Home namma chikmagalur ರಾಹುಲ್ ಗಾಂಧಿ ಆಪಾದನೆ ಸತ್ಯಕ್ಕೆ ಹತ್ತಿರ
namma chikmagalurchikamagalurHomeLatest News

ರಾಹುಲ್ ಗಾಂಧಿ ಆಪಾದನೆ ಸತ್ಯಕ್ಕೆ ಹತ್ತಿರ

Share
Share

ಚಿಕ್ಕಮಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮಾಡಿರುವ ಆಪಾದನೆ ಸತ್ಯಕ್ಕೆ ಹತ್ತಿರವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಆಗ್ರಹಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಕ್ಕೆ ಹತ್ತಿರವಾದ ಆರೋಪ ಮಾಡಿದರೂ ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರನ್ನೇ ಅಪಹಾಸ್ಯ ಮಾಡುವುದು ನೋಡಿದರೆ ಮತಗಳ್ಳತನ ನಡೆದಿರುವುದು ಸ್ಪಷ್ಟ ಎನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಲೋಕಸಭೆ ವಿರೋಧ ಪಕ್ಷದ ನಾಯಕರು ಆರೋಪ ಮಾಡಿದಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಅಪಹಾಸ್ಯ ಮಾಡುವುದು ಸರಿಯಲ್ಲ. ಮತಗಳ್ಳತನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಕ್ಕು ಕಿತ್ತುಕೊಳ್ಳುವ ಕೆಲಸ. ಜೊತೆಗೆ ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ದೇಶದಲ್ಲಿ ಎಂದು ಇಂಥ ಪರಿಸ್ಥಿತಿ ಬಂದಿರಲಿಲ್ಲ. ನಮ್ಮ ದೇಶದ ಜನಪ್ರತಿನಿಧಿಗಳು ಮತಕದ್ದು ಆಡಳಿತ ನಡೆಸುತ್ತಿದ್ದಾರೆ ಎಂಬುದು ನಾಚಿಕೆಗೇಡಿನ ಸಂಗತಿ. ದೇಶದ ವಿವಿಧ ರಾಜ್ಯಗಳಲ್ಲಿ ಎನ್​ಡಿಎ ಅಭ್ಯರ್ಥಿಗಳು ಮತಕದ್ದು ಗೆದ್ದಿರುವ ಸಾಧ್ಯತೆಯಿದೆ. ಚುನಾವಣಾ ಆಯೋಗ ಏನ್ಡಿಎ ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಿರುವ ಅನುಮಾನವಿದೆ ಎಂದು ಆರೋಪಿಸಿದರು.

ಬೂತ್ ಮಟ್ಟದಲ್ಲಿ ಬಿಎಲ್ಓ ನೇಮಕ ಮಾಡುವುದು ಚುನಾವಣಾ ಆಯೋಗವೇ ಹೊರತು ಸ್ಥಳೀಯ ಸರ್ಕಾರಗಳಲ್ಲ. ಇದನ್ನು ಅರಿಯದ ಬಿಜೆಪಿ ನಾಯಕರು ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ರಾಜ್ಯದ ವಿಧಾನಸಭೆಯಲ್ಲಿ 138 ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಇಲ್ಲಿ ಮತಗಳ್ಳತನ ನಡೆದಿದ್ದರೆ ಬಿಜೆಪಿ ನಾಯಕರು ಸಾಬೀತು ಪಡಿಸಲಿ. ಯಾವುದೇ ರೀತಿಯ ತನಿಖೆಯನ್ನಾದರೂ ಮಾಡಿಸಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಅತೀಕ್, ಇಂದಾವರ ಲೋಕೇಶ್, ಪ್ರಕಾಶ್ ರೈ, ಸಣ್ಣಪ್ಪ, ಸಂತೋಷ್ ಲಕ್ಯಾ ಉಪಸ್ಥಿತರಿದ್ದರು.

ಮತಗಳ್ಳತನದ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಹುಚ್ಚಾಸ್ಪತ್ರೆಯಿಂದ ಬಂದಿದ್ದಾರೆ ಎಂದು ಜಿಲ್ಲೆಯ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ. ಆದರೆ ಹೀಗೆ ಹೇಳುವವರಿಗೆ ಮಾನಸಿಕ ಸ್ಥಿಮಿತತೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಅವರು ಸಿ.ಟಿ‌.ರವಿ ಅವರಿಗೆ ತಿರುಗೇಟು ನೀಡಿದರು.

ಸಿ.ಟಿ.ರವಿ ಅವರು ಇದುವರೆಗೆ ಒಂದೇ ಒಂದು ಸತ್ಯವನ್ನು ಮಾತನಾಡಿಲ್ಲ. ಯಾವಾಗಲೂ ವಿವೇಚನೆ ಇಲ್ಲದೆ ಅವಿವೇಕಿಯಂತೆ ಮಾತನಾಡುತ್ತಾರೆ. ಬಿಜೆಪಿಯಲ್ಲಿ ಯಾರಾದರೂ ಮಾನಸಿಕ ಅಸ್ವಸ್ಥರಿದ್ದಾರೆ ಅದು ಸಿ.ಟಿ.ರವಿ ಮಾತ್ರ ಎಂದು ಕಿಡಿಕಾರಿದರು.

Rahul Gandhi’s allegation is close to the truth

 

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಆದರೆ, ನಮ್ಮ ರಾಜ್ಯ ಸರ್ಕಾರ ಈಗಾಗಲೇ ತನ್ನ ಪಾಲಿನ ೧೨,೦೦೦...

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಿಜೆಪಿ ರಾಜಕೀಯ

ಕಡೂರು: ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಸಚಿವ ರಾಮಲಿಂಗಾರೆಡ್ಡಿ ಅವರು ರಾಜಕೀಯ ವಲಯದ ಪ್ರಮುಖ ವಿದ್ಯಮಾನಗಳು, ರಾಜ್ಯದ ಜಲವಿವಾದ ಹಾಗೂ ಸಚಿವ ಸಂಪುಟ ವಿಸ್ತರಣೆಯ ಕುರಿತಾಗಿ ಮಾಧ್ಯಮಗಳ ಎದುರು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ....

Related Articles

ವಾಹನ ಡಿಕ್ಕಿಗೆ ಬೈಕ್ ಸವಾರ ಸಾವು

ಬೀರೂರು: ಕಡೂರು ತಾಲ್ಲೂಕಿನ ಹೇಮಗಿರಿ ಗೇಟ್ ಬಳಿಯ ಜಮೀನಿನಲ್ಲಿ ಕೆಲಸ ಮುಗಿಸಿ, ಅಜ್ಜಂಪುರ ಕಡೆಗೆ ಬೀರೂರು...

ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ

ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ...

ದನ ಅಕ್ರಮ ಸಾಗಾಟ: ಪ್ರಕರಣ ದಾಖಲು

ಅಲ್ಲೂರು: ಇಲ್ಲಿಗೆ ಸಮೀಪದ ಹಾಂದಿಯ ಅಂಬೇಡ್ಕರ್ ವೃತ್ತದ ಬಳಿಯ ರಜಾ ಕ್ಯಾಂಟೀನ್ ಎದುರು 5 ವರ್ಷ...

ಅಕ್ರಮ ನುಸುಳುಕೋರರ ಮತಪಟ್ಟಿಗೆ ದಾಖಲಿಸದಂತೆ ಕ್ರಮವಹಿಸಿ

ಚಿಕ್ಕಮಗಳೂರು: ಎಸ್‌ಐಆರ್ ಸಂಬಂಧ ಬಿಎಲ್‌ಒ೨ಗಳು ಪಕ್ಷದ ಮತದಾರರನ್ನು ಪಟ್ಟಿ ಯಿಂದ ಕೈಜಾರದಂತೆ ಗಮನಹರಿಸುವ ಜೊತೆಗೆ ಅಕ್ರಮ...