Home namma chikmagalur 24 ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
namma chikmagalurchikamagalurHomeLatest News

24 ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Share
Share

ಚಿಕ್ಕಮಗಳೂರು: ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ 24 ಶಿಕ್ಷಕರಿಗೆ ಈ ಬಾರಿ ಕಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸೆ. 9ರಂದು ಮೂಡಿಗೆರೆಯ ರೈತ ಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.

ಜಿಲ್ಲೆಯ ಎಂಟು ಶೈಕ್ಷಣಿಕ ಬ್ಲಾಕ್ ಗಳಿಂದ ಮೂರು ವಿಭಾಗಗಳಲ್ಲಿ 24 ಜನ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಪತ್ರ ಹಾಗೂ 5 ಸಾವಿರ ರೂ. ಬಹುಮಾನ ನೀಡಲಾಗುತ್ತಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬೀರೂರು ವಲಯದ ನಿಡಘಟ್ಟ ಕಿರಿಯ ಪ್ರಾಥಮಿಕ ಶಾಲೆಯ ಬಿ.ಟಿ. ಕೃಷ್ಣಶೆಟ್ಟಿ, ಚಿಕ್ಕಮಗಳೂರು ವಲಯದ ನರಗನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಸಿ.ಕೆ. ವಿಜಯಲಕ್ಷ್ಮಿ, ಕಡೂರು ವಲಯದ ತಂಗಲಿ ಶಾಲೆಯ ನುಸ್ರತ್ ಬಾನು, ಕೋಪ ವಲಯದ ತನುಡಿ ಶಾಲೆಯ ಜ್ಯೋತಿ ಡಿಸೋಜಾ, ಮೂಡಿಗೆರೆ ವಲಯದ ಹೇರಡಿಕೆ ಶಾಲೆಯ ಜಿ.ಕೆ.ಶ್ರೀನಿವಾಸಮೂರ್ತಿ, ಎನ್.ಆರ್.ಪುರ ತಾಲೂಕು ಭದ್ರಕಾಲನಿ ಶಾಲೆಯ ಚಂದ್ರಕಲಾ, ಶೃಂಗೇರಿ ವಲಯದ ಸಿಂಧುವಳ್ಳಿ ಶಾಲೆಯ ಎಂ.ಎಂ.ಪ್ರಮೀಳಾ, ತರೀಕೆರೆ ವಲಯದ ಕೆಂಚಿಕೊಪ್ಪ ಶಾಲೆಯ ಎಚ್.ಓ.ಬಸವರಾಜಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬೀರೂರು ಬಿ.ಕೋಡಿಹಳ್ಳಿ ಶಾಲೆಯ ಎಚ್.ಓ.ಬಲರಾಮ, ಚಿಕ್ಕಮಗಳೂರು ವಲಯದ ನಗರ 2 ಕ್ಲಸ್ಟರ್ ನ ಬಿಟಿಎಚ್ ಪಿಎಸ್ ಶಾಲೆಯ ಕೆ.ಎ.ಹರೀಶ್ ಕುಮಾರ್, ಕಡೂರು ವಲಯದ ಮರವಂಜಿ ಶಾಲೆಯ ಕೆ.ಜೆ. ವಿಜಯ್ ಕುಮಾರ್, ಕೊಪ್ಪ ವಲಯದ ಅತ್ತಿಕುಳಿ ಶಾಲೆಯ ಓ.ಗುರುಸ್ವಾಮಿ, ಮೂಡಿಗೆರೆ ವಲಯದ ಮುತ್ತಿಗೆಪುರದ ಎಸ್. ಭಾರತಿ, ಎನ್.ಆರ್.ಪುರ ವಲಯದ ಕಾನೂರು ಶಾಲೆಯ ಕೆ.ಮಂಜುಳಾ, ಶೃಂಗೇರಿ ವಲಯದ ಧರೆಕೊಪ್ಪ ಶಾಲೆಯ ಎಚ್.ಎಚ್.ದಿನೇಶ್, ತರೀಕೆರೆ ವಲಯದ ಕುಡ್ಲೂರು ಶಾಲೆಯ ಎಚ್.ಲೋಹಿತ್ ಕುಮಾರ್ ಅವರಿಗೆ ಪ್ರಶಸ್ತಿ ಒಲಿದಿದೆ.

ಇನ್ನು ಪ್ರೌಢಶಾಲಾ ವಿಭಾಗದಲ್ಲಿ ವಲಯದ ಬಳ್ಳಿಗನೂರು ಶಾಲೆಯ ಸುವರ್ಣ ಎಸ್ ವಡೆಯರ್, ಚಿಕ್ಕಮಗಳೂರು ವಲಯದ ಮೈಲಿಮನೆ ಶಾಲೆಯ ಎಂ.ಬಿ.ಚಂದ್ರೇಗೌಡ, ಕಡೂರು ವಲಯದ ಮತ್ತಿಘಟ್ಟ ಶಾಲೆಯ ವಿ.ಎನ್.ಪ್ರಕಾಶ್, ಕೊಪ್ಪ ವಲಯದ ಬಂಡಿಗಡಿ ಶಾಲೆಯ ಎನ್.ಎನ್.ಸುರೇಂದ್ರ, ಮೂಡಿಗೆರೆ ವಲಯದ ಅಂಗಡಿ ಗ್ರಾಮ ಶಾಲೆಯ ಮಂಜಪ್ಪ ದೊಡ್ಡಮನಿ, ಎನ್.ಆರ್‌.ಪುರ ವಲಯದ ಮಾಗುಂಡಿ ಶಾಲೆಯ ರಮೇಶ ನಾಯಕ, ಶೃಂಗೇರಿ ವಲಯದ ಶೃಂಗೇರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕೆ.ಶಶಿಧರ್, ತರೀಕೆರೆ ವಲಯದ ಹಳೆಯೂರು ಶಾಲೆಯ ಎಚ್.ಕೆ.ಶೇಖರಪ್ಪ ಜಿಲ್ಲಾಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

24 teachers get district level best teacher award

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...