Home Latest News ಮಳೆ ಪರಿಹಾರ ದಾಖಲಿಸುವಲ್ಲಿ ಲೋಪ : ಇಬ್ಬರು ಎಫ್ ಡಿ ಎ ಗಳು ಸಸ್ಪೆಂಡ್
Latest News

ಮಳೆ ಪರಿಹಾರ ದಾಖಲಿಸುವಲ್ಲಿ ಲೋಪ : ಇಬ್ಬರು ಎಫ್ ಡಿ ಎ ಗಳು ಸಸ್ಪೆಂಡ್

Share
Share

ಚಿಕ್ಕಮಗಳೂರು : ಕಳಸ ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರುಪ್ರಥಮ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಶರತ್ ಕುಮಾರ್ ಮತ್ತು ಪ್ರಕಾಶ್ ಅವರು ಮೇಲಧಿಕಾರಿಗಳ ನಿರ್ದೇಶನ ಪಾಲಿಸುತ್ತಿಲ್ಲ, ಸಾರ್ವಜನಿಕರ ಭೇಟಿಗೆ ಸಿಗದೆ ಕರ್ತವ್ಯ ಚ್ಯುತಿ ಎಸಗುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಇಬ್ಬರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು.ಅದರಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಇಬ್ಬರನ್ನೂ ಅಮಾನತ್ತುಗೊಳಿಸಿದ್ದಾರೆ.

ಪ್ರಥಮ ದರ್ಜೆ ಸಹಾಯಕ ಪ್ರಕಾಶ್ 2024-2025ನೇ ಸಾಲಿನ ಮಳೆಹಾನಿ ಪರಿಹಾರದ ಸಂತ್ರಸ್ತರ ವಿವರವನ್ನು ತಂತ್ರಾಂಶದಲ್ಲಿ ಅಳವಡಿಸಲು ನಿರ್ಲಕ್ಷ್ಯ ತೋರಿಸಿದ್ದರು.ನೌಕಕರ ಇ ಆಫೀಸ್ ಲಾಗಿನ್ ಸ್ವತಃ ಬಳಕೆ ಮಾಡದೆ ಆಪರೇಟರ್ ಮೂಲಕ ಕಡತ ವಿಲೇವಾರಿ ಕೆಲಸ ಮಾಡಿಸುತ್ತಿದ್ದರು ಎಂಬ ಆರೋಪ ಇತ್ತು.

ಮತ್ತೊಬ್ಬ ಸಿಬ್ಬಂದಿ ಶರತ್ ಕುಮಾರ್ ಕೂಡ ಕಚೇರಿ ಕರ್ತವ್ಯಕ್ಕೆ ನಿಗದಿತ ಸಮಯಕ್ಕೆ ಬಾರದೆ ನಿರ್ಲಕ್ಷ್ಯ ತೋರುತ್ತಿದ್ದರು.ಸಾರ್ವಜನಿಕ ಕೆಲಸಗಳ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದರು.ಇವರು ಕೂಡ ಈ ಆಫೀಸ್ ಲಾಗಿನ್ ಅನ್ನು ಬಳಕೆ ಮಾಡದೆ ಆಪರೇಟರ್ ಮೂಲಕ ಕಡತ ವಿಲೇವಾರಿ ಮಾಡಿಸುತ್ತಿದ್ದರು ಎಂಬ ದೂರು ಇತ್ತು.

ಇಬ್ಬರ ಮೇಲಿನ ಈ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿರುವ ಕಾರಣ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನುಸಾರ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....