Home Political News ಶೂನ್ಯವೀರ ಎಂ.ಕೆ ಪ್ರಾಣೇಶ್ : ಕೈಗೆ ಸಿಗದ ಅಪರೂಪದ ಅತಿಥಿ
Political News

ಶೂನ್ಯವೀರ ಎಂ.ಕೆ ಪ್ರಾಣೇಶ್ : ಕೈಗೆ ಸಿಗದ ಅಪರೂಪದ ಅತಿಥಿ

Share
Share

 

ಚಿಕ್ಕಮಗಳೂರು : ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಸತತವಾಗಿ ಎರಡು ಬಾರಿ ವಿಧಾನ ಪರಿಷತ್ ಗೆ ಅಯ್ಕೆಯಾಗುವುದರ ಮೂಲಕ ದಾಖಲೆ ಬರೆದ ಪ್ರಾಣೇಶ್ ಏನು ಕೆಲಸ ಮಾಡಲಿಲ್ಲ ಎಂಬ ದಾಖಲೆ ಬಿಟ್ಟು ಹೋಗುವುದು ಖಚಿತ.ಸರ್ಕಾರಿ ಕಾರ್ಯಕ್ರಮ ಮತ್ತು ಪಕ್ಷದ ಸಭೆಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ ಸ್ಥಳೀಯ ಸಂಸ್ಥೆಗಳಿಗಾಗಲಿ ಜಿಲ್ಲೆಗಾಗಲಿ ನಯಾಪೈಸೆಯಷ್ಟು ಉಪಯೋಗವಿಲ್ಲ ಎಂದು ಬಿಜೆಪಿಯವರು ಗೊಣಗುವುದು ಗುಟ್ಟಾಗಿ ಉಳಿದಿಲ್ಲ.

ಪ್ರಾಣೇಶ್ ಕಟ್ಟರ್ ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದಾಗ ಇದ್ದಷ್ಟು ಹೆಸರು ಈಗಾ ಇಲ್ಲ.
ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಕುರುವು ಉಳಿಯುವಂತಹ ಕಾಮಗಾರಿ ಕೇಳಲೇ ಬೇಡಿ,ಶಾಸಕರಿಗೆ ದೊರೆಯುವಷ್ಟು ಅನುದಾನ ಸಿಗುವುದಿಲ್ಲ ನಿಜ ಆದರೆ ಬಂದಿರುವ ಅನುದಾನದಲ್ಲಿ ಆಗಿರುವ ಕೆಲಸ ಬ್ಯಾಟರಿ ಹಾಕಿ ಹುಡಕಬೇಕು.ಪ್ರಾರಂಭದಲ್ಲಿ ಗ್ರಾಮ ಪಂಚಾಯತಿಗಳಿಗೆ ಕಂಪ್ಯೂಟರ್ ಎಂಬ ಸುದ್ದಿ ಬಿಟ್ಟರೆ ಬೇರೆಲ್ಲಾ ಶೂನ್ಯ.

ಈಗ ಬೇರೆ ಉಪಸಭಾಪತಿ ಗೂಟದ ಕಾರು ಕಛೇರಿ ಸಿಬ್ಬಂದಿ ಜೊತೆಗೆ ಚುನಾವಣೆಯ ತಕರಾರು ಬಗ್ಗೆ ಕೋರ್ಟ್ ಹೀಗೆ ಸಾಗುತ್ತಿದೆ .ಕೋರ್ಟ್‌ನಲ್ಲಿ ಪ್ರಾಣೇಶ್ ಸ್ಥಾನ ರದ್ದಾಗುತ್ತದೆ ಎಂದು ಕಾದುಕುಳಿತು ಪಟಾಕಿ ಹೊಡೆದವರಿಗೆ ಚಳ್ಳೇಹಣ್ಣು ತಿನ್ನಿಸುತ್ತಾ ತಮ್ಮ ಅವಧಿ ಮುಗಿಯುವ ಮುನ್ನವೇ ಅಲ್ಪಸ್ವಲ್ಪ ಕೆಲಸ ಮಾಡಲಿ ಎಂಬುದಷ್ಟೇ ಆಶಯ.

Share

Leave a comment

Leave a Reply

Your email address will not be published. Required fields are marked *

Don't Miss

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಕಂಸಾಗರ ಗ್ರಾಮದ ಕೆಂಚಪ್ಪ...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಕಚೇರಿ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿದೆ ಎಂಬ ಆರೋಪ...

Related Articles

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...

ಮೌಲ್ಯ – ಸೇವೆ ಮರೆತು ಹಣ ದೂಚಲು ಪ್ರಜಾಪ್ರಭುತ್ವದ ಕಗ್ಗೂಲೆ…

ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ...

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...