ಚಿಕ್ಕಮಗಳೂರು: ಕೃಷಿ ಭೂಮಿ, ಜನವಸತಿ ಹಾಗೂ ಮೂಲಸವಲತ್ತಿನ ಪ್ರದೇಶವನ್ನು ಪರಿಭಾವಿತ ಅರಣ್ಯ ಮತ್ತು ಸೆಕ್ಷನ್ ೪(೧)ರಿಂದ ಉಳಿಸಿಕೊಳ್ಳಲು ಗ್ರಾಮಸ್ಥರು ಬೀದಿಗಿಳಿದು ಹೋರಾಟ ರೂ ಪಿಸಿದರೆ ಮಾತ್ರ ಅಸ್ಥಿತ್ವ ಉಳಿದುಕೊಳ್ಳಲಿದೆ ಎಂದು ನಾಗರೀಕ ಮತ್ತು ರೈತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ಹೇಳಿದರು.
ತಾಲ್ಲೂಕಿನ ಶಿರವಾಸೆ ಗ್ರಾಮದಲ್ಲಿ ನಾಗರೀಕರ ಮತ್ತು ರೈತ ಹೋರಾಟ ಸಮಿತಿ, ದಲಿತ, ಜನಪರ, ಕನ್ನಡ, ಕಾರ್ಮಿಕರ ಸಂಘಟನೆಗಳು, ಕಾಫಿ ಬೆಳೆಗಾರರ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಜನಜಾಗೃತಿ ಜಾ ಥಾ ಮತ್ತು ಬೃಹತ್ ಜನಜಾಗೃತಿ ಸಮಾವೇಶವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಗ್ರಾಮದ ನಿವಾಸಿಗಳು, ರೈತ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳು ಸ್ವಾತಂತ್ರ್ಯ ಪೂರ್ವದಿಂದ ಇವೆ. ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಆಳುವ ಸರ್ಕಾರಗ ಳು ಕ್ಯಾರಿ ಎನ್ನದೇ, ಪರಸ್ಪರ ಕೆಸರೇರಚುವ ಆಟದಲ್ಲಿ ತೊಡಗಿ ಮೂಲ ನಿವಾಸಿಗಳ ಸ್ವಂತನ್ನು ಕಸಿದುಕೊ ಳ್ಳಲು ಯತ್ನಿಸುತ್ತಿದೆ ಎಂದು ದೂರಿದರು.
ಅರಣ್ಯ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಅಲ್ಪಪ್ರಮಾಣದ ಒತ್ತುವರಿ ಮಾಡಿ ಜೀವನ ಕಟ್ಟಿ ಕೊಂಡಿರುವ ನಿವಾಸಿಗಳನ್ನು ಸ್ಥಳಾಂತರಿಸಲು ನಕಲಿ ಪರಿಸರವಾದಿಗಳ ಸೋಗಿನಲ್ಲಿರುವ ಕೆಲವು ಎನ್‌ಜಿಓ ಗಳು ಡೀಮ್ಡ್ ಫಾರೆಸ್ಟ್, ಹುಲಿ ಸಂರಕ್ಷಣೆ ಯೋಜನೆ ಹೆಸರಿನಲ್ಲಿ ಕೆಲಸ ಮಾಡುವ ಜೊತೆಗೆ ಮುಳ್ಳಯ್ಯನಗಿ ರಿ ತಪ್ಪಲಿನ ಜನವಸತಿ ಪ್ರದೇಶವನ್ನು ಕಿತ್ತುಕೊಳ್ಳಲು ಹುನ್ನಾರ ನಡೆಸುತ್ತಿದೆ ಎಂದರು.
ಅರಣ್ಯ ವ್ಯಾಪ್ತಿಯಲ್ಲಿ ಜನವಸತಿ, ಕೃಷಿಭೂಮಿಯಲ್ಲಿ ವಾಸಿಸುತ್ತಿರುವವರಿಗೆ ಕಸ್ತೂರಿ ರಂಗನ್ ವರದಿ ತೂಗು ಕತ್ತಿಯಂತೆ. ಯಾವುದೇ ವರದಿಗಳು ಜಾರಿಯಾಗದಿದ್ದಲ್ಲಿ, ತಿರುಗಿ ಬರಲಿದೆ. ಮುಂದಿನ ದಿನಗಳಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶವನ್ನಾಗಿ ಪರಿವರ್ತಿಸಲು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮೋ ದನೆ ಕಡ್ಡಾಯವಾಗಲಿದೆ ಎಂದು ಎಚ್ಚರಿಸಿದರು.
ಡೀಮ್ಡ್ ಅರಣ್ಯದಲ್ಲಿ ಸಾವಿರಾರು ಕುಟುಂಬಗಳಿದ್ದು ಸೂಕ್ತ ರೀತಿಯಲ್ಲಿ ಸರ್ವೆ ಕಾರ್ಯ ನಡೆಸಿ ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಇಂದಿಗೂ ಜಿಲ್ಲಾಡಳಿತ ಕ್ರಮ ವಹಿಸದೇ ಮೌನತಾಳಿದೆ. ಸ್ಥಳೀಯ ಅ ಧಿಕಾರಿಗಳಿಗೆ ವಿಚಾರಿಸಿದರೆ ಆದೇಶಪ್ರತಿ ಲಭ್ಯವಾಗಿಲ್ಲ ಎಂದು ಸಬೂಬು ಹೇಳಿಕೊಂಡು ಕಾಲಹರಣ ಮಾ ಡಿರುವ ಕಾರಣ ನಿವಾಸಿಗಳ ಸಮಸ್ಯೆ ಬಗೆಹರಿದಿಲ್ಲ ಎಂದರು.
ಇಂದಿಗೂ ೯೪ಸಿ, ೫೩, ೫೭ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ. ಇ-ಖಾತೆ ಮತ್ತು ಪೋಡಿ ಆಗುತ್ತಿಲ್ಲ. ನಿವೇಶನ ರಹಿತರಿಗೆ ನಿವೇಶನಗಳು ಮಂಜೂರಾಗಿಲ್ಲ. ವಸತಿ ರಹಿತರಿಗೆ ನಿವೇಶನ ಇಲ್ಲದೇ ವಸತಿ ಯೋಜ ಜನೆಗಳಲ್ಲಿ ಮನೆಗಳ ಮಂಜೂರಾಗುತ್ತಿಲ್ಲ. ಗ್ರಾಮದ ಸರ್ವತೋಮುಖ ಅಭಿವೃಧ್ದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ಅನುದಾನಗಳು ನೀಡುತ್ತಿಲ್ಲ ಎಂದರು.
ಹಿರಿಯ ಜನಪರ ಹೋರಾಟಗಾರ ಜಾರ್ಜ್ ಆಸ್ಟಿನ್ ಮಾತನಾಡಿ ಮನೆ, ಕೃಷಿ ಭೂಮಿಗಳನ್ನು ಉಳಿ ಸಿಕೊಳ್ಳಲು ನಿವಾಸಿಗಳು ಶತಮಾನದಿಂದಲೇ ಹತ್ತಾರು ಹೋರಾಟಗಳನ್ನು ನಡೆಸಿಕೊಂಡು ಬಂದಿವೆ. ಇದೀ ಗ ಅರಣ್ಯ ಇಲಾಖೆ ಕಿರುಕುಳದಿಂದ ಇಂದಿಗೂ ಬಹುತೇಕ ಕುಟುಂಬಗಳು ನೆಮ್ಮದಿಯಿಂದ ಬದುಕು ಲಾ ಗುತ್ತಿಲ್ಲ ಎಂದು ತಿಳಿಸಿದರು.
ಅರಣ್ಯ ಮಧ್ಯೆ ಬದುಕು ಕಟ್ಟಿಕೊಂಡಿರುವ ಜನರು ಕಾಡಿನ ವಿರೋಧಿಗಳಲ್ಲ. ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾಫಿ ಸಸಿಗಳನ್ನು ಪೋಷಿಸಲಾಗುತ್ತಿದೆ. ಜನವಸತಿ, ಕೃಷಿ ಮತ್ತು ಅರಣ್ಯದ ಮಧ್ಯೆ ಗೆರೆ ಎಳೆಯ ಲಾಗಿಲ್ಲ. ಇದೀಗ ಕಾಡಿನಲ್ಲಿ ಜಾನುವಾರುಗಳ ಮೇಯಿಸುವಂತಿಲ್ಲ ಎಂಬ ಆದೇಶಗಳಿವೆ. ಮುಂದೆ ಅರಣ್ಯದ ಲ್ಲಿ ನಡೆದಾಡುವುದು ಕಷ್ಟಸಾಧ್ಯವಾಗಲಿದೆ ಎಂದು ಎಚ್ಚರಿಸಿದರು.
ಶಿರವಾಸೆ ಗ್ರಾ.ಪಂ. ಅಧ್ಯಕ್ಷ ವಿ.ಆರ್.ರಘುನಾಥ್ ಮಾತನಾಡಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತು ವಿಶೇ ಷ ಗ್ರಾಮಸಭೆಯನ್ನು ಆಯೋಜಿಸಲಾಗಿದ್ದು ಸಭೆಯಲ್ಲಿ ನಿವಾಸಿಗಳು ತಮ್ಮ ತಮ್ಮ ಅನಿಸಿಕೆ ಹಾಗೂ ಮೂಲ ದಾಖಲಾತಿ ಸಮೇತ ಸಲ್ಲಿಸಿದರೆ ಎಲ್ಲವೂ ಒಟ್ಟುಗೂಡಿಸಿ ಕೇಂದ್ರ ಹಾಗೂ ರಾಜ್ಯಸರ್ಕಾರಕ್ಕೆ ರವಾನಿಸಲಾಗು ವುದು ಎಂದು ತಿಳಿಸಿದರು.
ಇದೇ ವೇಳೆ ಶಿರವಾಸೆ, ಗಾಳಿಗುಡ್ಡೆ, ಕಳವಾಸೆ, ಕೊಂಕಳಮನೆ, ಸಿದ್ದಾಪುರ ಗ್ರಾಮ ವ್ಯಾಪ್ತಿಯ ನೂರಾ ರು ಜನರು ಸಂತೆ ಮೈದಾನದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಡೀಮ್ಡ್ ಫಾರೆಸ್ಟ್ ಹಾಗೂ ಸೆಕ್ಷನ್ ೪(೧) ಜಾರಿ ಮಾಡಲು ಹೊರಟಿರುವ ಸರ್ವೆ ನಂಬರ್‌ಗಳ ಮಾಹಿತಿ ಮನವಿ ಮೂ ಲಕ ಅಧ್ಯಕ್ಷರಿಗೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿಬೆಳೆಗಾರ ಕೆ.ಆರ್.ಚಂದ್ರೇಗೌಡ ವಹಿಸಿದ್ದರು. ಈ ಸಂದರ್ಭ ದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕೆ.ಕೆ.ರಘು, ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಸ್.ಮಲ್ಲೇ ಶ್, ವಿವೇಕಾನಂದ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಎಸ್.ಎಂ.ದೇವಣ್ಣಗೌಡ, ಶಿರವಾಸೆ ಕಸಾಪ ಅಧ್ಯಕ್ಷ ವಾಸುಪೂಜಾರಿ, ಮುಖಂಡರುಗಳಾದ ಪ್ರಸನ್ನ, ವೆಂಕಟೇಶ್ ಹಾಗೂ ಗ್ರಾ.ಪಂ, ಸದಸ್ಯರು, ಸೊಸೈಟಿ ನಿರ್ದೇ ಶಕರು ಹಾಜರಿದ್ದರು.
We must take to the streets to fight to save agricultural land and human settlements.
Leave a comment