ಚಿಕ್ಕಮಗಳೂರು: ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಸೂಕ್ತ ಸಮಯದಲ್ಲಿ ಕುಂದು ಕೊರತೆ ಆಗದಂತೆ ಪಡಿತರ ವಿತರಣೆ ಮಾಡಬೇಕು. ಕಾಳಸಂತೆಯಲ್ಲಿ ಅಕ್ಕಿ ಮಾರಾಟದಂತೆ ನಿಗಾವಹಿಸ ಬೇಕು ಎಂದು ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಅನ್ಸರ್ ಆಲಿ ಹೇಳಿದರು.
ನಗರದ ಟಿ.ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ಶುಕ್ರವಾರ ಆಹಾರ ಮತ್ತು ನಾಗರೀಕ ಇಲಾಖೆಯಿಂದ ಆಯೋಜಿಸಿದ್ಧ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಡಿತರ ಕಾರ್ಡಿನಲ್ಲಿ ೭೫ ವರ್ಷ ವಯೋಮಾನದ ವ್ಯಕ್ತಿಗೆ ಸರ್ಕಾರದ ಆದೇಶದಂತೆ ಮನೆಗೆ ನ್ಯಾಯ ಬೆಲೆ ಅಂಗಡಿದಾರರು ಪಡಿತರ ವಿತರಿಸುವ ಕೆಲಸ ಮಾಡಬೇಕು. ಪ್ರತಿ ಪಡಿತರ ಅಂಗಡಿಗಳಲ್ಲಿ ಸಮಯದ ಫಲಕ ಕಡ್ಡಾಯಗೊಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹೊರರಾಜ್ಯ ಅಥವಾ ಜಿಲ್ಲೆಗಳಿಂದ ಬಂದ ಕೂಲಿಕಾರ್ಮಿಕರಿಗೆ ಕಾರ್ಡ್ಗನುಸಾರ ನ್ಯಾಯಬೆಲೆ ಅಂಗ ಡಿಗಳು ಪಡಿತರ ವಿತರಿಸಲು ಮೊದಲ ಆದ್ಯತೆ ನೀಡಬೇಕು. ಈಚೆಗೆ ಕಾಳಸಂತೆಯಲ್ಲಿ ಅಕ್ಕಿ ಲಾರಿಯನ್ನುಪೊ ಲೀಸ್ ಇಲಾಖೆ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಅಂಗಡಿದಾರರು ಜಾಗೃತಿ ವಹಿಸು ವುದು ಕಡ್ಡಾಯ ಎಂದರು.
ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳು ಮಾಸಿಕ ಸಭೆಗೆ ಹಾಜರಾಗಿ ಕುಂದುಕೊರತೆಗಳಿದ್ದಲ್ಲಿ ಸಭೆಯ ಗಮನಕ್ಕೆ ತಂದಲ್ಲಿ ಸೂಕ್ತ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದ ಅವರು ಬಡ ವರ್ಗದ ಜನತೆಗೆ ಅಕ್ಕಿಯಲ್ಲಿ ಯಾವುದೇ ಮೋಸವಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವುದು ಮಾಲೀಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಒಟ್ಟಾರೆ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ಆದೇಶವನ್ನು ಪರಿಪಾಲಿಸಿ ಪಡಿತರದಾರರ ಸ್ನೇಹಿಯಾ ಗಿ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಅಂಗಡಿ ಮಾಲೀಕರೇ ಸರ್ಕಾರದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟಕ್ಕೆ ಮುಂದಾದರೆ ಕಾನೂನಾತ್ಮಕವಾಗಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಆಹಾರ ಮತ್ತು ನಾಗರೀಕ ಇಲಾಖೆ ಶಿರಸ್ತೇದಾರ್ ಜನಾರ್ಧನ್ ಮಾತನಾಡಿ ಪಡಿತರ ವಿತರಣೆಯಲ್ಲಿ ನ್ಯಾಯಬದ್ಧವಾಗಿ ಅಂಗಡಿದಾರರು ಕೆಲಸ ಮಾಡಬೇಕು. ತೂಕದಲ್ಲಿ ವ್ಯತ್ಯಾಸ, ಪಡಿತರದಾರರಿಂದ ದೂರುಗ ಳು ಬಂದಲ್ಲಿ ಇಲಾಖೆ ಸೂಕ್ತ ಕ್ರಮಕ್ಕೆ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಇಲಾಖೆ ನಿರೀಕ್ಷಕರಾದ ಪ್ರಕಾಶ್, ತೇಜಸ್, ಶಶಿಕುಮಾರ್, ಲೋಹಿತ್, ಗ್ಯಾರಂಟಿ ಸದಸ್ಯರಾದ ನಾಗೇಶ್ರಾಜ್ ಅರಸ್, ರೋಹಿತ್, ಗೌಸ್ಮೊಹಿಯುದ್ದೀನ್ ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು, ಕಾರ್ಯದರ್ಶಿಗಳು, ಚಿಲ್ಲರೆ ಗುತ್ತಿಗೆದಾರರು ಹಾಜರಿದ್ದರು.
Distribute rations without causing any inconvenience to the public.
Leave a comment