ಚಿಕ್ಕಮಗಳೂರು : ಜಿಲ್ಲಾ ಕೇಂದ್ರದಲ್ಲಿರುವ ಮಲ್ಲೇಗೌಡ ಜನರಲ್ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಾಕರಾಗಿದ್ದ ಮೋಹನ್ ಕುಮಾರ್ ರವರಿಗೆ ತುಮಕೂರು ಜಿಲ್ಲೆಗೆ ವರ್ಗಾವಣೆ ಆಗಿದೆ ಅವರ ಸ್ಥಾನಕ್ಕೆ ಚಿತ್ರದುರ್ಗದಲ್ಲಿ ಸಸ್ಪೆಂಡ್ ಆಗಿದ್ದ ಡಾ. ಬಸವರಾಜ್ ಬರಲು ಕಾತರರಾಗಿದ್ದಾರೆ ಎಂಬ ಮಾಹಿತಿ ಇದೆ.
ಡಾ. ಮೋಹನ್ ಕುಮಾರ್ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಸಣ್ಣಪುಟ್ಟ ವ್ಯತ್ಯಾಸಗಳ ನಡುವೆ ಸಾರ್ವಜನಿಕರಿಗೆ ಸ್ಪಂದಿಸುವ ರೀತಿ ಮೆಚ್ಚುಗೆ ತರಿಸಿತ್ತು. ಸದಾ ಮಂದಸ್ಮಿತರಾಗಿ ಸಿಬ್ಬಂದಿ ಮತ್ತು ಜನಪ್ರತಿನಿದಿಗಳೊಂದಿಗೆ ಬೆರೆಯುತ್ತಿದ್ದರು ಇದೀಗ ವರ್ಗಾವಣೆ ಆಗಿದ್ದಾರೆ. ಮೋಹನ್ ಕುಮಾರ್ ಸ್ಥಾನಕ್ಕೆ ಬರುತ್ತಿರುವ ಡಾಕ್ಟರ್ ಬಸವರಾಜ್ ಇತಿಹಾಸ ಕೇಳಿದರೆ ಜಿಲ್ಲಾಸ್ಪತ್ರೆ ಗತಿಸ್ಥಿತಿ ಏನಾಗಬಹುದು ಎಂದು ಚರ್ಚೆ ಆಗುವುದರಲ್ಲಿ ಅನುಮಾನವಿಲ್ಲ ಎಂಬ ಮಾಹಿತಿ ಇದೆ. ಬಹುತೇಕ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿರುವ ಈತನನ್ನು ಕರೆಯುವ ಹಸು ಎಂದು ಕೂಡ ಕರೆಯುತ್ತಾರೆ ಇನ್ನು ಕೇವಲ ಹದಿಮೂರು ತಿಂಗಳುಗಳಲ್ಲಿ ನಿವೃತ್ತಿಯಾಗಲಿದ್ದು ಕೊನೆಯ ದಿನಗಳಲ್ಲಿ ಏಕೆ ಎಂಬ ಲೆಕ್ಕಾಚಾರ ಮಾಡಿಕೊಂಡು ಕೊಡುವುದನ್ನು ಕೊಟ್ಟು ಬಿಡುವುದನ್ನು ಬಿಟ್ಟು ಬರುತ್ತಿದ್ದಾರೆ .
ಕಳೆದ ವರ್ಷ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಅಸಡ್ಡೆತನ ಕಂಡು ಸ್ಥಳದಲ್ಲಿ ಅಮಾನತ್ತು ಮಾಡಿ ತನಿಖೆಗೆ ಆದೇಶ ಮಾಡಿದ್ದರು. ರಾಜಕೀಯ ಮತ್ತು ಜಾತಿ ಬಲದಿಂದ ಅಮಾನತ್ತು ರದ್ದುಪಡಿಸಿಕೊಂಡು ಬೀರೂರು ಆಸ್ಪತ್ರೆಗೆ ಬಂದು ಅಲ್ಲಿಂದ ಪ್ರಸ್ತುತ ಚನ್ನಗಿರಿಯಲ್ಲಿದ್ದು ಇನ್ನೂ ತನಿಖೆ ನಡೆಯುತ್ತಿರುವಾಗ ಅಯಾಕಟ್ಟಿನ ಸ್ಥಾನಕ್ಕೆ ಟವೆಲ್ ಹಾಕಿರುವುದು ಇವರ ಪ್ರಭಾವ ಹೇಗಿದೆ ಮುಂದೆ ಏನು ನಡೆಯಬಹುದು ಎಂಬುದೇ ಸದ್ಯದ ಕುತೂಹಲ
ಚಿತ್ರದುರ್ಗದ ಸಾರ್ವಜನಿಕರು ಮತ್ತು ಪತ್ರಕರ್ತರು ಹೇಳುವುದು ಕೇಳಿದರೆ ಬಸವರಾಜ್ ಅಲ್ಪ ಸ್ವಲ್ಪ ಗೌರವ ಉಳಿಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಏನಾಗುತ್ತದೆ ಎಂದು ಯೋಚಿಸುವಂತಾಗಿದೆ .
ತನಿಖೆ ನಡೆಯುತ್ತಿರುವಾಗ ಆಡಳಿತಾತ್ಮಕ ಹುದ್ದೆಗಳಿಗೆ ನೇಮಕ ಮಾಡಲು ಅವಕಾಶವಿಲ್ಲ ಅದರಲ್ಲೂ ಅರೋಗ್ಯ ಸಚಿವರೇ ಇವರ ಅವಾಂತರ ನೋಡಿ ಕೇಳಿ ದಂಗಾಗಿ ಅಮಾನತು ಮಾಡಿದ್ದನ್ನು ಮೀರಿ ಬರುತ್ತಿರುವುದು ನೋಡಿದರೆ ಅರೋಗ್ಯ ಸಚಿವರ ಮೇಲೆ ಸವಾರಿ ಮಾಡಿದಂತೆ ಆಗಿದೆ. ಇಲ್ಲಿನ ಶಾಸಕ ತಮ್ಮಯ್ಯರವರನ್ನು ವಿಚಾರಿಸಲು ನಾಲ್ಕು ಬಾರಿ ಕರೆ ಮಾಡಿದರು ಸಿಗಲಿಲ್ಲ.ಯಾಥಾ ರಾಜ ತಥಾ ಪ್ರಜೆ ಮತ್ತು ಅಧಿಕಾರಿಗಳು ಎನ್ನುವಂತಾಗಿದೆ.
Leave a comment