ಚಿಕ್ಕಮಗಳೂರು : ತರೀಕೆರೆಯ ಗಾಳಿಹಳ್ಳಿ ಕ್ರಾಸ್ ನಲ್ಲಿರುವ ಸಾಯಿ ಆಸ್ಪತ್ರೆ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ. ಪುರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಅದರಲ್ಲೂ 220 ht ಲೈನ್ ಗೆ ತಾಗಿಕೊಂಡೆ ಇದೆ ಕೆಇಬಿ ಯವರು ವಿದ್ಯುತ್ ಸರಬರಾಜು ಮಾಡಲು ಬರುವುದಿಲ್ಲ ಅದ್ದರಿಂದ ಅಕ್ರಮವಾಗಿ ವಿದ್ಯುತ್ ಪಡೆದಿರುವುದು ತರೀಕೆರೆಗೆ ಮಾತ್ರವಲ್ಲ ಮೆಸ್ಕಮ್ ನ ಲೈನ್ ಮ್ಯಾನ್ ನಿಂದ ಉನ್ನತ ಅಧಿಕಾರಿಗಳಿಂದ ತಿಳಿದಿದೆ ಇದರ ಬಗ್ಗೆ ಸಾಕಷ್ಟು ದೂರುಗಳು ಬಂದರು ಒಮ್ಮೆ ದೂರು ದಾಖಲಿಸದ್ದನ್ನು ಮಹನ್ ಸಾಧನೆ ಮಾಡಿದವರಂತೆ ಬಣ್ಣಿಸುತ್ತಾರೆ.
ನ್ಯೂಸ್ ಕಿಂಗ್ ಸುದ್ದಿ ಬಂದ ಮೇಲೆ ಕೆಇಬಿಯವರು ತನಿಖೆಗೆ ಹೋದರೆ ಕಟ್ಟಡದ ಮಾಲೀಕ ಕೆಇಬಿಯವರಿಗೆ ಅವಾಜ್ ಹಾಕಿದ್ದಲ್ಲದೆ ನನ್ನಿಂದ ತೆಗೆದುಕೊಂಡವರ ಲೆಕ್ಕ ಕೊಡಲೇ ಎನ್ನುತ್ತಲೇ ಹ್ಯಾಪ್ ಮೊರೆ ಹಾಕಿಕೊಂಡು ಬಂದಿದ್ದಾರೆ.
ಅಕ್ರಮ ಕಟ್ಟಡದಲ್ಲಿ ಆಸ್ಪತ್ರೆ ನಡೆಸಲು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಶ್ವಥ್ ಬಾಬು ಯಾವ ದಾಖಲೆ ಪರಿಶೀಲಿಸದೆ ಒಪ್ಪಿಗೆ ಕೊಟ್ಟಿರುವ ಮೈತ್ರಿಯ ಗುಟ್ಟು ಕೂಡ ಹೊರಬರಲಿದೆ.
ಅಶ್ವಥ್ ಬಾಬು ಕತೆ ಒಂದೇರಡಲ್ಲ ನೂರಾರು ಇವೆ ಮೊನ್ನೆ ಬುಕ್ಕಾಂಬುಧಿಲ್ಲಿ ಎಡವಟ್ಟು ವೈದ್ಯನಿಂದ ಮಗುವಿನ ಪ್ರಾಣ ಹೋಯಿತು ಆದರೆ ಈತ ತಿಪ್ಪೇ ಸಾರಿಸಿದ ಇಲಾಖೆಯಿಂದ ದೂರು ಏಕೆ ನೀಡಲಿಲ್ಲ ಸಾವಿನಲ್ಲು ಮೈತ್ರಿ ಶ್ರೀಮಂತಿಕೆಯಲ್ಲು ಮೈತ್ರಿ ಈ ಮೈತ್ರಿ ಬಗ್ಗೆಯೇ ತನಿಖೆ ನಡೆಸಬೇಕಾಗಿದೆ.
ಅಕ್ರಮಕ್ಕೆ ಸಹಕರಿಸಿರುವ ಮೆಸ್ಕಮ್ ಮತ್ತು ಅರೋಗ್ಯ ಇಲಾಖೆ ಹಾಗೂ ಅಕ್ರಮ ಕಟ್ಟಡದ ಬಗ್ಗೆ ಪುರಸಭೆಯವರು ಮೌನವಾಗಿರುವುದುರ ಬಗ್ಗೆ ಲೋಕಯುಕ್ತ ಮತ್ತು ಕೋರ್ಟ್ ಗೆ ಹೋಗಲು ಸಾರ್ವಜನಿಕರು ತಯಾರಾಗಿದ್ದಾರೆ.
Leave a comment