ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಬಿಜೆಪಿ V/S ಕಾಂಗ್ರೆಸ್ ಕಿತ್ತಾಟ ನಿರಂತರವಾಗಿ ನಡೆಯುತ್ತಿದೆ. ಇವರುಗಳ ಹಾದಿ ರಂಪಾ,ಬೀದಿ ರಂಪಾಟ ನೋಡಿ ಜನ ಮುಸಿ,ಮುಸಿ ನಗಡುತ್ತಲೇ ಇದು ಎಂತಹ ಮಹಾರಾಯರೆ ಎಂದು ಕೇಳುತ್ತಿದ್ದಾರೆ.
ಇತ್ತೀಚೆಗೆ ಇದು ತಾರಕಕ್ಕೆ ಏರಿದೆ. ಬೀದಿ ನಾಟಕದಂತೆ ಅವರನ್ನು ,ಇವರು,ಇವರನ್ನು, ಅವರು ಅಸಹ್ಯ ಪದಗಳಿಂದ ನಿಂದಿಸುತ್ತಿದ್ದಾರೆ.
ಬಿಜೆಪಿಯವರು ಪ್ರತಿಯೊಂದು ವಿಚಾರಕ್ಕೂ ಪ್ರತಿಭಟನೆ ಮಾಡುವುದು,ಪತ್ರಿಕಾ ಹೇಳಿಕೆ ನೀಡುವುದು.ಕೋರ್ಟ್ ಕಛೇರಿ ಎನ್ನುವುದನ್ನು ನೋಡಿ ಕಾಂಗ್ರೆಸ್ ನವರು “ಸತ್ಯ ಮೇವ ಜಯತೆ” ಬಿಜೆಪಿ ಮತ್ತು ಜೀವರಾಜ್ ರ ವಿರುದ್ಧ ಹರಿ ಹಾಯ್ದು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಕಾಂಗ್ರೆಸ್ ಮತ್ತು ರಾಜೇಗೌಡರ ಗೊಂಡ ಗಿರಿ ಬಿಡಿ ಎಂದು ಉಗಿದಿದ್ದಾರೆ.ಇದನ್ನು ನೋಡಿದ ಜನ ಅಂಕೆ ಮೀರಿ ಹೋಗುತ್ತಿದೆ ನೀಚ ರಾಜಕಾರಣ ಎನ್ನಿಸುತ್ತಿದೆ ಎಂದು ಜನರಾಡಿ ಕೊಳ್ಳುತ್ತಿದ್ದಾರೆ.
ಶೃಂಗೇರಿ ತೀರ್ಥಹಳ್ಳಿ ಸೇರಿ ವಿಧಾನ ಸಭಾ ಕ್ಷೇತ್ರದಿಂದ ಮೊದಲಿಗೆ ಕಡಿದಾಳ್ ಮಂಜಪ್ಪ ಮುಖ್ಯ ಮಂತ್ರಿಯಾದ ಕ್ಷೇತ್ರದಿಂದ ವೀರಣ್ಣ ಗೌಡರಂತಹ ಮತ್ಸದಿ ,ಮಲೆನಾಡು ಗಾಂಧಿ ಎಂದು ಕರೆಸಿಕೊಂಡ ಹೆಚ್.ಜಿ.ಗೋವಿಂದೇಗೌಡರು ಬೇಗಾನೆ ರಾಮಯ್ಯ ಪ್ರತಿನಿಧಿಸಿದ ಕ್ಷೇತ್ರಕ್ಕೆ ಬಿಜೆಪಿ ಎಂಟ್ರಿ ಕೊಟ್ಟ ಮೇಲೆ ಭ್ರಷ್ಟಾಚಾರ, ಸೆಕ್ಸ್ ವಾಸನೆ,ಕಿತ್ತಾಟ ಹೆಚ್ಚಾಗಿ ಕಾಂಗ್ರೆಸ್ ಇನ್ನೂ ಎತ್ತರಿಸಿದೆ ಎಂದು ಜನ ಹೇಳುತ್ತಿದ್ದಾರೆ.
ಜೀವರಾಜ್ ಎರಡು ಬಾರಿ ಸೋಲಿನಿಂದ ಹತಾಶರಾಗಿ ಈ ರೀತಿ ಗಾಯ ಮಾಡಿ ಕೊಂಡು ಓಡಾಡುತ್ತಿದ್ದಾರೆ.ಇದಕ್ಕೆ ಪ್ರತಿಯಾಗಿ ಶಾಸಕ ರಾಜೇಗೌಡರು ಇರುವೆ ಬಿಟ್ಟು ಕೊಂಡು ಕಿತ್ತಾಟ ಮಾಡಿ ಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ಕೂಡಾ ಇದೆ. ದ್ವೇಷ, ಅಸೂಯೆ, ಅಶ್ಲೀಲ ಪದಗಳು ದಿನೆ,ದಿನೇ ಹೆಚ್ಚಾಗುತ್ತಿದ್ದು ಬಹಿರಂಗ ವಾಕ್ಸ್ ಸಮರದ ಜೊತೆಗೆ ಅವರು,ಇವರ ಮೇಲೆ ಇವರು,ಅವರ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.ಎರಡು ಪಕ್ಷದ ವರು ಕಿಡಿ ಕಾರಿ ಕೊಳ್ಳುತ್ತಿದ್ದಾರೆ. ಒಬ್ಬರಿಗೆ ಅಧಿಕಾರ ಕಳೆದುಕೊಂಡ ಹತಾಶೆ, ಇನ್ನೊಬ್ಬರಿಗೆ ಅಧಿಕಾರದ ಆಮಲು ಎಂದು ಜನ ಶಪಿಸುತ್ತಿದ್ದಾರೆ.
ಎಣಿಸಲಾಗದ ತಪ್ಪು ಕ್ಷಣ,ಕ್ಷಣಕ್ಕೂ ನಿನ್ನಿಂದ ಕುಣಿಯುತ್ತಿವೆ.ಮೈ ಮರೆತು ದಣಿಯದಲೆ ದಿನ,ದಿನದಿ ಎಂದು. ಮಂಕು ತಿಮ್ಮನ ಕಗ್ಗ ಇಬ್ಬರು ಓದಿ ಕೊಂಡರೆ ಉತ್ತಮ.
Is MLA Rajegowda’s path in Sringeri constituency a path for former minister Jeevaraj?
Leave a comment