ಚಿಕ್ಕಮಗಳೂರು: ಸಂಸಾರದಲ್ಲಿ ಬಿರುಕು ಮತ್ತು ಅನೈತಿಕ ಸಂಬಂಧ ಹಿನ್ನಲೆ ಹೆಂಡತಿಯೇ ಗಂಡನನ್ನು ಕೊಲೆ ಮಾಡಿರುವ ಘಟನೆ ನರಸಿಂಹರಾಜಪುರ ತಾಲೂಕಿನಲ್ಲಿ ನಡೆದಿದ್ದು, ೨೪ಗಂಟೆಯಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಕಡುಹಿನಬೈಲು ಗ್ರಾಮದ ಕುರುಗುಂದ ಬಸ್‌ನಿಲ್ದಾಣದ ಸಮೀಪ ಅನುಮಾನಸ್ಪವಾಗಿ ವ್ಯಕ್ತಿ ಸಾವುನಪ್ಪಿದ್ದು, ಪ್ರಕರಣ ದಾಖಲಿ ಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ನರಸಿಂಹರಾಜಪುರ ಪಟ್ಟಣದ ಸುದರ್ಶನ್ ಮೃತ ವ್ಯಕ್ತಿ ಎಂದು ಗುರುತಿಸಿ, ಸುದರ್ಶನ್ ಹೆಂಡತಿ ಕಲಮ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
ಕಮಲ-ಸುದರ್ಶನ್ ಕಳೆದ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು, ಮಕ್ಕಳು ಇದ್ದಾರೆ. ಆದರೆ, ಸಂಸಾರದಲ್ಲಿ ಹೊಂದಾಣಿಕೆ ಬಾರದೆ ಕಮಲ ಅನೇಕ ವರ್ಷಗಳಿಂದ ಪರಿಚಯಸ್ಥನಾಗಿದ್ದ ಶಿವರಾಜ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಮೇ.೨೩ರಂದು ಶಿವರಾಜ್ ಹಾಗೂ ಇತರರ ಜತೆ ಸೇರಿ ಮೇ.೨೩ರಂದು ನರಸಿಂಹರಾಜಪುರ ಕರುಗುಂದ ಬಸ್ ನಿಲ್ದಾಣ ಸಮೀಪ ರಾತ್ರಿ ೯ಗಂಟೆ ವೇಳೆ ನಾಲ್ವರು ಸೇರಿ ಸುದರ್ಶನ್‌ಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಸೇರಿಸಿ ಕುಡಿಸಿ ಪ್ರಜ್ಞೆ ತಪ್ಪಿದಾಗ ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಸ್.ಶಿವರಾಜ್, ಬಿ.ಆರ್.ಹರೀಶ್, ಬಿ.ಎಸ್.ಚನ್ನಕೇಶವ, ಕೃತ್ಯಕ್ಕೆ ಪ್ರಚಫದನೆ ನೀಡಿದ ಸುದರ್ಶನ್ ಹೆಂಡತಿ ಕಮಲ ಅವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ವ್ಯಾಗನರ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ನರಸಿಂಹರಾಜಪುರ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಎಸ್.ನಿರಂಜನ ಗೌಡ, ಜ್ಯೋತಿ, ಸಿಬ್ಬಂದಿಗಳಾದ ನಾಗರಾಜ್, ಅಮಿತ್ ಚೌಗುಲೆ, ಕೆ.ಸೋಮೇಶ್, ಮಧು, ಈಶ್ವರಪ್ಪ, ಯುಗಾಂಧರ್, ಶಿವರುದ್ರಪ್ಪ, ಬಿಂದು, ಕೌಶಿಕ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.
Immoral relationship: Wife murders husband
Leave a comment