ಚಿಕ್ಕಮಗಳೂರು: ರಾಜ್ಯದ ಪ್ರಸಿದ್ಧ ಗಿರಿಧಾಮ ಕೆಮ್ಮಣ್ಣುಗುಂಡಿ ಸುತ್ತ ಮುತ್ತ ಹುಲಿ ಮತ್ತು ಕರಡಿ ಓಡಾಟದಿಂದ ಜನರಿಗೆ ಭಯ ಶುರುವಾಗಿದೆ.
ಕಳೆದ ಒಂದು ತಿಂಗಳಿಂದ ಹುಲಿ ರಾಜಾ ರೋಷವಾಗಿ ಸಂಜೆ ಆರರಿಂದ ಎಂಟು ಗಂಟೆವರೆಗೆ ಮತ್ತುಬೆಳಗ್ಗೆ ಏಳೆಂಟು ಗಂಟೆಯವರೆಗೆ ರಸ್ತೆ ಅಕ್ಕ ಪಕ್ಕ ಓಡಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕೆಮ್ಮಣ್ಣುಗುಂಡಿ, ಕಲ್ಲತ್ತಿಪುರ,ಕೇಶವಮೂರ್ತಿ ಎಸ್ಟೇಟ್ ಮತ್ತು ಸಣ್ಣಖಾನ್ ಎಸ್ಟೇಟ್ ಸುತ್ತಮುತ್ತಲಿನಲ್ಲಿ ಹುಲಿ ಓಡಾಡುತ್ತಿದೆ ಕಳೆದ ಮೂರು ದಿನಗಳ ಹಿಂದೆ ಕೆಮ್ಮಣ್ಣುಗುಂಡಿ ಐ,ಬಿ ಸಮೀಪ ಒಂದು ಗಂಟೆಗಳ ಕಾಲ ಓಡಾಟ ನಡೆಸಿದೆ.
ಈ ಬಗ್ಗೆ ಕೆಮ್ಮಣ್ಣುಗುಂಡಿ ರಾಜಭವನದ ನೌಕರರನ್ನು ಕೇಳಿದರೆ ಭದ್ರ ಅಭಯಾರಣ್ಯ ವಾಗಿರುವುದರಿಂದ ಪ್ರಾಣಿಗಳ ಓಡಾಟ ಸಹಜ ಎನ್ನುತ್ತಾರೆ.
ಹುಲಿ ಐದಾರು ದನಗಳ ಶಿಕಾರಿ ಮಾಡಿದೆ ಮನುಷ್ಯರ ತಂಟೆ ಬಂದಿಲ್ಲ ನಿಜ ಒಮ್ಮೆ ಮನುಷ್ಯನ ರಕ್ತ ನೋಡಿದರೆ ಕಷ್ಟ ಹೆಚ್ಚು ಕಡಿಮೆಯಾದರೆ ಯಾರು ಜವಬ್ದಾರರು ಅರಣ್ಯ ಇಲಾಖೆ ಗಮನಕ್ಕೆ ತಂದರು ನಮಗೂ ಇದಕ್ಕೂ ಸಂಭಂಧವಿಲ್ಲ ಎನ್ನುವಂತೆ ಇರುವುದನ್ನು ನೋಡಿದರೆ ಅರಣ್ಯ ಇಲಾಖೆ ಹುಲಿ ತಂದು ಬಿಟ್ಟಿರಬಹುದು ಎಂಬ ಅನುಮಾನವಿದೆ ಎನ್ನುತ್ತಾರೆ.
ಹುಲಿ ಜೊತೆಗೆ ಕರಡಿ ಕಾಟ ಶುರುವಾಗಿದ್ದು ಕಲ್ಲತ್ತಿಪುರ ಗುಡ್ಡದಲ್ಲಿ ಕರಡಿ ಅಗಾಗ್ಗೆ ಕಾಣಿಸಿಕೊಂಡು ಭಯ ತರುತ್ತಿದೆ ಎಂದು ಜನ ದೂರುತ್ತಿದ್ದಾರೆ.
ಪ್ರತಿನಿತ್ಯ ವಾಕಿಂಗ್ ಬರುವ ಹುಲಿಯನ್ನು ಟೈಗರ್ ಪ್ರಾಜೆಕ್ಟ್ ಒಳಗಡೆ ಬಿಡಲು ಒತ್ತಯಿಸಿದ್ದಾರೆ.
Tiger walking around Kemmanugundi
Leave a comment