Home namma chikmagalur chikamagalur ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಕಾಡ್ಲಿಚ್ಚು
chikamagalurHomeLatest Newsnamma chikmagalur

ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಕಾಡ್ಲಿಚ್ಚು

Share
Share

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ದ ಭದ್ರಾ ವನ್ಯಜೀವಿ ವಲಯದ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಕಾಡ್ಲಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ.

ಮುತ್ತೋಡಿ ಅರಣ್ಯ ವಲಯದ ಹೊಸಖಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಂಕಿ ವೇಗವಾಗಿ ಹರಡಿದ್ದು, ಒಣಗಿದ ತರಗೆಲೆಗಳ ಕಾರಣದಿಂದಾಗಿ ಕ್ಷಣಾರ್ಧದಲ್ಲಿ ಕಿಲೋಮೀಟರ್ಗಗಟ್ಟಲೆ ವ್ಯಾಪಿಸಿದೆ. ಈ ಅನಿರೀಕ್ಷಿತ ದುರಂತದಿಂದಾಗಿ ಅಭಯಾರಣ್ಯದಲ್ಲಿರುವ ಅಪರೂಪದ ಸಸ್ಯ ಸಂಪತ್ತು ನಾಶವಾಗುತ್ತಿರುವುದಲ್ಲದೆ, ಅಲ್ಲಿನ ಪ್ರಾಣಿ ಮತ್ತು ಪಕ್ಷಿಗಳ ಜೀವಕ್ಕೂ ತೀವ್ರ ಸಂಚಕಾರ ಒದಗಿದೆ.

ಕಾಡಿಚ್ಚನ್ನು ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೂ, ಬೆಂಕಿಯ ತೀವ್ರತೆ ನಿಯಂತ್ರಣಕ್ಕೆ ಬರುತ್ತಿಲ್ಲ. ಅರಣ್ಯ ಇಲಾಖೆಯಲ್ಲಿ ವಾಚರ್‌ಗಳ ಕೊರತೆ ಇರುವುದು ಬೆಂಕಿ ನಂದಿಸುವ ಕಾರ್ಯಕ್ಕೆ ದೊಡ್ಡ ಅಡ್ಡಿಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಅಲ್ಲದೆ, ಜೇನುಕಲ್ಲುಗಿರಿ, ಕಾಗೆಮನೆಗಿರಿ ಹಾಗೂ ಗೆಸ್ಟ್ ಹೌಸ್ ರಸ್ತೆಯ ಭಾಗಗಳಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಫೈರ್ ಲೈನ್ ನಿರ್ಮಿಸಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿವೆ. ಸೂಕ್ತ ಮುನ್ನೆಚ್ಚರಿಕೆ ಇಲ್ಲದ ಕಾರಣ ಬೆಂಕಿ ಸುಲಭವಾಗಿ ಅರಣ್ಯದ ಒಳಭಾಗಕ್ಕೆ ನುಗ್ಗಿದ್ದು ಆತಂಕ ವ್ಯಕ್ತವಾಗಿದೆ.

Wildfire in Muthodi forest area

Share

Leave a comment

Leave a Reply

Your email address will not be published. Required fields are marked *

Don't Miss

ಕಾಫಿ ಕ್ಯೂರಿಂಗ್ ಬೇಜವಾಬ್ದಾರಿತಕ್ಕೆ ಇಬ್ಬರು ರೈತರು ಗಂಭೀರ ಗಾಯ

ಚಿಕ್ಕಮಗಳೂರು: ಕಾಫಿನಾಡಿನ ಹರಿಹರದಹಳ್ಳಿಯಲ್ಲಿರುವ ವಿದ್ಯಾ ಕಾಫಿ ಕ್ಯೂರಿಂಗ್ ಘಟಕದ ಮಾಲೀಕರು ಮತ್ತು ಮ್ಯಾನೇಜೆಂಟ್ ಬೇಜವಾಬ್ದಾರಿತನದಿಂದಾಗಿ ಸ್ಥಳೀಯ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ಈ ಘಟಕದಿಂದ ಸಂಸ್ಕರಿಸದೆ ಬೂದಿ ಮತ್ತು...

ಬಂದೂಕಿನಿಂದ ಗುಂಡು ಹೊಡೆದು ನಾಯಿಯ ಹತ್ಯೆ

ಶೃಂಗೇರಿ: ಕಿಡಿಗೇಡಿಗಳು ನಾಯಿಯೊಂದನ್ನು ಬಂದೂಕಿನಿಂದ ಗುಂಡು ಹೊಡೆದು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಶೃಂಗೇರಿ ತಾಲೂಕಿನ ಮೀಗಾ ಗ್ರಾಮದ ನಡುತೋಟದ ಸರ್ಕಾರಿ ಕಾಡಿನಲ್ಲಿ ಬೆಳಕಿಗೆ ಬಂದಿದೆ. ಮಾ.6ರಂದು ರಾತ್ರಿ ಗಸ್ತಿನಲ್ಲಿದ್ದ ಮಂಜುನಾಥ...

Related Articles

‘ಫಸ್ಟ್ ಬ್ಯಾಂಕ್ ರಾಜು’ ಖ್ಯಾತಿಯ ನಟನ ರೆಸಾರ್ಟ್‌ಗೆ ಒಂಟಿ ಸಲಗವೊಂದು ಲಗ್ಗೆ

ಮೂಡಿಗೆರೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ...

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು...

ಹೆಣ್ಣುಮಕ್ಕಳಿಂದ ತಂದೆಯ ಅಂತ್ಯಸಂಸ್ಕಾರ

ಕಡೂರು: ಲಿಂಗ ಸಮಾನತೆಯನ್ನು ಸಾರುವ ಅಪರೂಪದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರಿನಲ್ಲಿ ನಡೆದಿದ್ದು,...