Home Latest News ಕೆಎಸ್ಆರ್ ಟಿಸಿ ಕಚೇರಿ ಸಿಬ್ಬಂದಿಗಳನ್ನು ಕೂಡಿ ಹಾಕಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
Latest News

ಕೆಎಸ್ಆರ್ ಟಿಸಿ ಕಚೇರಿ ಸಿಬ್ಬಂದಿಗಳನ್ನು ಕೂಡಿ ಹಾಕಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

Share
Share
  1. ಚಿಕ್ಕಮಗಳೂರು : ಹಾಸನದ ಜನ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಹೋದ ಹಿನ್ನೆಲೆ ಬಸ್ ಗಳ ಕೊರತೆಯಿಂದ ಪ್ರಯಾಣಿಕರು ಪರದಾಡಿದ್ದು ರೊಚ್ಚಿಗೆದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೆಎಸ್ಆರ್ ಟಿಸಿ ಮುಖ್ಯ ಕಚೇರಿ ಸಿಬ್ಬಂದಿಗಳನ್ನು ಕೂಡಿ ಹಾಕಿ ಬೀಗ ಹಾಕಿದ ಘಟನೆ ಇಂದು ಸಂಜೆ ನಡೆದಿದೆ.

ಹಾಸನ ಸಮಾವೇಶಕ್ಕೆ ಜನರು ತೆರಳಲು ಬಸ್ ಗಳು ಹೋಗಿದ್ದರಿಂದ ಚಿಕ್ಕಮಗಳೂರಿನಲ್ಲಿ ಕೆಎಸ್ಆರ್ ಟಿಸಿ ಬಸ್ ಗಳ ಕೊರತೆ ಉಂಟಾಗಿ ಸಂಜೆ ವೇಳೆಗೆ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡ ಬೇಕಾಯಿತು ಗಂಟೆ ಗಟ್ಟಲೇ ಕಾದರು ಬಸ್ ಗಳು ಬಾರದ ಕಾರಣ ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದರು.

ಸಾರ್ವಜನಿಕರ ಜೊತೆಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬಿಜೆಪಿ ಯುವ ಮೋರ್ಚಾ ಸೇರಿದಂತೆ ಹಲವು ಸಂಘಟನೆಗಳ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಬಸ್ ಗಳನ್ನು ಬಿಡಬೇಕು ಎಂದು ಪಟ್ಟು ಹಿಡಿದು ಕುಳಿತರು ಗಂಟೆ ಗಟ್ಟಲೇ ಪ್ರತಿಭಟಿಸಿದರೂ ಬಸ್ ಗಳು ಬಾರದ ಕಾರಣ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ನೌಕರರು ಒಳಗೆ ಇರುವಾಗಲೇ ಕಚೇರಿಯ ಬಾಗಿಲು ಮುಚ್ಚಿ ಬೀಗ ಹಾಕಲಾಯಿತು. ‌

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಕಾರ್ಯದರ್ಶಿ ಸಚಿನ್ ಕುಮಾರ್ ಸೇರಿದಂತೆ ಹಲವರು ರಾಜ್ಯ ಸರ್ಕಾರ ಸಿ.ಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು ಎಲ್ಲ ಮಾಯ ನಾಳೆ ಬಸ್ಸು ಮಾಯ ಎನ್ನುತ್ತಾ ಖಾಲಿ ಖಾಲಿ ಬಸ್ ಖಾಲಿ ಸಿದ್ದರಾಮಯ್ಯ ಜಾಲಿ, ಜಾಲಿ ಜಾಲಿ ಎಂದು ವ್ಯಂಗ್ಯ ಮಾಡಿದರು. ನಗರ ಪೊಲೀಸ್ ಠಾಣೆ ಪ್ರಭಾರ ಇನ್ಸ್ಪೆಕ್ಟರ್ ಸಚಿನ್ ಕುಮಾರ್ ಹಾಗೂ ಸಿಬ್ಬಂದಿ ಪ್ರತಿಭಟನಾ ಕಾರರನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟರು

Share

Leave a comment

Leave a Reply

Your email address will not be published. Required fields are marked *

Don't Miss

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಕಂಸಾಗರ ಗ್ರಾಮದ ಕೆಂಚಪ್ಪ...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಕಚೇರಿ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿದೆ ಎಂಬ ಆರೋಪ...

Related Articles

ಕಾಫಿಕಿಂಗ್ ಸಿದ್ಧಾರ್ಥಹೆಗ್ಗಡೆ ಹೆಸರು ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಬೇಕಿದೆ

ಮೂಡಿಗೆರೆ: ಕಾಫಿ ಡೇ ಮಾಲೀಕ ದಿವಂಗತ ವಿ.ಜಿ.ಸಿದ್ಧಾರ್ಥ ಹೆಗ್ಗಡೆ ಅವರು ತಮ್ಮ ಸಂಪೂರ್ಣ ಜೀವನವನ್ನು ಕಾಫಿ...

ವಿಮಾನ ನಿಲ್ದಾಣಕ್ಕಾಗಿ ಜಮೀನ ಸ್ವಾಧೀನಕ್ಕೆ ರೈತರ ವಿರೋಧ

ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿರುವ ಪ್ರದೇಶ ಕೃಷಿ ಅವಲಂಬಿತವಾಗಿದ್ದು, ಅತ್ಯಂತ...

ಎತ್ತಿನಭುಜ ಚಾರಣದಕ್ಕೆ ಟ್ರಕ್ಕಿಂಗ್‌ ಬಂದು ಸಮಸ್ಯೆ ಎದುರಿಸುತ್ತಿರುವ ಪ್ರವಾಸಿಗರು

ಮೂಡಿಗೆರೆ : ವಾರಾಂತ್ಯದ ಮಜಾ ಕಳೆಯಲು ಬೆಟ್ಟಗುಡ್ಡಗಳತ್ತ ಮುಖ ಮಾಡಿದ ಚಾರಣಪ್ರಿಯರಿಗೆ ನಿರಾಶೆಯ ಜೊತೆಗೆ ಕಾಡಿನ...

₹1.39 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಅಜ್ಜಂಪುರ: ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೀರುವಿನ ಲಾಕರ್‌ನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು...