Home Political News ವಕ್ಫ್ ಜಮೀನು ವಿವಾದ ಖಂಡಿಸಿ ಬಿಜೆಪಿ ಪ್ರೊಟೆಸ್ಟ್ : ಹೆಚ್ಚವರಿ ಎಸ್ಪಿ ದಿಢೀರ್ ವರ್ಗಾವಣೆ
Political News

ವಕ್ಫ್ ಜಮೀನು ವಿವಾದ ಖಂಡಿಸಿ ಬಿಜೆಪಿ ಪ್ರೊಟೆಸ್ಟ್ : ಹೆಚ್ಚವರಿ ಎಸ್ಪಿ ದಿಢೀರ್ ವರ್ಗಾವಣೆ

Share
Share

ಚಿಕ್ಕಮಗಳೂರು : ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಖಂಡಿಸಿ ಕಾಫಿನಾಡಿನಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಕಡೂರು-ಮಂಗಳೂರು ರಸ್ತೆಯ ರಾ.ಹೆ.173 ರಲ್ಲಿ ಜಮಾಯಿಸಿ ಸಿಎಂ ಸಿದ್ದರಾಮಯ್ಯ ಹಾಗೂ ವಕ್ಫ್ ಸಚಿವ ಜಮೀರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ‌ ಕೂಗಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಒಲೈಕೆ ಮಾಡುತ್ತಾ ಹಿಂದೂಗಳನ್ನ ತುಳಿಯುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ‌ ವೇಳೆ ಕೆಲಕಾಲ ವಾಹನಗಳ ಸಂಚಾರ ವ್ಯತ್ಯಯ ಉಂಟಾಗಿತ್ತು,

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶ್ರೀರಾಮಸೇನೆಯ ದತ್ತಮಾಲೆ ಆರಂಭಗೊಂಡಿದೆ ಇನ್ನೊಂದೆಡೆ ವಕ್ಫ್ ಹೋರಾಟ ಬಿರುಸು ಪಡೆದುಕೊಳ್ಳುತ್ತಿದೆ ಈ ನಡುವೆ ಪೊಲೀಸ್ ಇಲಾಖೆ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿಯವರನ್ನು ದಿಢೀರ್ ವರ್ಗಾವಣೆ ಮಾಡಿದ್ದು ಅವರ ಸ್ಥಳಕ್ಕೆ ಯಾರನ್ನೂ ಕೂಡಾ ನಿಯೋಜನೆ ಮಾಡಿರದಿರುವುದು ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳ ಕೊರತೆ ಎದುರಾದಂತೆ ಗೋಚರಿಸುತ್ತಿದೆ

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...

ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್...