Home namma chikmagalur ಶ್ರೀ ಗುರು ದತ್ತಾತ್ರೇಯ ಪೀಠದ ವ್ಯಾಜ್ಯ – ಹಿಂದೂ–ಮುಸ್ಲಿಮರ ನಡುವೆ ಅಲ್ಲ
namma chikmagalurchikamagalurHomeLatest News

ಶ್ರೀ ಗುರು ದತ್ತಾತ್ರೇಯ ಪೀಠದ ವ್ಯಾಜ್ಯ – ಹಿಂದೂ–ಮುಸ್ಲಿಮರ ನಡುವೆ ಅಲ್ಲ

Share
????????????????????????????????????
Share

ಚಿಕ್ಕಮಗಳೂರು: ‘ಶ್ರೀ ಗುರುದತ್ತಾತ್ರೇಯ ಪೀಠದ ವ್ಯಾಜ್ಯ ಇರುವುದು ಶಾಖಾದ್ರಿ ವಂಶಸ್ಥರಿಗೂ ಹಾಗೂ ದತ್ತಪೀಠ ಸಂವರ್ಧನಾ ಸಮಿತಿಯ ನಡುವೆ. ಹಿಂದೂ–ಮುಸ್ಲಿಮರ ನಡುವೆ ಅಲ್ಲ’ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ ತಿಳಿಸಿದರು.

ಇನಾಂ ದತ್ತಾತ್ರೇಯ ಪೀಠದ ಒಟ್ಟು ಆಸ್ತಿ 1861 ಎಕರೆ ಇದ್ದು, ಹಿಂದೆ ಇದ್ದ ಗೌಸ್ ಮೊಹಿದ್ದೀನ್ ಶಾಖಾದ್ರಿ ಹಾಗೂ ಪೀರ್ ಮೊಹಿದ್ದೀನ್ ಶಾಖಾದ್ರಿ ಈ ಆಸ್ತಿಯಲ್ಲಿ ಸಾಕಷ್ಟು ಪರಭಾರೆ ಮಾಡಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದತ್ತಪೀಠವು ಮತ್ತು ಬಾಬಾಬುಡನ್ ದರ್ಗಾವು ಬೇರೆ ಬೇರೆ ಕಡೆ ಇರುವುದರಿಂದ ದತ್ತಪೀಠಕ್ಕೂ ಬಾಬಾಬುಡನ್‌ ದರ್ಗಾಕ್ಕೂ ಯಾವುದೇ ಸಂಬಂಧ ಇಲ್ಲ. ಬಾಬಾಬುಡನ್ ದರ್ಗಾ ಚಿಕ್ಕಮಗಳೂರು ತಾಲ್ಲೂಕು, ಜಾಗರ ಹೋಬಳಿ, ನಾಗೇನಹಳ್ಳಿ ಗ್ರಾಮದ ಸರ್ವೆ ನಂಬರ್– 57ರಲ್ಲಿ 111 ಎಕರೆ ಇದೆ.

ಈ ಆಸ್ತಿಗಳಲ್ಲಿ ಅನೇಕ ಆಸ್ತಿಗಳನ್ನು ಶಾ–ಖಾದ್ರಿಗಳು ಮಾರಾಟ ಮಾಡಿದ್ದಾರೆ ಎಂದು ದೂರಿದರು. ಡಿ.4 ರಂದು ದತ್ತಜಯಂತಿ ನಡೆಸಲಾಗುತ್ತಿದೆ. ಡಿ.2 ರಂದು ಅನುಸೂಯದೇವಿ ಅವರ ಪೂಜೆ ಹಾಗೂ ಸಂಕೀರ್ತನಾ ಯಾತ್ರೆ ನಡೆಯಲಿದೆ. ಡಿ.3 ರಂದು ನಗರದಲ್ಲಿ ಶೋಭಾಯಾತ್ರೆ ನಡೆಯುತ್ತದೆ.

ಡಿ.4 ರಂದು ದತ್ತಪೀಠದಲ್ಲಿ ದತ್ತಹೋಮ, ಪಾದುಕೆ ಪೂಜೆ, ಔದುಂಬರ ವೃಕ್ಷದ ಪೂಜೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷದ್ ಉಪಾಧ್ಯಕ್ಷ ಯೋಗರಾಜ್ ಅರಸ್, ಮಠ ಮಂದಿರಗಳ ಪ್ರಮುಖ್ ಶಿವಣ್ಣ, ಪುಷ್ಪ, ನಯನ್, ಸುನೀಲ್ ಉಪಸ್ಥಿತರಿದ್ದರು.

The dispute over the Sri Guru Dattatreya Peetha – not between Hindus and Muslims

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...