Home namma chikmagalur ದಲಿತ ಸಮುದಾಯದ ಕ್ಷಮೆಯಾಚನೆಗೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ
namma chikmagalurchikamagalurHomeLatest News

ದಲಿತ ಸಮುದಾಯದ ಕ್ಷಮೆಯಾಚನೆಗೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

Share
Share

ಚಿಕ್ಕಮಗಳೂರು: ದಲಿತ ಸಂಘಟನೆಗಳು ಅಟ್ರಾಸಿಟಿ ಪ್ರಕರಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಜಿಲ್ಲಾ ವಕ್ಕಲಿಗರ ಸಂಘದ ಅಧ್ಯಕ್ಷರು ಮತ್ತು ಯುವ ವಕ್ಕಲಿಗರ ಸಂಘದ ಅಧ್ಯಕ್ಷರು ನೀಡಿರುವ ಹೇಳಿಕೆಯನ್ನು ಹಿಂಪಡೆಯದಿದ್ದರೆ, ದಲಿತ ಸಮುದಾಯವನ್ನು ಕ್ಷಮೆಯಾಚಿಸಬೇಕು. ಇಲ್ಲವಾದರಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿ, ದಲಿತ ಸಂಘಟನೆಗಳ ವಿರುದ್ಧ ಮಾತನಾಡುವಾಗ ದಾಖಲೆಯನ್ನು ಒದಗಿಸಬೇಕು. ಎಸ್.ಸಿ,ಎಸ್.ಟಿ. ಕಾಯ್ದೆಯನ್ನು ಯಾರು ದುರುಪಯೋಗ ಪಡಿಸಿಕೊಂಡಿದ್ದಾರೆಂಬುದನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿ, ವಕ್ಕಲಿಗರ ಸಂಘದ ಅಧ್ಯಕ್ಷರು ಮತ್ತು ವಕ್ಕಲಿಗರ ಸಂಘದ ಯುವವೇದಿಕೆ ಅಧ್ಯಕ್ಷರು ತಮ್ಮ ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.

ಜಿಲ್ಲೆಯಲ್ಲಿ ವಕ್ಕಲಿಗರ ಯುವತಿಯರ ಮೇಲೆ ದೌರ್ಜನ್ಯಗಳು ನಡೆದಾಗ ಘಟನೆ ಖಂಡಿಸಿ ಹೋರಾಟಕ್ಕೆ ವಕ್ಕಲಿಗರ ಸಂಘದ ಮುಖಂಡರು ಏಕೆ ಮುಂದಾಗಲಿಲ್ಲವೆಂದು ಪ್ರಶ್ನಿಸಿ, ಅಧಿಕಾರ, ಭೂಮಿ, ಆರ್ಥಿಕವಾಗಿ ಸಬಲರಾಗಿದ್ದೇವೆಂದು ಬಾಯಿಗೆ ಬಂದಂತೆ ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಬೇಕು. ದಲಿತ ಸಂಘಟನೆಗಳ ಹಲವಾರು ಇರಬಹುದು ಆದರೆ ಸಂಘಟನೆ ಮೇಲೆ ಆರೋಪ ಬಂದಾಗ ನಾವೆಲ್ಲ ಒಗ್ಗೂಡಿ ಕೆಲಸ ಮಾಡುತ್ತೇವೆಂದು ತಿಳಿಸಿದರು.

ಆಯಾ ಸಮುದಾಯಗಳು ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ನ್ಯಾಯಕ್ಕಾಗಿ ಹಲವು ರೀತಿಯ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ ಪ್ರಚಾರಕ್ಕಾಗಿ ಅನ್ಯರ ಹೇಳಿಕೆ ಮಾತನ್ನು ಕೇಳಿ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಯುವ ವಕ್ಕಲಿಗರ ಸಂಘದ ಅಧ್ಯಕ್ಷ ಸಂದೀಪ್ ವಿವೇಚನೆಯಿಂದ ಮಾತನಾಡಬೇಕು ಎಂದರು.

ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ,ಕೊಲೆ, ಮಾರಣಾಂತಿಕ ಹಲ್ಲೆ ನಡೆದಾಗ ವಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ಯುವ ವಕ್ಕಲಿಗರ ಸಂಘದ ಅಧ್ಯಕ್ಷ ಸಂದೀಪ ಯಾವತ್ತೂ ಧ್ವನಿ ಎತ್ತಿದವರಲ್ಲ ಒಂದು ವೇಳೆ ವಕ್ಕಲಿಗರ ಸಂಘದ ಅಧ್ಯಕ್ಷರು,ಯುವ ವಕ್ಕಲಿಗರ ಸಂಘದ ಅಧ್ಯಕ್ಷರ ಕುಟುಂಬದ ಮೇಲೆ ದೌರ್ಜನ್ಯಗಳು ನಡೆದರೆ ಮೊದಲು ಬೀದಿಗಿಳಿದು ಹೋರಾಟ ಮಾಡುವುದು ದಲಿತ ಸಂಘಟನೆಗಳು ಎಂಬುದನ್ನು ಮನಗಾಣಬೇಕಿದೆ ಎಂದರು.

ಯಾವ ಸಮುದಾಯ ದಲಿತರ ಭೂಮಿ ಕಿತ್ತುಕೊಂಡಿದೆ. ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ ದೆ.ಮಾರಣಾಂತಿಕ ಹಲ್ಲೆ ನಡೆಸಿದೆ ಎಂಬುದು ಜಿಲ್ಲೆಯ ಜನರಿಗೆ ತಿಳಿದಿದೆ. ದೌರ್ಜನ್ಯ ಪ್ರಕರಣ ದಾಖಲಾಗುತ್ತಿ ದ್ದಂತೆ ಕೇಸನ್ನು ವಾಪಸ್ ಪಡೆಯುವಂತೆ ನಾವುಗಳು ಯಾರ ಬಳಿಯೂ ಕೈಮುಗಿದು ಬೇಡಿಕೊಂಡಿಲ್ಲ, ನಮ್ಮ ಮುಂದೆಬೇಡಿಕೊಂಡಿರುವ ನಿದರ್ಶನಗಳು ಬಹಳಷ್ಟಿವೆ ಎಂದು ತಿಳಿಸಿದರು.

ವಕ್ಕಲಿಗರ ಸಂಘದ ಅಧ್ಯಕ್ಷರು ಹೇಳಿರುವಂತೆ ಸಾವಿರಾರು ಎಸ್‌ಸಿ,ಎಸ್‌ಟಿ ಪ್ರಕರಣಗಳು ಬಿ ವರದಿಯಾಗುತ್ತಿವೆ. ಕಾರಣ ಇವರ ಮನಸ್ಥಿತಿಯುಳ್ಳ ಅಧಿಕಾರಿಗಳು ಹಾಗೂ ರಾಜಕಾರಣಿಗಳು,ಕಾನೂನು ವ್ಯವಸ್ಥೆಯನ್ನು ಹಗುರವಾಗಿ ಮಾತನಾಡುವ ವ್ಯಕ್ತಿಗಳಿಂದ ಮತ್ತು ಹಣದಿಂದ ಸತ್ಯದಿಂದ ಮುಚ್ಚಿಹಾಕುವ ಪ್ರಭಾವಿಗಳಿಂದಲೂ ದೌರ್ಜನ್ಯ ಪ್ರಕರಣಗಳು ಬಿ ವರದಿಯಾಗುತ್ತಿವೆ ಎಂದರು.

ಎಸ್.ಡಿ.ಪಿ.ಐ. ಮುಖಂಡ ಅಂಗಡಿ ಚಂದ್ರು ಮಾತನಾಡಿ, ದೌರ್ಜನ್ಯ ಪ್ರಕರಣಗಳು ದಾಖಲಾದಾಗ ಪ್ರಕರಣ ಹಿಂಪಡೆಯುವಂತೆ ಕೈ,ಕಾಲು ಹಿಡಿಯುವ ಹಂತಕ್ಕೆ ಬಂದವರು ಯಾರೇಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯಮಾತನಾಡಿ, ದಲಿತಸಂಘಟನೆಗಳ ಬಗ್ಗೆ ಆರೋಪಮಾಡಿದವರು ದಲಿತ ಪರವಾಗಿ ಹೋರಾಟ ಮಾಡಿದವರಲ್ಲ, ವಕ್ಕಲಿಗ ಸಮುದಾಯದಲ್ಲಿಟ್ಟುಕೊಂಡು ಬಿ.ಕೆ.ಸುಂದರೇಶ್, ರಾಧಾಸುಂದರೇಶ್, ಎಂ.ಎಲ್.ಮೂರ್ತಿ, ಹೆಚ್.ಹೆಚ್. ದೇವರಾಜ್ ಸೇರಿದಂತೆ ಅವರುಗಳು ದಲಿತರಿಗೆ ಅನ್ಯಾಯಾವಾದ ಅವರ ಪರವಾಗಿ ಹೋರಾಟ ಮಾಡಿದ್ದಾರೆ. ಇಲ್ಲೆಯಲ್ಲಿ ಕೋಮು ಸಾಮಾರಸ್ಯ ಹಾಳುಗೆಡವಂತೆ ನೋಡಿಕೊಂಡಿದ್ದಾರೆ. ಈಗಿರುವ ವಕ್ಕಲಿಗರ ಸಂಘದ ಅಧ್ಯಕ್ಷರು, ಯುವ ವಕ್ಕಲಿಗರ ಸಂಘದ ಅಧ್ಯಕ್ಷರು ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಲು ಕೆಲಸಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು. ದಲಿತ ಸಂಘಟನೆ ಜಿಲ್ಲಾಸಂಚಾಲಕ ಪಿ.ಟಿ.ಚಂದ್ರಶೇಖರ್, ಸಂವಿಧಾನ ಸಂರಕ್ಷಣೆ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ದಲಿತ ಸಂಘರ್ಷ ಸಮಿತಿಜಿಲ್ಲಾ ಪ್ರಧಾನ ಸಂಚಾಲಕ ಬಾಚಿಗನಹಳ್ಳಿ ಮಂಜಯ್ಯ ಇದ್ದರು.

Coalition of Dalit organizations demands apology from Dalit community

Share

Leave a comment

Leave a Reply

Your email address will not be published. Required fields are marked *

Don't Miss

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ...

Related Articles

ಮಳೆಗಾಲದಲ್ಲಿ ಟಿಂಬರ್ ಸಾಗಣೆರಸ್ತೆಯಿಂದ ರಸ್ತೆ ಹಾಳು

ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ...

ನಗರಕ್ಕೆ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜು ಸ್ಥಗಿತ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 600 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ...

ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ…?

ಚಿಕ್ಕಮಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (LC-48) ಬದಲಿಗೆ...

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ...