ಚಿಕ್ಕಮಗಳೂರು : ಅನ್ವರ್ ಮಾಣಿಪ್ಪಾಡಿ ಹೇಳಿಕೆ ಸೇರಿದಂತೆ ರಾಜ್ಯದ ಮುಡಾ ಹಗರಣ, ಕೋವಿಡ್ ವಾಲ್ಮೀಕಿ ಅಬಕಾರಿ ಎಲ್ಲವನ್ನೂ ಸಿಬಿಐ ತನಿಖೆಗೆ ವಹಿಸಿ ಅವಾಗ ಎಲ್ಲವೂ ದೂದ್ ಕಾ ದೂದ್ ಪಾನಿ ಕಾ ಪಾನಿ ಆಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ಸಿ ಕಲ್ಮರಡಪ್ಪ ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ ಖರ್ಗೆ ವಕ್ಫ್ ವಿಚಾರದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದು, ಅನ್ವರ್ ಮಾಣಿಪ್ಪಾಡಿ ಹೇಳಿಕೆ ಹಾಗೂ ವರದಿಯನ್ನು ಕೂಡಲೇ ಸಿಬಿಐಗೆ ವಹಿಸಿ ಎಂದು ಕಲ್ಮರಡಪ್ಪ ಆಗ್ರಹಿಸಿದ್ದಾರೆ. ಎಲ್ಲವನ್ನು ಸಿಬಿಐಗೆ ವಹಿಸಿ. ಇಲ್ಲದಿದ್ದರೆ ನಿಮ್ಮನ್ನು ಪುಕ್ಕಲು ಮುಖ್ಯಮಂತ್ರಿ ಎಂದು ಕರೆಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದ ಜನತೆಯ ತೆರಿಗೆ ಹಣವನ್ನು ವ್ಯರ್ಥ ಮಾಡಲು ಸದನವನ್ನು ಕರೆದಿದ್ದೀರಿ ಕರ್ನಾಟಕದಕ್ಕೆ ನಿಮ್ಮ ಕೊಡುಗೆ ಶೂನ್ಯ, ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬಳಸದೆ ಸದನದಲ್ಲಿ ವ್ಯರ್ಥ ಆರೋಪಗಳನ್ನ ಮಾಡುವ ಮೂಲಕ ಕಲಾಪವನ್ನು ಹಾಳು ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡದೆ ಜನರ ಗಮನವನ್ನು ಬೇರೆ ಸೆಳೆಯಲು ವಕ್ಫ್ ವಿಷಯವನ್ನು ಮುಂದಿಟ್ಟುಕೊಂಡು ನೀವು ಚರ್ಚಿಸುತ್ತಿದ್ದೀರಿ…?. ಅನ್ವರ್ ಮಾಣಿಪ್ಪಾಡಿಗೆ ಬಿ.ವೈ ವಿಜಯೇಂದ್ರ ಏಕೆ ಆಮಿಷ ಒಡ್ಡುತ್ತಾರೆ..?. ಪ್ರಕರಣದಲ್ಲಿ ಅವರ ಪಾತ್ರ ಏನಿದೆ..?. ಕಾಂಗ್ರೆಸಿಗರು ವಕ್ಫ್ ಆಸ್ತಿ ಕಬಳಿಸಿದರೆ, ವಿಜಯೇಂದ್ರ ಏಕೆ ಆಫರ್ ಮಾಡುತ್ತಾರೆ. ಎಂದು ಕಲ್ಮರಡಪ್ಪ ಹೇಳಿದರು.
ಇದೇ ವೇಳೆ ಮಾತನಾಡಿದ ಅವರು ಅನ್ವರ್ ಮಾಣಿಪ್ಪಾಡಿ ಪಕ್ಷದ ಶಿಸ್ತು ಉಲ್ಲಂಘಿಸಿದರೆ ಅವರ ಬಗ್ಗೆ ನಮ್ಮ ಕೇಂದ್ರದ ವರಿಷ್ಠರು ಚರ್ಚೆ ಮಾಡುತ್ತಾರೆ ನಮ್ಮ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದು ನಾನು ಹೇಳಲಾರೆ, ಕೆಲವು ಕಠಿಣ ಕ್ರಮಗಳನ್ನು ನಾವು ತೆಗೆದು ಕೊಳ್ಳಬೇಕಾಗುತ್ತದೆ ಎಂದರು
Leave a comment