ಚಿಕ್ಕಮಗಳೂರು: ಬಯಲು ಪ್ರದೇಶದಲ್ಲಿ ಈಗಾಗಲೇ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿರುವ ಬಗ್ಗೆ ಜನ ದೂರುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲೂ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ.
ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿ ಮತ್ತು ಅಜ್ಜಂಪುರ ಹೋಬಳಿಗಳಲ್ಲಿ ಕೆಲವು ಊರುಗಳಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದಾರೆ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿದೆ. ಕೊಳವೆ ಬಾವಿಗಳು ಬತ್ತುತ್ತಿವೆ ಹೀಗಾಗಿ ನೀರಿನ ಕೊರತೆ ಪ್ರಾರಂಭವಾಗಿದೆ.ಅಡಿಕೆ ಬೆಳೆದಿರುವ ರೈತರು ಕಣ್ಣ್,ಕಣ್ಣ್ ಬಿಡುತ್ತಿದ್ದಾರೆ.
ಸಾಲ ಮಾಡಿ ಕೊಳವೆ ಬಾವಿ ತೊಡಿಸಿದರೂ ಹನಿ ನೀರು ಬರುತ್ತಿಲ್ಲ ಬರೀ ಧೂಳು, ಧೂಳು ಬರುತ್ತಿದೆ ಎಂದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಗದ್ಗದಿತರಾಗುತ್ತಿದ್ದಾರೆ. ಕಡೂರು ತಾಲ್ಲೂಕಿನ ಚೌಳ ಹಿರಿಯೂರು ಮತ್ತು ಹೀರೇನಲ್ಲೂರು ಮತ್ತು ಕಸಬ ಹೋಬಳಿಯಲ್ಲಿ ನೀರಿನ ಅಭಾವ ಉಂಟಾಗಿದೆ ಎನ್ನಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಸಖರಾಯಪಟ್ಟಣ ,ಲಖ್ಯಾ ಹೋಬಳಿಯ ಕೆಲವು ಕಡೆ ನೀರು ಸಿಗದೆ ಪರದಾಡುತ್ತಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ ಈ ಪರಿಸ್ಥಿತಿ ಉಂಟಾಗುತ್ತಿರುವುದು ನೋಡಿದರೆ ಮುಂದಿನ ದಿನಗಳ ಬಗ್ಗೆ ಭಯವಾಗುತ್ತಿದೆ.ಇದೇ ರೀತಿ ಮಲೆನಾಡು ಪ್ರದೇಶಕ್ಕೆ ಬಿಸಲಿನ ಝಳ ತಟ್ಟುವುದು ಗ್ಯಾರಂಟಿ ಎಂದು ಕೆಲವರು ಹೇಳುತ್ತಿದ್ದಾರೆ.ಜಲ ಜೀವನ್ ಮಿಷನ್ ಎಲ್ಲೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಇವರಿಂದ ಜನಪ್ರತಿನಿಧಿಗಳು ಕಮೀಷನ್ ಬಗ್ಗೆ ತೋರಿಸುವ ಗ್ಯಾರಂಟಿ ಜನರಿಗಾಗಿ ಕುಡಿಯುವ ನೀರಿನ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎನ್ನಲಾಗುತ್ತಿದೆ.ಜಿಲ್ಲಾ ಆಡಳಿತ ಪೂರ್ವ ಸಿದ್ದತೆ ಮಾಡಿಕೊಳ್ಳದಿದ್ದರೆ ಜನರ ಆಕ್ರೋಶಕ್ಕೆ ಸಿಗಬೇಕಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಬಂದ ಪುಟ್ಟ,ಹೋದ ಪುಟ್ಟ ಎಂದು ಕಾಫಿ ತೋಟಕ್ಕೆ ಕೊಡುವ ನಿಗಾ ಜಿಲ್ಲೆಯ ಬಗ್ಗೆ ಮತ್ತು ಜನರ ಬಗ್ಗೆ ಕೊಡುತ್ತಿಲ್ಲ ಎನ್ನುವ ಜನ ಅವರ ಕಛೇರಿ ಮುಂದೆ ಖಾಲಿ ಕೊಡ ಹಿಡಿದು ಬರುವುದು ಖಚಿತ.
Water shortage in the plains
Leave a comment