ಚಿಕ್ಕಮಗಳೂರು: ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳ ಮೇ ಲೆ ಮನುವಾದಿ ವಕೀಲರೋರ್ವ ನಡೆಸಿರುವ ಅಪಮಾನ ಖಂಡಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಸರ್ವೋಚ್ಚ ನ್ಯಾಯಪೀಠಕ್ಕೆ ಆದ ಅವಮಾನ ಖಂಡನಾ ಹೋರಾಟ ವೇದಿಕೆ, ವಿವಿಧ ರಾಜಕೀ ಯ ಮುಖಂಡರು ಹಾಗೂ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ತಾಲ್ಲೂಕು ಕಚೇರಿಯಿಂದ ಮುಖಂಡರುಗಳು ಮೆರವಣಿಗೆ ಜಾಥಾದಲ್ಲಿ ವಕೀಲ ರಾಕೇಶ್ ಕಿಶೋರ್ ಅವರ ಅಣುಕು ಶವವನ್ನು ಎಂ.ಜಿ.ರಸ್ತೆ ಮುಖಾಂತರ ಆಜಾದ್‌ಪಾರ್ಕ್ ವೃತ್ತದವರೆಗೆ ಹೊತ್ತು ಸಾಗಿದರು. ಜಾಥಾದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡು ಸಂವಿಧಾನಕ್ಕೆ ಅವಮಾನಿಸಿದ ವಕೀಲ ರ ವಿರುದ್ಧ ಧಿಕ್ಕಾರ ಕೂಗುತ್ತಾ ಆಜಾದ್‌ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡರು.
ಈ ವೇಳೆ ಮಾತನಾಡಿದ ಹೋರಾಟ ವೇದಿಕೆ ಮುಖಂಡ ಅನಿಲ್‌ಕುಮಾರ್ ಸಂವಿಧಾನ ಹಾಗೂ ಪ್ರ ಜಾಪ್ರಭುತ್ವದ ಉಳಿವಿಗಾಗಿ ಪಕ್ಷ ಹಾಗೂ ಧರ್ಮ ಬಿಟ್ಟು ಹೋರಾಡಬೇಕು. ದೇಶಕ್ಕೆ ಅತಿದೊಡ್ಡ ಕವಚ ಸಂವಿ ಧಾನ. ಈ ವಿರುದ್ಧವಾಗಿ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವ ವ್ಯಕ್ತಿಯನ್ನು ಬಂಧಿಸಿ ಗಲ್ಲುಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ರಾಜತಾಂತ್ರಿಕ ವ್ಯವಸ್ಥೆಯಲ್ಲಿ ರಾಜರೇ ಪ್ರಭುಗಳಾಗಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಜೆಗ ಳೇ ಪ್ರಭುಗಳು. ಅದಕ್ಕಾಗಿ ಡಾ|| ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ನ್ಯಾಯಾಂಗ ವ್ಯವಸ್ಥೆ ನಿರ್ಮಿಸಿದ ರು. ಆದರೆ ಮನುವಾದಿ ವ್ಯಕ್ತಿತ್ವವುಳ್ಳ ವಕೀಲರು ಮುಖ್ಯ ನ್ಯಾಯಮೂರ್ತಿಗೆ ಅಪಮಾನಿಸಿ ರಾಷ್ಟ್ರದ ಐಕ್ಯತೆ ಯಾದ ಸಂವಿಧಾನಕ್ಕೆ ಅಗೌರವಿಸಿದ್ದಾರೆ ಎಂದು ದೂರಿದರು.
ಇತ್ತೀಚಿನ ದಿನಗಳಲ್ಲಿ ಜೈಭೀಮ್ ಘೋಷಣೆಗಳು ಕೆಲವರಿಗೆ ನೋವುಂಟು ಮಾಡುತ್ತಿವೆ. ಈ ಪ್ರಕರಣ ಗಮನಿಸಿದರೆ ಇಂದಿಗೂ ಅಸೃಶ್ಯತೆ, ಜಾತಿವ್ಯವಸ್ಥೆ ಕಣ್ಮುಂದಿರಲು ಈ ಘಟನೆಯೇ ಸಾಕ್ಷಿಯಾಗಿದೆ. ಹೀಗಾಗಿ ಈ ಘಟನೆ ಮರುಕಳಿಸದೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕು. ಅಲ್ಲದೇ ವಕೀಲ ರಾ ಕೇಶ್ ಕಿಶೋರ್ ಪರವಾಗಿ ಸಮರ್ಥಿಸುವವರು ವಿರುದ್ಧ ಕ್ರಮ ವಹಿಸಬೇಕು ಎಂದರು.
ಸರ್ವರಿಗೂ ಸಮಪಾಲು, ಸಮಬಾಳು ಹಾಗೂ ಮತದಾನದ ಹಕ್ಕನ್ನು ನೀಡಿದವರು ಅಂಭೇಡ್ಕರ್. ಅದೇ ಸಂವಿಧಾನವನ್ನು ಓದಿದ ವಕೀಲ ರಾಕೇಶ್, ನ್ಯಾಯಮೂರ್ತಿಗಳಿಗೆ ಅಪಮಾನಿಸಿರುವುದು ಸರಿಯಲ್ಲ. ಭಾರತಕ್ಕೆ ಸಂವಿಧಾನವೇ ಶ್ರೇಷ್ಟ, ಹಾಗಾಗಿ ಸಾರ್ವಜನಿಕರು ಈ ಕೃತ್ಯವೆಸಗಿರುವವರ ವಿರುದ್ಧ ಎಲ್ಲೆಡೆ ಕೇಸು ದಾಖಲಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಜ್ ಮಾತನಾಡಿ ದೇಶದಲ್ಲಿ ಜರುಗದಂಥ ಅಹಿತಕರ ಘಟನೆ ಇಂ ದು ನಡೆದಿದೆ. ಆರ್‌ಎಸ್‌ಎಸ್ ಸಂಸ್ಕೃತಿಯ ವಕೀಲರು ನ್ಯಾಯಮೂರ್ತಿಗೆ ಶೂ ಎಸೆದು ದೇಶದ ನಾಗರೀ ಕತೆಗೆ ಧಕ್ಕೆಯುಂಟು ಮಾಡಿದೆ. ಇದು ಭಾರತೀಯರಿಗೆ ತುಂಬಲಾರದ ನೋವುಂಟಾಗಿದೆ. ಆದ್ದರಿಂದ ಅಪ ರಾಧವೆಸಗಿರುವ ವಕೀಲನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.
ಈಚೆಗೆ ಆರ್‌ಎಸ್‌ಎಸ್ ಶತಬ್ದಿ ಸಂಭ್ರಮದಲ್ಲಿ ದೇಶದ ವಿವಿಧೆಡೆ ಕವಾಯಿತು ನಡೆಸಿದ ಸ್ವಯಂ ಸೇವ ಕರು, ಒಮ್ಮೆಯಾದರೂ ಅಪಮಾನಕ್ಕೆ ಒಳಗಾದ ನ್ಯಾಯಮೂರ್ತಿಗಳ ಪರವಾಗಿ ನಿಲ್ಲದೇ ಮೌನ ವಹಿಸಿದೆ. ದೆಹಲಿಯಲ್ಲಿ ರೈತರು ಧಾರುಣ ಸಾವಿಗೆ ತುತ್ತಾದರೂ ಬಿಜೆಪಿ ಅಥವಾ ಆರ್‌ಎಸ್‌ಎಸ್ ಮಾತನಾಡಿಲ್ಲ. ಕೇವ ಲ ಕ್ಷುಲಕ ಕಾರಣಕ್ಕಾಗಿ ಅರ್ಥವಿಲ್ಲದೇ ಚಳುವಳಿ ನಡೆಸುತ್ತಿದೆ ಎಂದು ಆರೋಪಿಸಿದರು.
ಭಾರತ ಗೋಮಾಂಸ ರಫ್ತು ಮಾಡುವಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ನಿನ್ನೆ ನಡೆದ ಪ್ರತಿ ಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರು ಬೀಫ್ ಬಿರಿಯಾನಿ ಪ್ರದರ್ಶನ ಮಾಡುತ್ತಾರೆ. ಆದರೆ ಬೀಫ್ ಬಿರಿ ಯಾನಿ ತಂದುಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು ತಮ್ಮ ಅವಧಿಯಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ವಹಿಸದೇ, ಇದೀಗ ರಾಜಕೀಯಧಾಳವಾಗಿ ಬಳಸಿಕೊಳ್ಳುತ್ತಿದೆ ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ನ್ಯಾಯಮೂರ್ತಿಗೆ ಅವಮಾನಿ ಸಿರುವ ವಕೀಲನನ್ನು ರಾಷ್ಟ್ರದ್ರೋಹದಡಿ ಗಲ್ಲಿಗೇರಿಸಬೇಕು. ಸಾವಿರಾರು ವರ್ಷಗಳಿಂದೆ ವರ್ಣನೀತಿ ಪದ್ಧತಿ ಜಾರಿಯಾಗಿ ದಲಿತರಿಗೆ ಅನ್ಯಾಯ, ದಬ್ಬಾಳಿಕೆಗಳು ಅವ್ಯಹತವಾಗಿ ನಡೆದಿದೆ. ಇಂದಿಗೂ ದೇಶದಲ್ಲಿ ಶೇ.೮೫ ಬಹುಸಂಖ್ಯಾತರು ಅಧಿಕಾರ ಹೀನವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.
ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಮಾತನಾಡಿ ಮುಖ್ಯ ನ್ಯಾಯಾಧೀಶರು ದಲಿತರೆಂಬ ಕಾರ ಣಕ್ಕಾಗಿ ಮನುವಾದಿ ವಕೀಲರು ಶೂ ಎಸೆದು ಅವಮಾನಿಸಲು ಮುಂದಾಗಿರುವುದು ಖಂಡನೀಯ. ಕೂಡ ಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ವಕೀಲ ವೃತ್ತಿಗೆ ರಾಜೀನಾಮೆ ಸಲ್ಲಿಸಬೇಕು. ನ್ಯಾಯಮೂರ್ತಿಗೆ ಅ ಗೌರವಿಸುವ ವಕೀಲರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಜುಮ್ಮಾ ಮಸೀದಿಯ ನಾಸೀರ್ ಮಾತನಾಡಿ ಸಂವಿಧಾನ ಮತ್ತು ನ್ಯಾಯಪೀಠಕ್ಕೆ ಅಪಮಾ ನಿಸಿರು ವವರ ವಿರುದ್ಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಅನುಕಂಪ ವ್ಯಕ್ತಪ ಡಿಸದೇ ಕಾನೂನಾತ್ಮಕವಾಗಿ ನ್ಯಾಯಬದ್ಧ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ತಾಲ್ಲೂಕು ಗ್ಯಾರಂ ಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್, ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ, ನಗರಸಭೆ ಸದಸ್ಯ ಮುನೀರ್ ಅಹ್ಮದ್, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣ ಸೇಮಕ್ಕಿ ಲಕ್ಷ್ಮಣ್, ಮುಖಂಡರುಗಳಾದ ಹಿರೇಮಗಳೂರು ಜಗದೀಶ್, ಸತೀಶ್, ಕೋಟೆ ಜಗದೀಶ್, ಮೋ ಹನ್, ಲಾಕೇಶ್, ಸುಮಂತ್, ರಮೇಶ್, ಸುಧೀರ್ ಮತ್ತಿತರರು ಹಾಜರಿದ್ದರು.
Various organizations protest against insult to judges
Leave a comment