ಚಿಕ್ಕಮಗಳೂರು : ನಗರಸಭೆಯ ವಾರ್ಡ್ ನಂಬರ್ 8ರ ನಗರಸಭಾ ಸದಸ್ಯ ಎ.ಸಿ.ಕುಮಾರ್ ಅತ್ಯುತ್ತಮ ಅಭಿವೃದ್ಧಿ ಕೆಲಸದ ಜೊತೆಗೆ ಜನಸಾಮಾನ್ಯರ ಬಳಿ ಸ್ಪಂದಿಸುವ ಗುಣವನ್ನು ಎಲ್ಲರೂ ಮೆಚ್ಚುತ್ತಿದ್ದಾರೆ.
1998 ರಲ್ಲಿ ಅಸ್ತಿತ್ವಕ್ಕೆ ಬಂದ ಜಯನಗರ ವಾರ್ಡ್ನಲ್ಲಿ ಪ್ರಥಮ ಬಾರಿಗೆ ಎಸ್.ಎಲ್.ಬೋಜೇಗೌಡ ಅಯ್ಕೆಯಾಗಿ ಸ್ವಲ್ಪ ಅಭಿವೃದ್ಧಿ ಕೆಲಸ ಬಿಟ್ಟರೆ ಇನ್ನೂ ಉಳಿದ ಅವಧಿಯಲ್ಲಿ ನಗರಸಭಾ ಸದಸ್ಯರು ಯಾರು ಎಂಬುದು ತಿಳಿಯಲಿಲ್ಲ.
ಕುಮಾರ್ ನಗರಸಭೆಯ ಸದಸ್ಯರಾಗಿ ಮೂರು ವರ್ಷಗಳಿಂದ ನಗರದ ಸ್ವಚ್ಛತೆಗೆ ಹೆಚ್ಚಿನ ಅದ್ಯತೆಯಲ್ಲ ಸ್ವತಃ ನಿಂತು ಕೆಲಸ ಮಾಡಿಸುತ್ತಿರುವುದನ್ನು ದಿನನಿತ್ಯ ನೋಡಬಹುದು ಯಾವುದೇ ಸಮಸ್ಯೆಗಳು ಇರಲಿ ಕ್ಷಣಾರ್ಧದಲ್ಲಿ ಬಗೆಹರಿಸುತ್ತಿರುವುದು ನಿಜವಾಗಿಯೂ ಮೆಚ್ಚ ಬೇಕು.
ವ್ಯಾಟ್ಸ್ ಆಫ್ ಗ್ರೂಪ್ನಲ್ಲಿ ಏನು ಸಮಸ್ಯೆ ಇದ್ದರು ತಿಳಿಸಿದರೆ ಸಾಕು ಅಲ್ಲಿಗೆ ಕುಮಾರ್ ನಗರಸಭೆಯ ಕಾರ್ಮಿಕರೊಂದಿಗೆ ಆಗಮಿಸಿ ಪರಿಹರಿಸಿ ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ. ನಗರಸಭೆಯ ಕಾರ್ಮಿಕರೊಂದಿಗೆ ವಿಶ್ವಾಸ ನಿಕಟತೆಯೊಂದಿಗೆ ಇರುವುದು ಇವರ ಕೆಲಸ ಕಾರ್ಯಗಳಿಗೆ ಅನುಕೂಲವಾಗಿದೆ.
ರಸ್ತೆ, ಚರಂಡಿ, ಪಾರ್ಕ್, ಖಾಲಿ ಸೈಟ್ ಕೂಡ ಪಳ ,ಪಳ ಹೊಳೆಯುವಷ್ಟು ಕ್ಲೀನ್ ಮಾಡಲಾಗುತ್ತದೆ.ಕುಮಾರ್ ಕೆಲಸ ಮತ್ತು ಸ್ಪಂದನೆಯಿಂದಾಗಿ ಚಿಕ್ಕಮಗಳೂರು ನಗರಸಭೆಯಲ್ಲಿ ಜಯನಗರ ವಾರ್ಡ ಮೊದಲ ಸ್ಥಾನದಲ್ಲಿ ಇದೆ .
Leave a comment