ಚಿಕ್ಕಮಗಳೂರು :
ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೆಂಡಾಮಂಡಲರಾಗಿ ವಾಗ್ದಾಳಿ ನಡೆಸಿದ್ದಾರೆ. ಜಮೀನ್ ನನ್ನು ಆಲದ ಮರಕ್ಕೆ ನೇಣು ಹಾಕಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಿಕ್ಕಮಗಳೂರಿನ ದತ್ತಮಾಲಾ ಅಭಿಯಾನದ ಕೊನೆ ದಿನವಾದ ಇಂದು ನಗರದ ಶಂಕರ ಮಠ ಬಳಿ ಧರ್ಮಸಭೆ ವೇಳೆ ದಿಕ್ಸೂಚಿ ಭಾಷಣದ ಮಾಡುತ್ತಾ ಆಕ್ರೋಶ ಹೊರಹಾಕಿದ್ದಾರೆ.
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಚಿವ ಜಮೀರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಜಮೀರ್ ಅಹಮದ್ ನನ್ನು ಔರಂಗಜೇಬ್ ಗೆ ಹೋಲಿಸಿದ ಅವರು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ 25 ಸಾವಿರ ಬಾಂಗ್ಲಾದೇಶಿ ಮುಸ್ಲಿಮರಿದ್ದಾರೆ
ಅವರನ್ನ ಜಮೀರ್ ಸಾಕಿದ್ದಾನೆ ಸಾಕ್ತಿದ್ದಾನೆ ಓಟರ್ ಲೀಸ್ಟ್ ತಯಾರು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದೇ ವೇಳೆ ಮಾತನಾಡಿದ ಅವರು ಈ ರೀತಿ ಅನೇಕ ಬ್ಲಂಡರ್ ಗಳನ್ನ ಸನ್ಮಾನ್ಯ ಔರಂಗಜೇಬ್ ಮಾಡಿದ್ದಾನೆ ಅದೇ ರೀತಿ ಇವನು ಮಾಡುತ್ತಿದ್ದು ಬಿಜೆಪಿ ಯವರು ಜಮೀರ್ ನನ್ನ ಗಡಿಪಾರು, ಮಾಡಿ ಕಿತ್ತಾಕಿ, ಸಸ್ಪೆಂಡ್ ಮಾಡಿ ಅಂತಿದ್ದಾರೆ ಆದರೆ ಗಡಿಪಾರು, ಸಸ್ಪೆಂಡ್ ಬೇಡ ಅವನನ್ನು ಯಾವುದಾರೂ ಆಲದಮರಕ್ಕೆ ನೇಣು ಹಾಕಿ ಎಂದು ಮುತಾಲಿಕ್ ರೋಷಾವೇಶದಿಂದ ಹೇಳಿದ್ದಾರೆ
- ಜಮೀರ್ ಈ ದೇಶದಲ್ಲಿ ಇರಲು ಲಾಯಕ್ಕಿಲ್ಲ, ನಾಲಾಯಕ್ ಇದ್ದಾನೆ ಎಂದ ಅವರು ಯಾರದ್ದು ಜಮೀನು, ಭೂಮಿ, ಕಟ್ಟಡ ನುಂಗಿ ನೀರು ಕುಡಿಯೋಕೆ ನಿಮ್ಮ ಅಪ್ಪಂದ ಎಂದು ಪ್ರಶ್ನಿಸಿರುವ ಮುತಾಲಿಕ್ ಯಾವುದೇ ಆಸ್ತಿಯನ್ನು ವಕ್ಫ್ ಕಬಳಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
Leave a comment