ಚಿಕ್ಕಮಗಳೂರು: ತರೀಕೆರೆ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಅಜ್ಜಂಪುರ ಯೋಗೀಶ್ ಉಪಾಧ್ಯಕ್ಷರಾಗಿ ಚಿಕ್ಕನವಂಗಲ ದ ದಿವಾಕರ ಮೂರ್ತಿ ಅವಿರೋಧವಾಗಿ ಅಯ್ಕೆ ಆಗಿದ್ದಾರೆ.
ನಿನ್ನೆ ನಡೆದ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಯಾರು ಚುನಾವಣೆಗೆ ಅರ್ಜಿ ಸಲ್ಲಿಸದಿದ್ದರಿಂದ ಇವರ ಆಯ್ಕೆಯನ್ನು ಘೋಷಣೆ ಮಾಡಲಾಯಿತು.
ಅವಿರೋಧವಾಗಿ ಅಯ್ಕೆ ಯಾದವರನ್ನು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಅಭಿನಂದಿಸಿ ಮಾತನಾಡಿ ಬ್ಯಾಂಕ್ ಇಪ್ಪತ್ತು ಲಕ್ಷ ಲಾಭಗಳಿಸಿದ್ದು ರೈತರು ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು.
ಕೃಷಿ ಸಾಲದ ಜೊತೆಗೆ ಕೃಷಿಯೇತರ ಸಾಲ ವಿತರಿಸುತ್ತಿದ್ದು ಬಂಗಾರದ ಸಾಲ,ಠೇವಣಿ ಸಾಲ ಇನ್ನಿತರ ಸಾಲ ನೀಡುತ್ತದೆ ಇದರ ಉಪಯೋಗ ಪಡೆದುಕೊಂಡು ಬ್ಯಾಂಕ್ ನ ಉನ್ನತಿಗೆ ಸಹಕರಿಸಲು ಕೋರಿದರು.
ಬ್ಯಾಂಕ್ ನಲ್ಲಿ ಇ ಸ್ಟ್ಯಾಂಪ್ ಸೌಲಭ್ಯ ಬಳಸಿಕೊಳ್ಳಲು ಕರೆ ನೀಡಿದ ಅವರು ಬ್ಯಾಂಕ್ ತೀರ ಹಳೇಯದಾಗಿದ್ದು ಈಗ ಹೊಸ ಕಟ್ಟಡ ಕಟ್ಟಲು ಎಲ್ಲರೂ ಸಹಕರಿಸಲು ಕೋರಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಎಲ್ಲರ ಸಲಹೆ ಪಡೆದು ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
Tarikere PLD Bank President Yogish Vice President Diwakar Murthy Aike
Leave a comment