ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿತ್ಯ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರು, ಅಡಿಕೆ ಬೆಳೆಗಾರರು,ಸಂಪ್ರದಾಯದ ಬೆಳೆಗಳನ್ನು ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿ ತತ್ತರಿಸುತ್ತಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಹಗಲು ರಾತ್ರಿ ಸುರಿಯುತ್ತಿರುವ ಮಳೆಗೆ ಈರುಳ್ಳಿ, ಜೋಳ, ರಾಗಿ ಮತ್ತು ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ ಅಡಿಕೆ ಮತ್ತು ಕಾಫಿ ಬೆಳೆ ಅಲ್ಲಲ್ಲಿ ಕಟಾವಿಗೆ ಬಂದಿದ್ದು ಕಟಾವು ಮಾಡಲಾಗದೆ ಬೆಳೆಗಾರ ರೈತರು ತತ್ತರಿಸಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಹಣ್ಣಾಗಿರುವ ಕಾಫಿ ಮಳೆಗೆ ನೆಲಕ್ಕೆ ಸುರಿಯುತ್ತಿದೆ ಅಡಿಕೆ ಕಾಯಿ ಉದುರುತ್ತಿದೆ. ಬೆಳೆಗೆ ಬೆಲೆ ಇದೆ ಆದರೆ ಬೆಳೆ ನೀರುಪಾಲಾಗುತ್ತಿದೆ. ರೖತ ಅಸಹಾಯಕನಾಗಿದ್ದಾನೆ. ರೖತರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಸಮಾದಾನ ಸಾಂತ್ವಾನ ಹೇಳಬೇಕಾಗಿದ್ದ, ರೖತರ ನಷ್ಟಕ್ಕೆ ಪರಿಹಾರ ಒದಗಿಸಬೇಕಾಗಿದ್ದ ಜನ ಪ್ರತಿನಿದಿನಗಳು ಸರ್ಕಾರ ಇದುವರೆಗೆ ಸ್ಪಂದಿಸಿಲ್ಲ.
ಇಂತಹ ದುಸ್ಥಿತಿ ಬೆಳೆಗಾರರನ್ನು ಚಿಂತೆ ಉಂಟುಮಾಡುವ ಜೊತೆಗೆ ಕಾಫಿ ಹೇಗೆ ಕೊಯ್ಲು ಮಾಡುವುದು ಹೇಗೆ ಎಂಬ ದುಸ್ಥಿತಿಯಲ್ಲಿದ್ದಾರೆ.ಇನ್ನೂ ಅಡಿಕೆ ಬೆಳೆಗಾರರ ಪರಿಸ್ಥಿತಿ ಕೂಡ ಭಿನ್ನ ಇಲ್ಲ ತೋಟಕ್ಕೆ ಕಾಲಿಡಲು ಆಗುತ್ತಿಲ್ಲ.ಕೊಯ್ದ ಅಡಿಕೆ ಒಣಗುತ್ತಿಲ್ಲ.
ಸಂಪ್ರದಾಯಿಕ ಬೆಳೆಗಳು ಸುರಿಯುತ್ತಿರುವ ಮಳೆಗೆ ಹೊಲದಲ್ಲಿ ಕರಗುತ್ತಿರುವುದು ರೈತರ ಕಣ್ಣಲ್ಲಿ ಮಳೆ ನೀರಿಗಿಂತ ಹೆಚ್ಚು ನೀರು ಸುರಿಸುವಂತೆ ಆಗಿದೆ. ತರಕಾರಿ ಬೆಳೆಗಳು ಗದ್ದೆ,ಹೊಲದಲ್ಲಿ ಕರಗುತ್ತಿವೆ .ವರ್ಷಗಳು ಕಷ್ಟ ಪಟ್ಟಿದ್ದು ಮಳೆಯಲ್ಲಿ ಕರಗಿ ಹೋಯಿತು ಎಂದು ಚಿಂತ ಕ್ರಾಂತರಾಗಿದ್ದಾರೆ.ಇದನ್ನು ಕೇಳಲು ಜನಪ್ರತಿನಿಧಿಗಳು ಬರುತ್ತಿಲ್ಲ.
ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹಲವು ಅನಾಹುತ ಜರಗಿವೆ.ನೀರಿನಲ್ಲಿ ಕೊಚ್ಚಿ ಹೋದ ಬೆಳೆಗಳು ದನಕರುಗಳು ಜನಗಳು ಮತ್ತು ಕುಸಿದ ಮನೆಗಳ ಲೆಕ್ಕ ಸಿಗುತ್ತಿಲ್ಲ.ಗುಂಡಿಗಳನ್ನು ರಸ್ತೆ ಎಂದು ಕರೆಯ ಬೇಕಾಗಿದೆ. ಆಡಳಿತ ಪಕ್ಷ ಮತ್ತು ಪ್ರತಿ ಪಕ್ಷಗಳು ಖುರ್ಚಿ ಕಿತ್ತಾಟದಲ್ಲಿ ನಿರತವಾಗಿವೆ .
ನಮ್ಮ ಸಂಕಷ್ಟ, ನೋವು ಕೇಳುವವರು ಯಾರೂ ಇಲ್ಲ ಎಂದು ಕಾಫಿ ಬೆಳೆಗಾರರು, ಅಡಿಕೆ ಬೆಳೆಗಾರರು ರೈತರು ಕ್ಯಾಕರಿಸಿ ಉಗಿಯುತ್ತಿದ್ದಾರೆ.
Heavy rains destroy crops make roads impassable cause loss of life and create hardship for farmers
Leave a comment