Home namma chikmagalur ಪಟ್ಟಣ ಪಂಚಾಯತಿಗೆ ಗ್ರಹಗಳ ಕಾಟ ಮೀಸಲಾತಿ ಕಗ್ಗಂಟು
namma chikmagalurHomeLatest News

ಪಟ್ಟಣ ಪಂಚಾಯತಿಗೆ ಗ್ರಹಗಳ ಕಾಟ ಮೀಸಲಾತಿ ಕಗ್ಗಂಟು

Share
Share

ಅಜ್ಜಂಪುರ: ಪಟ್ಟಣ ಪಂಚಾಯತಿ ಚುನಾವಣೆ ರಣರಂಗವಾಗಿ ಬಿಜೆಪಿ ಬಹುಮತ ಪಡೆದರೆ ಕಾಂಗ್ರೆಸ್ ಕಣ್ಣ್,ಕಣ್ಣ್ ಬಿಡುವಂತಾಯಿತು. ಸದಸ್ಯರುಗಳು ಆಯ್ಕೆ ಆಗಿ ಒಂದುವರೆ ತಿಂಗಳು ಕಳೆದರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಲು ಹಲವು ಗ್ರಹಗಳು ಅಡ್ಡಿಪಡಿಸುತ್ತಿರುವುದರಿಂದ ಅಧಿಕಾರಿಗಳಿಗೆ ಕಗ್ಗಂಟಾಗಿದೆ ಎನ್ನಲಾಗುತ್ತಿದೆ.

ಚುನಾವಣೆ ಅಧಿಸೂಚನೆ ಹೊರಡಿಸಿದಾಗ ಬಿ,ಸಿ,ಎಂ ಎ ಅಧ್ಯಕ್ಷ ಎಸ್.ಸಿ.ಉಪಾಧ್ಯಕ್ಷ ಎನ್ನಲಾಗಿತ್ತು ಇದಕ್ಕಾಗಿ ಹಲವು ಸ್ಪರ್ಧಿಗಳು ನೀರಿನಂತೆ ಹಣ ಖರ್ಚು ಮಾಡಿ ಅಧ್ಯಕ್ಷರಾಗ ಬೇಕು ಎಂಬ ಹಠಕ್ಕೆ ಬಿದ್ದಿದ್ದವರಿಗೆ ಶಾಸಕ ಶ್ರೀನಿವಾಸ್ ಅಡ್ಡಲಾಗಿದ್ದಾರೆ ಎಂದು ಬಿಜೆಪಿಯವರ ಆಕ್ರೋಶ.

ಈಗಿರುವ ಮೀಸಲಾತಿ ಬದಲಾಯಿಸಲು ಶ್ರೀನಿವಾಸ್ ಕುಟುಂಬ ಸಮೇತ ಪ್ರಯತ್ನ ನಡೆಸಿರುವುದು ಅಧಿಕಾರಿಗಳ ವಿಳಂಬ ನೀತಿ ಪೆದ್ದರಿಗೂ ತಿಳಿಯುತ್ತದೆ. ಎನೇ ಪ್ರಯತ್ನ ನಡೆಸಿದರೂ ಮೀಸಲಾತಿ ಬದಲಾಯಿಸುವುದು ಕಷ್ಟ ಎಂದು ತಿಳಿದು ಕೈ,ಕೈ ಹಿಸುಕಿ ಕೊಳ್ಳುತ್ತಿರುವಾಗ ಒಂದು ಐಡಿಯಾ ಬಂದಿದೆ.

ಕಳೆದ ಐದು ವರ್ಷದ ಹಿಂದೆ ನೂತನವಾಗಿ ಪಟ್ಟಣ ಪಂಚಾಯತಿ ರಚನೆಯಾದಾಗ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಎಸ್,ಟಿ ಗೆ ಮೀಸಲಾದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು ಇದರಿಂದ ಮೊದಲ ಅವಧಿಯ ಮೀಸಲಾತಿಯನ್ನು ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿಗಳ ಪತ್ರಕ್ಕೆ ನಗರಾಭಿವೃದ್ಧಿ ಕಾರ್ಯದರ್ಶಿ ಸ್ಪಷ್ಟನೆ ನೀಡಿರುವುದರಿಂದ ಮೊದಲ ಅವಧಿಯ ಮೀಸಲಾತಿಯಂತೆ ಚುನಾವಣೆ ನಡೆಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಇದರಿಂದಾಗಿ ಬಿಜೆಪಿಯಿಂದ ಗೆದ್ದಿರುವ ಎಸ್.ಟಿ.ಮೀಸಲು ಅಭ್ಯರ್ಥಿ ರೇವಣ್ಣಗೆ ಬಂಪರ್ ಲಾಟರಿ ಹೊಡೆದಿದೆ ಜೊತೆಗೆ ಬಿಜೆಪಿಯವರು ಉಪಾಧ್ಯಕ್ಷ ಸ್ಥಾನ ಸುಲಭವಾಗಿ ಪಡೆಯಬಹುದು ಆದರೆ ಶಾಸಕರು ಸುಮ್ಮನೆ ಕುಳಿತಿಲ್ಲ ಬಿಜೆಪಿಯ ಓರ್ವ ಸದಸ್ಯರನ್ನು ಸೆಳೆಯುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಪ್ರವಾಸ ಕಳುಹಿಸಿದ್ದಾರೆ ಎಂಬ ಸುದ್ದಿ ಹರಡಿದೆ.

ಏನಾದರೂ ಸರಿ ಬಿಸಿಎಂ ನವರು ಅಧ್ಯಕ್ಷರಾಗಬಾರಾದು ಎಂದು ಶಾಸಕ ಪ್ರಯತ್ನ ನಡೆಸಿದ್ದಾರೆ ಎಂದು ಸದಸ್ಯ ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಂತೂ ಇಂತೂ ಕುಂತಿಗೆ ಮಕ್ಕಳಿಲ್ಲ ನಾವು ಗೆದ್ದರು ನಮಗೆ ಅಧಿಕಾರವಿಲ್ಲ ಎಂದು ಎಲ್ಲಾ ಸದಸ್ಯರ ಅಳಲು ಅಧಿಕಾರದ ದುರ್ಬಳಕೆ ಮಾಡಿಕೊಂಡು ಜನರು ನನ್ನ ಹಿಡಿತದಲ್ಲಿ ಇರಬೇಕು ಎನ್ನುವವರಿಗೆ ಪಾಠ ಕಲಿಸಲು ಎರಡು ವರ್ಷ ಕಾಯಲೇ ಬೇಕು ಎಂದು ಗೊಣಗುತ್ತಿರುವುದು ಮಾತ್ರ ಸತ್ಯ.

ಕಳೆದ ಐದು ವರ್ಷದಿಂದ ಜನಪ್ರತಿನಿಧಿಗಳು ಇಲ್ಲದೆ ಬಣಗುಡುತ್ತಿದ್ದ ಪಟ್ಟಣ ಪಂಚಾಯತಿಗೆ ಚುನಾವಣೆ ನಡೆದರೂ ಅಧಿಕಾರಕ್ಕೆ ಗ್ರಹಗಳಿಂದ ಕಾಟ ತಪ್ಪಲಿಲ್ಲ ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ.

Planetary disaster reservation problem for town panchayat

Share

Leave a comment

Leave a Reply

Your email address will not be published. Required fields are marked *

Don't Miss

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ...

Related Articles

ಮಳೆಗಾಲದಲ್ಲಿ ಟಿಂಬರ್ ಸಾಗಣೆರಸ್ತೆಯಿಂದ ರಸ್ತೆ ಹಾಳು

ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ...

ನಗರಕ್ಕೆ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜು ಸ್ಥಗಿತ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 600 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ...

ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ…?

ಚಿಕ್ಕಮಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (LC-48) ಬದಲಿಗೆ...

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ...