Home namma chikmagalur chikamagalur ಪಂಚಾಯತ್ ಸದಸ್ಯರ ಅಧಿಕಾರ ಅವಧಿ ಮುಂದುವರೆಸುವಂತೆ ಮನವಿ
chikamagalurHomeLatest Newsnamma chikmagalur

ಪಂಚಾಯತ್ ಸದಸ್ಯರ ಅಧಿಕಾರ ಅವಧಿ ಮುಂದುವರೆಸುವಂತೆ ಮನವಿ

Share
Oplus_153223168
Share

ಚಿಕ್ಕಮಗಳೂರು: ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರ ಅವಧಿ ಆರು ತಿಂಗಳು ಮುಂದುವರೆಸುವಂತೆ ಅಜ್ಜಂಪುರ ತಾಲೂಕು ಗ್ರಾಮ ಪಂಚಾಯತ್ ಮಹಾ ಒಕ್ಕೂಟದ ಸದಸ್ಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆಲ ಗ್ರಾಮ ಪಂಚಾಯತ್ ಸದಸ್ಯರು, ಕೆಲವು ಗ್ರಾಮ ಪಂಚಾಯತ್‌ಗಳಿಗೆ ಫೆ.೨ಕ್ಕೆ ಮತ್ತೆ ಕೆಲವು ಮಾರ್ಚ್, ಏಪ್ರಿಲ್ ತಿಂಗಳಿಗೆ ಪಂಚಾಯತ್ ಅಧಿಕಾರ ಅವಧಿ ಮುಕ್ತಾಯ ಗೊಳ್ಳುತ್ತಿದೆ. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅವುಗಳನ್ನು ಪೂರ್ಣಗೊಳಿಸುವ ಸಲುವಾಗಿ ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರ ಅವಧಿಯನ್ನು ಆರು ತಿಂಗಳು ಮುಂದುವರೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕಖರ್ಗೆ ಅವರಿಗೆ ಮನವಿ ಮಾಡಿದರು.
ರಾಜ್ಯಮಟ್ಟದಲ್ಲಿ ಜ.27ಕ್ಕೆ ಹೋರಾಟ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವರಿಗೆ ಗ್ರಾಮ ಪಂಚಾಯತ್ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರ ಮೂಲಕ ಮನವಿ ಸಲ್ಲಿಸಿ ಈಗಿರುವ ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರ ಅವಧಿ 6 ತಿಂಗಳು ಮುಂದುವರೆಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಅಧಿಕಾರ ಅವಧಿ ಮುಗಿಯುವ ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಅಧಿಕಾರ ಅವಧಿ ಮುಗಿಯುವ ಪಂಚಾಯತ್‌ಗಳಿಗೆ ಕೂಡಲೇ ಚುನಾವಣೆ ನಡೆಸಬೇಕು. ಇಲ್ಲವೆ ಈಗಿರುವ ಪಂಚಾಯತ್ ಸದಸ್ಯರ ಅಧಿಕಾರ ಅವಧಿ 6 ತಿಂಗಳು ಮುಂದುವರೆಸಬೇಕೆಂದು ಆಗ್ರಹಿಸಿದರು.
ಅಧಿಕಾರ ಅವಧಿ ಮುಕ್ತಾಯಗೊಳ್ಳುವ ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಈಗಿರುವ ಆಡಳಿತ ಸಮಿತಿಯನ್ನೇ ನೂತನ ಆಡಳಿತ ಸಮಿತಿಯಾಗಿ ಮುಂದಿನ 6 ತಿಂಗಳಿಗೆ ನೇಮಕಮಾಡಬೇಕೆಂದು ಸಚಿವರನ್ನು ಕೋರಲಾಗುವುದು ಎಂದು ತಿಳಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರುಗಳು 2020ರ ಮೇ.12 ರಂದು ಜಂಟಿ ಸುದ್ದಿಗೋಷ್ಟಿ ನಡೆಸಿ ಗ್ರಾಮ ಪಂಚಾಯತ್‌ಗಳು ಪ್ರಜಾಪ್ರಭುತ್ವದ ತಳಪಾಯ, ಅವುಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸದೆ ಇರುವ ಆಡಳಿತ ಸಮಿತಿ ಅವಧಿಯನ್ನು 6 ತಿಂಗಳು ವಿಸ್ತರಿಸಬೇಕೆಂದು ಆಗಿದ್ದ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ಈಗ ಅವರುಗಳು ಅಧಿಕಾರದಲ್ಲಿದ್ದು, ಈಗಿರುವ ಆಡಳಿತ ಸಮಿತಿ ಅಧಿಕಾರವನ್ನು 6 ತಿಂಗಳು ಮುಂದುವರೆಸಲು ಮುಂದಾಗುವ ಮೂಲಕ ಪ್ರಜಾಪ್ರಭುತ್ವ ಅಡಿಪಾಯ ಗಟ್ಟಿಗೊಳಿಸಬೇಕೆಂದು ಒತ್ತಾಯಿಸಿದರು.
ವಿವಿಧ ಗ್ರಾಮ ಪಂಚಾಯತ್ ಸದಸ್ಯರಾದ ಶಂಕರಪ್ಪ, ದಿನೇಶ್, ತಿಮ್ಮಯ್ಯ, ಪುಷ್ಪಾ, ಶಕುಂತಲಾ, ಸಾಕಮ್ಮ, ನಾಗರಾಜ್, ಶಶಿಕಲಾ, ಮಂಜಪ್ಪ ಇದ್ದರು.
Request to extend the tenure of Panchayat members
Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...