ಚಿಕ್ಕಮಗಳೂರು: ನಗರಸಭೆ ಮಾಜಿ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಅವರಿಂದ ಕಪ್ಪಕಾಣಿಕೆ ಪಡೆದವರನ್ನು ಪಕ್ಷದಿಂದ ಅಮಾನತು ಮಾಡುವಂತೆ ನಗರಸಭೆ ಮಾಜಿ ಅಧ್ಯಕ್ಷ ವರಸಿದ್ದಿವೇಣುಗೊಪಾಲ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ನಗರಸಭೆ ಅಧ್ಯಕ್ಷರು ಅಧಿಕಾರ ಹಿಡಿಯುವ ಸಂದರ್ಭದಲ್ಲಿ ಕೆಲವು ಬಿಜೆಪಿ ಮುಖಂಡರು ಅವರಿಂದ ಹಣ ಪಡೆದು ಅಧ್ಯಕ್ಷರಿಗೆ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಸಾರ್ವಜನಿಕವಾಗಿ ಆರೋಪ ಕೇಳಿಬಂದಿದೆ ಎಂದು ಹೇಳಿದರು.
ಇಂತಹವರನ್ನು ಬಿಜೆಪಿ ಪಕ್ಷದಲ್ಲಿ ಇಟ್ಟುಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿ, ನಗರದ ಜನತೆ ಮೆಚ್ಚುವಂತಹ ಕೆಲಸ ಮಾಡಿದ್ದ ನನ್ನನ್ನು ಅಧ್ಯಕ್ಷ ಸ್ಥಾನದಿಂದ ರಾಜೀನಾಮೆ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ಪಕ್ಷದಿಂದ ಉಚ್ಛಾಟಿಸಲಾಯಿತು. ಆದರೆ, ಅಧ್ಯಕ್ಷರಿಂದ ಅಕ್ರಮವಾಗಿ ಹಣ ಪಡೆದವರಿಗೆ ಪಕ್ಷದಿಂದ ಯಾವುದೇ ಕ್ರಮ ಇಲ್ಲವೇ ಎಂದು ಪ್ರಶ್ನಿಸಿದರು.
ಕಪ್ಪಕಾಣಿಕೆ ಪಡೆಯುವಂತಹ ನೀಚ ಕೆಲಸ ಬಿಜೆಪಿಯಲ್ಲಿಲ್ಲ. ಹೀಗಾಗಿ ಹಣ ಪಡೆದವರನ್ನು ತಕ್ಷಣಕ್ಕೆ ಉಚ್ಛಾಟಿಸುವಂತೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ನಗರಸಭೆಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಕರವಸೂಲಿಯಲ್ಲಿ ನಮ್ಮ ನಗರಸಭೆ ಎರಡನೇ ಸ್ಥಾನದಲ್ಲಿತ್ತು. ಇದಕ್ಕೆ ಕೇಂದ್ರ ಸರಕಾರ ಬಹುಮಾನ ರೂಪದಲ್ಲಿ ೬ ಕೋಟಿ ರೂ.ಗಳನ್ನು ನಗರಸಭೆಗೆ ನೀಡಿದೆ. ೩೦ ತಿಂಗಳ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದೇನೆ. ಆದರೂ ನನ್ನ ಮೇಲೆ ಇಲ್ಲಸಲ್ಲದ ಆರೋಪವನ್ನು ಮಾಡಿದರು. ಈಗ ಪಕ್ಷದ ಒಳಗೇ ಇದ್ದುಕೊಂಡು ಅಕ್ರಮ ನಡೆಸುತ್ತಿರುವವರಿಗೆ ಯಾವ ಶಿಕ್ಷೆ ಎಂದು ಕೇಳಿದರು.
Those who received black money should be suspended from the party
Leave a comment