಡುತ್ತೇವೆಯೋ, ಅದು ಶಾಶ್ವತವಾಗಿ ಇರುವಂತೆ ಕೆಲಸ ಮಾಡಬೇಕು. ಪಕ್ಷಾತೀತವಾಗಿ...