ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಇದೆಯೇ ಇಲ್ಲವೊ ಗೊತ್ತಾಗುತ್ತಿಲ್ಲ.ಇದ್ದರೆ ಇಲಾಖೆಯನ್ನು ಹರಾಜ್ ಹಾಕಿ ಕುಳಿತು ಹಿಗ್ಗಾ,ಮುಗ್ಗಾ ತಿನ್ನುತ್ತಿರಬೇಕು.ಬಕಾಸುರರೇ ತುಂಬಿರುವ ಇಲಾಖೆಯವರಿಗೆ ಜಿಲ್ಲೆಯ ಇಬ್ಬರು ಶಾಸಕರು ಕುಮ್ಮಕ್ಕು ಕೊಡುತ್ತಿದ್ದಾರೆ.ಜೊತೆಗೆ ಕಾನೂನು ಬಾಹಿರವಾಗಿ ಸಿ.ಎಲ್.ಸೆವೆನ್ ಲೈಸೆನ್ಸ್ ಪಡೆದುಕೊಂಡಿದ್ದಾರೆ.ಇದರಿಂದಾಗಿ ಗ್ರಾಹಕರ ಜೇಬಿಗೆ ಒಳ ಕತ್ತರಿ ಬೀಳುತ್ತಿದೆ.ಕತ್ತರಿ ಇನ್ನೂ ಸ್ವಲ್ಪ ಮುಂದಕ್ಕೆ ಹೋದರೆ ಗ್ರಾಹಕನೇ ಸಾಯುತ್ತಾನೆ.
ಇಲಾಖೆ ಕುಡಿತದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಬದಲು ಕುಡಿಯಿರಿ,ಕುಡಿಯಿರಿ ಎಂದು ಹಳ್ಳಿ, ಹಳ್ಳಗಳಿಗೆ ಮನೆ,ಮನೆಗಳಿಗೆ ಬಾಟಲ್ ಸರಬರಾಜು ಮಾಡುತ್ತಿದ್ದಾರೆ.ಇನ್ನೂ ಸ್ವಲ್ಪ ದಿನ ಕಳೆದರೆ ಓಡಾಡುವ ಜನರ ಕಿಸಿಗಳಿಗೆ ಬಾಟಲ್ ಇಟ್ಟರು ಆಶ್ಚರ್ಯ ಪಡುವಂತಿಲ್ಲ.ಅದಕ್ಕೆ ಸರಿಯಾಗಿ ಸರ್ಕಾರ ಆರು ತಿಂಗಳು ಮೂರು ತಿಂಗಳಿಗೆ ಬೆಲೆ ಹೆಚ್ಚಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.
ಸರ್ಕಾರಕ್ಕೆ ಆದಾಯ ತರುವ ಪ್ರಮುಖ ಇಲಾಖೆ ಇದಾಗಿರುವುಂದರಿಂದ ಇಲ್ಲಿ ಹೇಳುವರು ಇಲ್ಲ, ಕೇಳುವವರು ಇಲ್ಲ. ದುಡ್ಡು, ದುಡ್ಡು ,ದುಡ್ಡು ಎಂದು ಅಧಿಕಾರಿಗಳು ಮತ್ತು ನೌಕರರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.
ಹಗಲು ರಾತ್ರಿ ಎನ್ನದೆ ಕೆಲ ಅಂಗಡಿಗಳು ಕಾಲ ಮಿತಿ ಇಲ್ಲದೆ ನಡೆಯುತ್ತಿವೆ.ಇವುಗಳಿಗೆ ನೀತಿ, ನಿಯಮ ಇಲ್ಲವೆ ಇಲ್ಲ. ಚಿಕ್ಕಮಗಳೂರು ಹೊರ ಭಾಗದಲ್ಲಿ ಇರುವ ಮತ್ತು ಕಡೂರು ತರೀಕೆರೆಯಲ್ಲಿ ಎಗ್ಗಿಲ್ಲದೆ ಬಾಗಿಲು ತೆರೆದಿರುತ್ತವೆ.ಇಲಾಖೆಯವರು ಮಾರಾಟ ಮಾಡಿ,ಮಾಡಿ ಎನ್ನುತ್ತಿರುವಾಗ ಇಲಾಖೆಯ ಭಯ ಇಲ್ಲವೇ ಇಲ್ಲ. ಇಲಾಖೆಯವರ ಜೇಬು ತುಂಬಿದರೆ ಸಾಕು.ಇನ್ನೂ ಕೇಳುವವರು ಯಾರು ?
ಒಂದೊಂದು ಅಂಗಡಿಯಲ್ಲಿ ಒಂದೊಂದು ರೇಟ್ ತರೀಕೆರೆ ಮತ್ತು ಕಡೂರಿನಲ್ಲಿ ಬಾಯಿಗೆ ಬಂದಷ್ಟು ರೇಟ್ ಎಂ,ಆರ್,ಪಿ.ಎಂದು ಬೋರ್ಡ್ ಮಾತ್ರ ಇರುತ್ತವೆ .ಕೊನೆಗೆ ಇಲಾಖೆಯವರು ಹೋಗಿ ಕೇಳಿದರೂ ನಿಮಗೂ ಅಷ್ಟೇ ರೇಟ್ ಎನ್ನುವುದು ಗ್ಯಾರಂಟಿ.
ಪ್ರವಾಸಿಗರು ಹೆಚ್ಚು ಬರುತ್ತಿರುವುದರಿಂದ ಸಿಎಲ್ ಸೆವೆನ್ ಲೈಸೆನ್ಸ್ ಪಡೆಯುತ್ತಿದ್ದು ಇವುಗಳಿಗೆ ಯಾವ ಕಾನೂನು ಬೇಡ ಶಾಸಕರಿಗೆ ಕೊಟ್ಟರೆ ಸಾಕು ಇಲ್ಲ ಅವರ ಮನೆಯವರನ್ನು ಪಾರ್ಟ್ನರ್ಸ್ ಮಾಡಿಕೊಂಡರೆ ಮುಗಿಯಿತು.ಮತಿಗೆಟ್ಟ ರಾಜಕಾರಣಿಗಳಿಗೆ ಬುಕಿಟ್ ಹಿಡಿಯುವ ಅಧಿಕಾರಿಗಳು ಕೈ ಜೋಡಿಸಿರುವುದು ಗ್ರಾಹಕರ ತಲೆ ಹೊಡೆಯುತ್ತಿದ್ದಾರೆ.ಬಿಗಿ ಹಿಡಿತದ ಜಿಲ್ಲಾಧಿಕಾರಿಯವರ ಗಮನಕ್ಕೆ ಬಾರದಿರುವುದು ಸೋಜಿಗದ ವಿಷಯ.ಇನ್ನಾದರು ಜಿಲ್ಲಾಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಲಿ.
Auction at Chikmagalur Excise Department
Leave a comment