ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ಸರ್ಕಾರದಿಂದ ಬರುವ ಅನುದಾನವನ್ನು ನೇರವಾಗಿ ಗ್ರಾಮ ಪಂಚಾಯಿತಿಗೆ ನೀಡಬೇಕು. ಜೊತೆಗೆ ಜಿಪಂ ಹಾಗೂ ತಾಪಂಗೆ ಚುನಾವಣೆಯನ್ನು ಶಾಶ್ವತವಾಗಿ ನಡೆಸಬಾರದು ಎಂದು ಮಳಲೂರು ಏತ ನೀರಾವರಿ ಹೋರಾಟಗಾರ ಸೋಮೇಗೌಡ ಒತ್ತಾಯಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರೀಕರಣ ಗ್ರಾಮಗಳ ಅಭಿವೃದ್ಧಿಗಾಗಿ ರೂಪಿಸಲಾಗಿದೆ. ಹೀಗಾಗಿ ಎಲ್ಲಾ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು ಎಂದು ಹೇಳಿದರು.
ಜಿಪಂ ಹಾಗು ತಾಪಂಗಳಿಗೆ ಚುನಾವಣೆ ನಡೆದರೆ ಹಣ ಖರ್ಚು ಮಾಡಿ ಗೆದ್ದು ಬರುವ ಜನಪ್ರತಿನಿಧಿಗಳು ಭ್ರಷ್ಟಾಚಾರ ನಡೆಸಿ ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಆಗದಂತೆ ಮಾಡುತ್ತಾರೆ. ಇದರ ಬದಲು ಜಿಪಂ ಅನ್ನು ಕೇವಲ ಆಡಳಿತ ವರ್ಗದ ಅಧಿಕಾರಿಗಳು ನಡೆಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಅನುದಾನವನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು ಎಂದು ಆಗ್ರಹಿಸಿದರು.
ಜನಪ್ರತಿನಿಧಿಗಳ ಹಣದ ದಾಹದಿಂದ ಸಾವಿರಾರು ಕೆಲಸಗಳು ಗ್ರಾಮೀಣ ಮಟ್ಟದಲ್ಲಿ ಕಳಪೆಯಾಗಿ ನನೆಗುದಿಗೆ ಬಿದ್ದಿವೆ. ಹೀಗಾಗಿ ಅಭಿವೃದ್ಧಿಯೆಂಬುದು ಮರೀಚಿಕೆಯಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿದ್ದ ಗ್ರಾಮ ಸ್ವರಾಜ್ಯ ದೇಶದಲ್ಲಿ ಜಾರಿಗೆ ಬರಬೇಕಾದರೆ ಈ ವ್ಯವಸ್ಥೆ ಮೊದಲು ಜಾರಿಯಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಳಲೂರು ಏತ ನೀರಾವರಿ ಹೋರಾಟಗಾರರಾದ ಟಿ.ಎಲ್. ಗಣೇಶ್, ಸೋಮೇಗೌಡ ಉಪಸ್ಥಿತರಿದ್ದರು.
Elections to Zilla Parishad and TPA should not be held permanently.
Leave a comment