ಚಿಕ್ಕಮಗಳೂರು: – ಬಡವರು, ಕಾರ್ಮಿಕರು ಮತ್ತು ರೈತರ ಹಕ್ಕುಗಳಿಗಾಗಿ ಹೋರಾಡಿದ ದಿಟ್ಟ ನಾಯಕ ಬಿ.ಕೆ.ಸುಂದರೇಶ್. ಅವರ ಅನೇಕ ಹೋರಾಟಗಳು ಸಮಾಜದಲ್ಲಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಹೇಳಿದರು.
ನಗರದ ಜಿಲ್ಲಾ ಸಿಪಿಐ ಕಚೇರಿಯಲ್ಲಿ ಬುಧವಾರ ದಿಟ್ಟ ಹೋರಾಟ, ಜನಾನುರಾಗಿ ದಿ|| ಬಿ.ಕೆ.ಸುಂದರೇ ಶ್ ಅವರ ೩೧ನೇ ಸ್ಮರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತ ನಾಡಿದರು.
ಜಿಲ್ಲೆಯ ಜನರ ಸಮಸ್ಯೆಗಳಿಗೆ ನಿರಂತರ ಹೋರಾಟ ನಡೆಸಿ ಹಲವರಿಗೆ ನ್ಯಾಯ ಕೊಡಿಸುವಲ್ಲಿ ಬಿ.ಕೆ. ಸುಂದರೇಶ್ ಮೊದಲಿಗರು. ರೈತರ, ಕೂಲಿ ಕಾರ್ಮಿಕರು, ಅಂಗನವಾಡಿ ಕಾರ್ಯರ್ತೆಯರ ದ್ವನಿಯಾಗಿ ಹೋರಾಟ ಮಾಡಿದ ಅವರು ಜನನುರಾಗಿಯಾಗಿದ್ದು ಇಂಥ ನಾಯಕನನ್ನು ಪಕ್ಷ ಮತ್ತು ಜಿಲ್ಲೆ ಕಳೆದುಕೊಂ ಡಿರುವುದು ದುದೈರ್ವ ಎಂದರು.
ಸುಂದರೇಶ್ ಅವರ ಆದರ್ಶ ಬದುಕು ಇಂದಿನ ಯುವಕರಿಗೆ ಪ್ರೇರಣದೀಪ. ಶೋಷಿತರು, ದಿನಗೂ ಲಿ ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಸ್ವಇಚ್ಚೆಗಾಗಿ ಬದುಕದೇ, ಸದಾಕಾಲ ಶೋಷಿತರಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಹೋರಾಟದ ಫಲವಾಗಿತ್ತು. ಇದಕ್ಕೆ ಜನಸಾಮಾನ್ಯರಿಗೆ ಅಭಿಮಾನದಿಂದ ಜಿಲ್ಲೆಯ ವಿವಿಧ ವೃತ್ತಗಳಲ್ಲಿ ಬಿ.ಕೆ.ಎಸ್. ಹೆಸರನ್ನು ನಾಮಕರಣಗೊಳಿಸಿದ್ದಾರೆ ಎಂದು ಹೇಳಿದರು.
ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ್ಕುಮಾರ್ ಮಾತನಾಡಿ ಹೋರಾಟದ ಹಾದಿಯಲ್ಲಿ ಸಾಗುತ್ತಿರುವ ಮುಖಂಡರಿಗೆ ಸುಂದರೇಶ್ ಪ್ರೇರಣೆ. ಇಂಥ ವ್ಯಕ್ತಿಯ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುಂದುವರಿದರೆ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.
ಸಿಪಿಐ ಜಿಲ್ಲಾ ಮಾಜಿ ಕಾರ್ಯದರ್ಶಿ ರಾಧಾ ಸುಂದರೇಶ್ ಮಾತನಾಡಿ ಇಂದಿನ ರಾಜಕಾರಣದಲ್ಲಿ ತಾಳಕ್ಕೆ ತಕ್ಕಂತೆ ಬದಲಾಗುವ ಸನ್ನಿವೇಶವಿದೆ. ಸುಂದರೇಶ್ ರಾಜಕೀಯ ಎನ್ನುವುದು ಜನರ ಸೇವೆಯೇ ಹೊರತು ವೈಯಕ್ತಿಕ ಆದಾಯ ಮಾಡುವುದಾಗಿರಲಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಜಿಲ್ಲಾ ಸಹಕಾರ್ಯದರ್ಶಿ ಗಳಾದ ಸೋಮೇಗೌಡ, ಹೆಡದಳ್ ಕುಮಾರ್, ಮುಖಂಡರುಗಳಾದ ಹೆಚ್.ಎಂ.ರೇಣುಕಾರಾಧ್ಯ, ಮುಖ ಂಡರುಗಳಾದ ಉಮೇಶ್, ಜೇರ್ಮಿ ಲೋಬೋ ಮತ್ತಿತರರು ಉಪಸ್ಥಿತರಿದ್ದರು.
B.K. Sundaresh a brave leader who fought for the rights of the poor
Leave a comment