Home namma chikmagalur chikamagalur ಮನೆಯ ಮೇಲೆ ಕಲ್ಲು ತೂರಾಟ-ದೂರು ಪ್ರತಿ ದೂರು ದಾಖಲು
chikamagalurHomeLatest Newsnamma chikmagalur

ಮನೆಯ ಮೇಲೆ ಕಲ್ಲು ತೂರಾಟ-ದೂರು ಪ್ರತಿ ದೂರು ದಾಖಲು

Share
Share

ಚಿಕ್ಕಮಗಳೂರು: ನಗರದ ವಿಜಯಪುರ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರು ಹಿಂದೂಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಘಟನೆಯಿಂದಾಗಿ ಇಡೀ ನಗರ ಮಧ್ಯರಾತ್ರಿ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿತ್ತು.

ಕಳೆದ ಒಂದು ವಾರದಿಂದ ಕಿಡಿಗೇಡಿಗಳ ಗುಂಪು ಮನೆಗಳ ಮೇಲೆ ಕಲ್ಲು ಎಸೆಯುವುದು ಮತ್ತು ಕಳೆದ ಮೂರು ದಿನಗಳಿಂದ ಹೆಣ್ಣುಮಕ್ಕಳನ್ನು ಚುಡಾಯಿಸುವಂತಹ ಕೃತ್ಯಗಳಲ್ಲಿ ತೊಡಗಿದೆ ಎನ್ನುವುದು ಆಕ್ರೋಶಕ್ಕೆ ಕಾರಣವಾಯಿತು.

ಈ ಸಂಬಂಧ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಬಸವನಹಳ್ಳಿ ಪೊಲೀಸ್ ಠಾಣೆ ಮತ್ತು ಸರ್ಕಾರಿ ಆಸ್ಪತ್ರೆಯ ಮುಂದೆ ಎರಡೂ ಕೋಮಿನ ನೂರಾರು ಯುವಕರು ಜಮಾಯಿಸಿದ್ದರಿಂದ ತೀವ್ರ ಬೂದಿ ಮುಚ್ಚಿದ ವಾತಾವರಣ ನಿರ್ಮಾಣವಾಗಿತ್ತು.

ಕಲ್ಲು ಹೊಡೆದವರು ಇವರಲ್ಲ ಎಂದು ಒಂದು ಕಡೆಯವರು ವಾದಿಸಿದರೆ, ಹಲ್ಲೆ ಮಾಡಿದವರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಮತ್ತೊಂದು ಗುಂಪು ಪಟ್ಟು ಹಿಡಿಯಿತು. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತ ಪೊಲೀಸರು ಜಮಾಯಿಸಿದ್ದ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಹೈರಾಣಾದರು.

ಸದ್ಯ ಹಲ್ಲೆಗೊಳಗಾದ ಯುವಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.

ದೂರು ಪ್ರತಿ ದೂರು : ಮನೆಗಳ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಅಪ್ರಾಪ್ತ ಬಾಲಕರು ವರ್ಸಸ್ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದೂರು ಪ್ರತಿ ದೂರು ದಾಖಲಾಗಿದೆ.
ಮನೆಯ ಮಾಲೀಕರು ಅಪ್ರಾಪ್ತ ಬಾಲಕರ ಮೇಲೆ ದೂರು ದೂರು ನೀಡಿದ್ದರೆ.

ಅಪ್ರಾಪ್ತ ಬಾಲಕರು ಹಿಂದೂಪರ , ಬಿಜೆಪಿ ಮುಖಂಡರ ಮೇಲೆ ದೂರು ಕೊಟ್ಟಿದ್ದಾರೆ. ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ,ಪ್ರತಿದೂರು ದಾಖಲು ಮಾಡಲಾಗಿದೆ. ಹುಸೀನ್ , ಅಫೀದ್ ರ ದೂರಿನ ಮೇಲೆ‌ ಬಿಜೆಪಿ ಯುವ ಮುಖಂಡ ಸಂತೋಷ್ ಕೋಟ್ಯಾನ್ , ಭಜರಂಗದಳದ ಮುಖಂಡ ಶ್ಯಾಮ್ ವಿ ಗೌಡ ಮೇಲೆ ಕೇಸ್ . ಮನೆ ಮಾಲೀಕರಾದ ಸುಧಾ ನೀಡಿದ ದೂರಿನ ಮೇಲೆ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ.

ಸಂತೋಷ್ , ಶ್ಯಾಮ್ ಮೇಲೆ ಶಾಂತಿಭಂಗ , ಮಾರಕಾಸ್ತ್ರಗಳಿಂದ ಹಲ್ಲೆ , ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ಪ್ರಕರಣ ದಾಖಲು ಮಾಡಲಾಗಿದೆ. ಅಪ್ರಾಪ್ತ ಯುವಕರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು ಆಗಿದೆ. ಸದ್ಯಕ್ಕೆ ವಾತಾವರಣ ತಿಳಿಕೊಂಡಿದ್ದರೂ ರಾಜಕೀಯ ಪ್ರವೇಶ ಮತ್ತಷ್ಟು ರಾಡಿ ಮಾಡುವ ಸಾಧ್ಯತೆ ಇದೆ.

ಮುಸ್ಲಿಂ ಯುವಕರ ವಿರುದ್ಧವೇ ಕಿಡಿ: ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂ ಕುಟುಂಬದ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಈಗ ಅನಿರೀಕ್ಷಿತ ತಿರುವು ಕಂಡುಬಂದಿದೆ. ಘಟನೆ ನಡೆದ ಮನೆಯ ಪಕ್ಕದಲ್ಲೇ ವಾಸವಿರುವ ಇಕ್ಬಾಲ್ ಎಂಬುವವರು ಪೊಲೀಸರ ನಡೆ ಹಾಗೂ ಕಲ್ಲು ಹೊಡೆದ ಮುಸ್ಲಿಂ ಯುವಕರ ವಿರುದ್ಧವೇ ಕಿಡಿಕಾರುವ ಮೂಲಕ ಘಟನೆಯ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಬಂಧಿತ ಯುವಕರೇ ಕಲ್ಲು ಹೊಡೆದಿದ್ದನ್ನು ತಾವು ಕಣ್ಣಾರೆ ಕಂಡಿರುವುದಾಗಿ ಮತ್ತು ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ತಾವೇ ಹಿಡಿದುಕೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಘಟನೆ ನಡೆದ ಬಳಿಕ ಸಹಾಯಕ್ಕೆ ಧಾವಿಸಿದ ಬಿಜೆಪಿ ಮುಖಂಡ ಸಂತೋಷ್ ಕೋಟ್ಯಾನ್ ಮತ್ತು ಭಜರಂಗದಳದ ಶಾಮ್ ಅವರ ಮೇಲೆ ಪೊಲೀಸರು ಸುಖಾಸುಮ್ಮನೆ ಪ್ರಕರಣ ದಾಖಲಿಸಿರುವುದಕ್ಕೆ ಇಕ್ಬಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಗಲಾಟೆ ನಡೆಯುತ್ತಿದೆ ಎಂದು ತಿಳಿದು ರಕ್ಷಣೆಗೆ ಬಂದವರ ಮೇಲೆ ಕೇಸ್ ಹಾಕಿ ಟಾರ್ಗೆಟ್ ಮಾಡಲಾಗುತ್ತಿದೆ. ಪೊಲೀಸರಿಗೆ ಸ್ವಲ್ಪನಾದರೂ ಮಾನ-ಮರ್ಯಾದೆ ಇದೆಯೇ?” ಎಂದು ಅವರು ನೇರವಾಗಿಯೇ ಪ್ರಶ್ನಿಸಿದ್ದಾರೆ.

​ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಕಳೆದ ಒಂದು ವಾರದಿಂದ ದರೋಡೆ ಮಾಡುವ ಸಂಚಿನೊಂದಿಗೆ ಮನೆಯ ಹಿತ್ತಲಿನ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು ಎಂದು ಇಕ್ಬಾಲ್ ಮಾಹಿತಿ ನೀಡಿದ್ದಾರೆ.

ಹಗಲು ಹೊತ್ತಿನಲ್ಲೇ ಹೆಣ್ಣುಮಕ್ಕಳು ಇರುವ ಮನೆಗೆ ನುಗ್ಗಲು ಯತ್ನಿಸುವುದು ಅಕ್ಷಮ್ಯ ಅಪರಾಧ. ಈಗ ಆರೋಪಿಗಳು ಏಟು ತಿಂದವರಂತೆ ಆಸ್ಪತ್ರೆಯಲ್ಲಿ ನಾಟಕವಾಡುತ್ತಾ ಮಲಗಿದ್ದಾರೆ. ಅವರಿಗೆ ಯಾರೂ ಹೊಡೆದಿಲ್ಲ, ಹೊಡೆದಿದ್ದರೆ ಅದಕ್ಕೆ ಸಾಕ್ಷಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

​ಸಾಮಾನ್ಯವಾಗಿ ಸಣ್ಣಪುಟ್ಟ ವಿಚಾರಗಳಿಗೂ ಅಟ್ರಾಸಿಟಿ ಕೇಸ್ ದಾಖಲಿಸುವ ಪೊಲೀಸರು, ಈ ಗಂಭೀರ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾದವರ ಪರ ನಿಲ್ಲದೆ ಕಿಡಿಗೇಡಿಗಳ ಪರವಾಗಿ ನಿಂತಿರುವುದು ಯಾಕೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

Stone pelting on house – Complaint filed

Share

Leave a comment

Leave a Reply

Your email address will not be published. Required fields are marked *

Don't Miss

ರಾಜಕಾರಣಿಗಳೆಂಬ ಹೊಸ-ಹೊಸ ವೇಷದಾರಿಗಳು

ಹೊಸ,ಹೊಸ ವೇಷದಾರಿಗಳು ! ರಾಜಕಾರಣ ಮತ್ತು ಇಲಾಖೆಗಳಿಗೆ ಅವಿನಾಭಾವ,ಆಕ್ರಮ ಸಂಬಂಧ. ಕಳೆದ ನಲವತ್ತು ವರ್ಷಗಳಿಂದ ಸಾರ್ವಜನಿಕ ಬದುಕು,ಹೋರಾಟ ಪತ್ರಕರ್ತನಾಗಿ ಕಂಡಿರುವ ಸತ್ಯಗಳು. 1980 ರ ತನಕ ರಾಜಕಾರಣ ಅಷ್ಟು ಕುಲಷಿತ ವಾಗಿರಲಿಲ್ಲ...

ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಸಿ ಟಿ. ರವಿಗೆ ಅಭಿನಂದನೆ

ಚಿಕ್ಕಮಗಳೂರು: ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾದ ವಿಧಾನ ಪರಿಷತ್ತಿನ ಶಾಸಕ ಡಾ. ಸಿ ಟಿ. ರವಿಗೆ ಬಿಜಪಿ ಸೇರಿದಂತೆ ವಿವಿಧ ಸಂಘಟನೆ ನಾಯಕರು ಅಭಿನಂದನೆ ಸಲ್ಲಿಸಿದರು. ಸಂದರ್ಭದಲ್ಲಿ ನಮ್ಮ ಜಿಲ್ಲಾ ಬಿಜೆಪಿ...

Related Articles

ಪ್ರಿಯಾಂಕ್ ಖರ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಲಿ

ಚಿಕ್ಕಮಗಳೂರು: ಸಿಎಂ ಬದಲಾವಣೆ ವಿಷಯವನ್ನು ಮರೆಮಾಚುವ ಉz್ದೆÃಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಗುರಿಯಾಗಿಸಿಕೊಂಡು ಆರೋಪ...

ಜಿಲ್ಲೆಯಲ್ಲಿ ಲಿಂಗಾಯತರನ್ನು ತುಳಿಯುತ್ತಿರುವ ಸಿ.ಟಿ.ರವಿ

ಚಿಕ್ಕಮಗಳೂರು: ಜಿಲ್ಲೆಯ ಲಿಂಗಾಯತ ಸಮುದಾಯವನ್ನು ತುಳಿಯುವ ಕೆಲಸವನ್ನು ಬಿಜೆಪಿಯ ಹಿರಿಯ ಮುಖಂಡ ಸಿ.ಟಿ.ರವಿ ಮಾಡುತ್ತಿದ್ದಾರೆ ಎಂದು...

ರೈತನಿಂದ 50 ಸಾವಿರ ಕಿತ್ತುಕೊಂಡು ಹೋದ ದುಷ್ಕರ್ಮಿಗಳು

ಚಿಕ್ಕಮಗಳೂರು: ರೈತನೊಬ್ಬ ತಾನು ಬೆಳೆದ ತರಕಾರಿಯನ್ನು ಚಿಕ್ಕಮಗಳೂರು ಎಪಿಎಂಸಿಯಲ್ಲಿ ಮಾರಾಟ ಮಾಡಿ ಹಣ ಪಡೆದು ಊರಿಗೆ...

ರೈತರು ಕೇವಲ ಬೆಳೆಗಾರರಾಗದೆ ರಫ್ತುದಾರರಾಗಿ ಮಾರ್ಪಡಲಿ

ಚಿಕ್ಕಮಗಳೂರು:  ರೈತರು ಕೇವಲ ಬೆಳೆಗಳನ್ನು ಬೆಳೆಯುವುದಕ್ಕೆ ಸೀಮಿತರಾಗದೆ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ...