Home Latest News ಪೌಷ್ಠಿಕ ಆಹಾರ – ಗುಣಮಟ್ಟದ ಶಿಕ್ಷಣ ಪೂರೈಸುತ್ತಿರುವುದು ಶ್ಲಾಘನೀಯ
Latest NewschikamagalurHomenamma chikmagalur

ಪೌಷ್ಠಿಕ ಆಹಾರ – ಗುಣಮಟ್ಟದ ಶಿಕ್ಷಣ ಪೂರೈಸುತ್ತಿರುವುದು ಶ್ಲಾಘನೀಯ

Share
Share

ಚಿಕ್ಕಮಗಳೂರು: ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಮಾದರಿಯ ತರಗತಿಗಳನ್ನು ತೆರೆದು ಪೌಷ್ಠಿಕ ಆಹಾರ ಮತ್ತು ಗುಣಮಟ್ಟದ ಶಿಕ್ಷಣ ಪೂರೈಸುತ್ತಿರುವುದು ಶ್ಲಾಘನೀಯ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.

ತಾಲ್ಲೂಕಿನ ಮುಗುಳುವಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು, ಸ್ಥಳೀಯರು ಹಾಗೂ ಶಾಲಾಡಳಿತ ಸಹಕಾರದಿಂದ ೨೦೨೫-೨೬ ನೇ ಸಾಲಿನ ಆಂಗ್ಲ ಮತ್ತು ಕನ್ನಡಮಾಧ್ಯಮ ಎಲ್‌ಕೆಜಿ-ಯುಕೆಜಿ ತರಗತಿಗಳಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪಾಲಕರ ಆಶಯದಂತೆ ಗ್ರಾಮೀಣ ಭಾಗದಲ್ಲೂ ಎಲ್‌ಕೆಜಿ-ಯುಕೆಜಿ ತರಗತಿ ತೆರೆದು ಹೆಜ್ಜೆಯಿಟ್ಟಿರುವ ಮುಗುಳುವಳ್ಳಿ ಶಾಲೆ ಮೆಚ್ಚುವಂತ ಕೆಲಸ. ಎಳೆವಯಸ್ಸಿನಲ್ಲಿ ಮಕ್ಕಳನ್ನು ತಿದ್ದುವ ಮಹಾತ್ತರ ಕಾರ್ಯ ಶಿಕ್ಷಕರ ಮೇಲಿರುವ ಕಾರಣ ಹೆಚ್ಚಿನ ಜವಾಬ್ದಾರಿಯನ್ನು ಶಾಲಾಡಳಿತ ವಹಿಸಬೇಕು ಎಂದು ಸೂಚಿಸಿದರು.

ಪ್ರಸ್ತುತ ಅಂಗನವಾಡಿ ಕೇಂದ್ರಗಳಲ್ಲಿ ಪುಟ್ಟ ಮಕ್ಕಳ ಆರೈಕೆ ಮಾಡಲಾಗುತ್ತಿದೆ. ಕಾಲಕ್ರಮೇಣ ಖಾಸಗೀ ಶಾಲೆಗಳು ಬೆಳೆದಂತೆ ಪ್ರತಿ ತರಗತಿಗಳನ್ನು ಪ್ರಾರಂಭಿಸುತ್ತಿರುವ ಕಾರಣ ಸರ್ಕಾರಿ ಶಾಲೆಗಳನ್ನು ಕ್ಷೀಣಿಸಲಾರ ಂಭಿಸಿದವು. ಇದೀಗ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತೆರೆದು ಶಾಲೆಗಳನ್ನು ಉಳಿಸುವಂಥ ಕೆಲಸ ಸ್ಥಳೀಯರು ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ರಾಜ್ಯಸರ್ಕಾರ ಕಳೆದ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಜಿಕೆ ಆರಂಭಿಕವಾಗಿ ತೆರೆದು ಯಶಸ್ವಿಗೊಂಡಿತು. ಈ ಸಾಲಿನಲ್ಲಿ ತರಗತಿ ತೆರೆಯಲು ಪ್ರಕ್ರಿಯೆಯಲ್ಲಿದ್ದು ಸದ್ಯದಲ್ಲೇ ಸಂಬಂಧಿಸಿದ ಸಚಿವ ರೊಂದಿಗೆ ಭೇಟಿ ಮಾಡಿ ಗ್ರಾಮೀಣ ಬಡಮಕ್ಕಳಿಗೆ ಖಾಸಗೀ ಶಾಲೆಗಳಂತೆ ಎಲ್ಲಾ ಸೌಕರ್ಯಗಳನ್ನು ಒದಗಿ ಸುವುದಾಗಿ ಭರವಸೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಹಾಗೂ ಪರಿಸರವನ್ನು ಅಚ್ಚುಕಟ್ಟಾಗಿರಬೇಕು. ಮಕ್ಕಳಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಮನುಷ್ಯನಿಗೆ ಶಿಕ್ಷಣವಿಲ್ಲದಿದ್ದರೆ ಯಾರು ಬೇಕಾದರೂ ಯ ಮಾರಿಸಬಹುದು. ಶಿಕ್ಷಣವೆಂಬ ದೊಡ್ಡಅಸ್ತ್ರ ಕೈಯಲಿದ್ದಾರೆ ದಾರಿತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳು ವಿದ್ಯಾವಂತರಾಗಬೇಕು ಎಂದು ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ.ರವೀಶ್ ಮಾತನಾಡಿ ತಾಲ್ಲೂಕಿನಲ್ಲಿ ಸುಮಾರು ೨೭ ಶಾಲೆಗಳಲ್ಲಿ ಎಲ್ ಕೆಜಿ-ಯುಕೆಜಿ ತರಗತಿ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದ್ದು ಅನುದಾನ ಬಿಡುಗಡೆಗೊಳ್ಳಬೇಕಿದೆ. ಅಲ್ಲದೇ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಸರಿದೂಗಿಸಲು ಅತಿಥಿ ಶಿಕ್ಷಕ ವರ್ಗವನ್ನು ನೇಮಿಸಿಕೊಂಡು ಸಮಗ್ರ ವಿದ್ಯಾಭ್ಯಾಸ ಪೂರೈಸುತ್ತಿದೆ ಎಂದರು.

ಇತ್ತೀಚೆಗೆ ಕಡುಬಡವನು ನೆರೆಯವರ ವ್ಯಾಮೋಹದಿಂದ ಖಾಸಗೀ ಶಾಲೆಗೆ ದಾಖಲಿಸಿ ಶುಲ್ಕ ಕಟ್ಟಲು ಒದ್ದಾಡುವ ಸ್ಥಿತಿಯಿದೆ. ಈ ನಡುವೆ ಸರ್ಕಾರಿ ಶಾಲೆ ಶಿಕ್ಷಣ, ಸಮವಸ್ತ್ರ ಸೇರಿದಂತೆ ಸಕಲ ಸವಲತ್ತನ್ನು ಉಚಿ ತವಾಗಿ ನೀಡಿದರೂ ಬರುತ್ತಿಲ್ಲ. ಈ ಬಗ್ಗೆ ಪೋಷಕರು ಎಚ್ಚೆತ್ತುಕೊಂಡು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಕು ಎಂದು ಸಲಹೆ ಮಾಡಿದರು.

ಶಾಲೆಯ ಮುಖ್ಯೋಪಾಧ್ಯಾಯ ಶೇಖರ್‌ನಾಯ್ಕ ಮಾತನಾಡಿ ಪ್ರಸ್ತುತ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಗೆ ೧೬ ಮತ್ತು ಯುಕೆಜಿಗೆ ೧೭ ಮಕ್ಕಳು ದಾಖಲಾಗಿದ್ದಾರೆ. ಜೊತೆಗೆ ಈರ್ವರು ಶಿಕ್ಷಕರು, ಓರ್ವ ಆಯಾ ಕೆಲಸ ಕ್ಕೆ ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾಗಿದ್ದು ಮಕ್ಕಳಿಗೆ ಸಮವಸ್ತ್ರ, ಬ್ಯಾಗ್, ಶೂ, ಲೇಖನಿ, ನೋಟ್‌ಪುಸ್ತಕ ಹಾಗೂ ಶಿಕ್ಷಕರಿಗೆ ವೇತನದ ಸಂಪೂರ್ಣ ವೆಚ್ಚವನ್ನು ದಾನಿ, ಸ್ಥಳೀಯರು ಹಾಗೂ ಶಾಲಾಡಳಿತ ವಹಿಸಿ ಕೊಂಡಿದೆ ಎಂದರು.

ಅಂಬಳೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ ರಾಜ್ಯಸರ್ಕಾರ ಗ್ರಾಮೀಣ ಮ ಕ್ಕಳು ಶಿಕ್ಷಣದಿಂದ ವಂಚಿತರಾಗದೇ ಮೂಲಸವಲತ್ತು ನೀಡಿ ಪ್ರೋತ್ಸಾಹಿಸುತ್ತಿದೆ. ಆ ಹಿನ್ನೆಲೆ ಪಾಲಕರು ಯಾ ವುದೇ ವ್ಯಾಮೋಹಕ್ಕೆ ಒಳಗಾಗದೇ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು ಎಂದ ಅವರು ದೇಶದ ಗಣ್ಯರು ಬದುಕಿನಲ್ಲಿ ಸಾಧನೆ ಮಾಡಲು ಸರ್ಕಾರಿ ಶಾಲೆಗಳು ಕಲಿತಂಥ ವಿದ್ಯೆಯೇ ಕಾರಣ ಎಂದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ರೂಪ, ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಡಿ.ರವಿ, ಪಿಡಿಓ ಸುಮಾ, ಅಕ್ಷರ ದಾಸೋಹ ಸಂಯೋಜಕ ನೀಲಕಂಠಪ್ಪ, ದೈಹಿಕ ಶಿಕ್ಷಣ ಪರವೀಕ್ಷಕ ಶೇರ್‌ಆಲಿ, ಶಾಲಾ ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Providing nutritious food and quality education is commendable.

Share

Leave a comment

Leave a Reply

Your email address will not be published. Required fields are marked *

Don't Miss

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಸೋಮವಾರ ಕೆರೆಯ...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನೊಂದ ಕುಟುಂಬಕ್ಕೆ ಸರ್ಕಾರಿ ಹುದ್ದೆ ಕಲ್ಪಿಸಿಕೊಡಬೇ ಕು ಎಂದು ಆಗ್ರಹಿಸಿ ದಸಂಸ ಮುಖಂಡರುಗಳು...

Related Articles

ನಗರದಲ್ಲಿ ಅವಿಧಿ ಮುಗಿದ ಚಾಕೊಲೇಟ್ ಸಾಸ್ ಬಳಸಿ ಕೇಕ್ ….?

ಚಿಕ್ಕಮಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್‌ ಹಾಗೂ ಬೇಕರಿಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ...

ಬಿಜೆಪಿ-ಸಂಘಪರಿವಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ಉತ್ತರಾಖಾಂಡ ರಾಜ್ಯದ ಹಾಲದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು...

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ...

ರಾಷ್ಟ್ರಧ್ವಜ ಅವಮಾನ ಆರೋಪ: ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ, ಮಧ್ಯಾಹ್ನದ ವೇಳೆಗೆ ಧ್ವಜವನ್ನು ಅವರೋಹಣ ಮಾಡಿರುವ ಘಟನೆಗೆ...