ಚಿಕ್ಕಮಗಳೂರು : ತರೀಕೆರೆ ಮಾಜಿ ಶಾಸಕ ಜಿಲ್ಲಾ ಕೇಂದ್ರ ಸಹಕಾರ (DCC)ಬ್ಯಾಂಕ್ ನ ಅಧ್ಯಕ್ಷರಾದ ಡಿ.ಎಸ್.ಸುರೇಶ್ ರವರ ತಂದೆ ದೋರನಾಳ್ ಗ್ರಾಮದ ಡಿ.ಸಿ. ಶಾಂತವೀರಪ್ಪ ಕಳೆದ ರಾತ್ರಿ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಸ್ವಗ್ರಾಮದ ಮನೆಯಲ್ಲಿ ಹಾರೈಕೆ ಪಡೆಯುತ್ತಿದ್ದ ಶಾಂತವೀರಪ್ಪನವರು ನಿನ್ನೆ ರಾತ್ರಿ 10,30 ರ ಸುಮಾರಿಗೆ ಕೊನೆಯುಸಿರೆಳೆದರು
ಅವರು ಪತ್ನಿ ಲಲಿತಮ್ಮ, ಮಕ್ಕಳಾದ ಗಿರೀಶ್, ಡಿ.ಎಸ್ ಸುರೇಶ್, ಸೇರಿದಂತೆ ನಾಲ್ವರು ಮತ್ತು ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಶಾಂತವೀರಪ್ಪ ಕೃಷಿ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದವರು .ಇವರ ನಿಧನಕ್ಕೆ ಮಾಜಿ ಶಾಸಕರುಗಳಾದ ಎಸ್.ಎಂ. ನಾಗರಾಜ್, ಬೆಳ್ಳಿ ಪ್ರಕಾಶ್. ಸಿ.ಟಿ.ರವಿ. ಜೀವರಾಜ್ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಪ ಸಭಾಪತಿ ಪ್ರಾಣೇಶ್ ಸೇರಿದಂತೆ ಹಲವರು ಕಂಬನಿ ಮಿಡಿದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಬ್ಯಾಂಕ್ ನ ಮಾಜಿ ಉಪಾಧ್ಯಕ್ಷರಾದ ಟಿ.ಎಲ್.ರಮೇಶ್. ಹಳಸೆ ಶಿವಣ್ಣ. ರಾಮಸ್ವಾಮಿ ಸತೀಶ್ ನಿರಂಜನ್ ಮತ್ತು ರಾಮಜ್ಜ ಪರಮೇಶ್ವರಪ್ಪ ಸೇರಿದಂತೆ ಬ್ಯಾಂಕ್ ನ ಸಿಬ್ಬಂದಿ ವರ್ಗದವರು ಕಂಬನಿ ಮಿಡಿದಿದ್ದಾರೆ.
Leave a comment