ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ ವಿಜಯ ದಿವಸ್ ಆಚರಣೆ ಮಾಡಲಾಯಿತು.1971, ಡಿಸೆಂಬರ್ 16ರಂದು ಭಾರತ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ ಸಂಭ್ರಮಕ್ಕೆ ಅಂದಿನಿಂದ ಈ ದಿನವನ್ನು ಇಡೀ ದೇಶವೇ ಹೆಮ್ಮೆಯ ದಿನವಾಗಿ ಸ್ಮರಿಸುತ್ತಿದ್ದು. ಯುದ್ಧದ ಗೆಲುವಿನ ದಿನವನ್ನು ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಗೆಲುವಿನ ಸವಿ ನೆನಪಿಗಾಗಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಮಾಜಿ ಸೈನಿಕರು ಸಂಭ್ರಮಾಚರಣೆ ನಡೆಸಿದರು.
ಪಾಕಿಸ್ತಾನ ವಿರುದ್ಧದದ ಗೆಲುವನ್ನು ದೇಶ ಮಹತ್ವದ ದಿನವನ್ನಾಗಿ ನೋಡುತ್ತಾ ಬಂದಿದೆ. ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ ದಿನʼ ವನ್ನು ಸಹ 1999ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಹಾಗೇ ಡಿಸೆಂಬರ್ 16ರಂದು ಕೂಡ ಪಾಕಿಸ್ತಾನದ ವಿರುದ್ಧದ ಗೆಲುವನ್ನು ವಿಜಯ್ ದಿವಸ್ ಎಂದು ಆಚರಿಸುತ್ತಾ ಬರಲಾಗಿದೆ. ಈ ಒಂದು ದಿನವು ಭಾರತೀಯ ಇತಿಹಾಸದಲ್ಲಿ ಅತ್ಯುನ್ನತ ಘಟ್ಟವಾಗಿದ್ದು, ದೇಶವು ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ಮೂಲಕ ವಿಜಯ ದಿವಸ್ ಅನ್ನು ಸಂಭ್ರಮಿಸುತ್ತದೆ.
Leave a comment