ಕೊಟ್ಟಿಗೆಹಾರ:ಹೊಂಡ ಗುಂಡಿಗಳಿಂದ ಕೂಡಿದ ರಸ್ತೆ ದುಸ್ಥಿತಿಯ ಬಗ್ಗೆ ಗಮನ ಸೆಳೆಯಲು ಮತ್ತು ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಬಗ್ಗೆ ಯಮ ಹಾಗೂ ಚಿತ್ರಗುಪ್ತರ ವೇಷ ತೊಟ್ಟು ನಿಡುವಾಳೆಯಲ್ಲಿ ಜನಜಾಗೃತಿ ಮೂಡಿಸಲಾಯಿತು.
ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ ಮತ್ತು ಹಾಸ್ಯ ಕಲಾವಿದ ರಮೇಶ್ ಯಾದವ್ ಯಮ ಚಿತ್ರ ಗುಪ್ತರ ವೇಷ ತೊಟ್ಟು ಗಮನ ಸೆಳೆದರು. ರಸ್ತೆಯ ಗುಂಡಿಗಳನ್ನು ಚಿತ್ರಗುಪ್ತ ಅಳತೆ ಮಾಡಿದರೇ ಯಮ ಧರ್ಮರಾಯ ಅಳತೆಯ ಲೆಕ್ಕ ಬರೆದುಕೊಂಡರು.
ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿರುವವರನ್ನು ನಿಲ್ಲಿಸಿ ಹೆಲ್ಮೆಟ್ ಧರಿಸುವಂತೇ ಯಮಧರ್ಮರಾಯನ ವೇಷಧಾರಿ ಅರಿವು ಮೂಡಿಸಿದರು. ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ ಅಕ್ಕಿ ಚೀಲಕ್ಕೆ ಕೈ ಹಾಕಿ ಅಕ್ಕಿಯ ಕ್ವಾಲಿಟಿಯನ್ನು ಪರಿಶೀಲಿಸಿದರು.
ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ. ಹಾಗೇ ಮಾಡಿದರೇ ಯಮ ಮತ್ತು ಚಿತ್ರಗುಪ್ತರಿಗೆ ಕೆಲಸ ಹೆಚ್ಚಾಗುತ್ತದೆ ಎಂದು ನಗೆ ಚಟಾಕಿ ಹಾರಿಸಿದರು. ಗದೆ ಹಿಡಿದು ವೇಷ ಧರಿಸಿ ರಸ್ತೆಗೆ ಬಂದ ವೇಷಧಾರಿಗಳ ಪ್ರಯತ್ನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತು ಹದಗೆಟ್ಟ ರಸ್ತೆಗಳನ್ನು ದುರಸ್ಥಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Yama Dharmaraya-Chitragupta who came to Niduvale
Leave a comment