ಚಿಕ್ಕಮಗಳೂರು : ಕಳೆದ ಹತ್ತು ವರ್ಷಗಳ ಹಿಂದೆ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಗೌರವ ನೀಡುವ ಮೂಲಕ ಗೌರವಿಸುವ ಸಂಪ್ರದಾಯ ಪಾಲಿಸುತಿತ್ತು ಇದರಿಂದ ಹಲವು ಗಣ್ಯರಿಗೆ ಪ್ರಶಸ್ತಿಯೂ ದೊರಕಿದೆ .
ಸಾಹಿತ್ಯ ಸೇವೆ, ಕ್ರೀಡಾ ಪಟುಗಳು, ಪತ್ರಕರ್ತರು, ಕಲೆ ಮತ್ತು ಸಮಾಜಸೇವೆ ಹೀಗೆ ವಿವಿಧ 7 ಕ್ಷೇತ್ರದವರಿಗೆ ಸನ್ಮಾನ ಮಾಡಲಾಗುತ್ತಿತ್ತು. ಜಿಲ್ಲಾ ಕನ್ನಡ ರಾಜ್ಯೋತ್ಸವ ಸಮಿತಿಯಲ್ಲಿ ಒಂದೇ ವರ್ಗದವರ ಪ್ರಭಾವ ಮತ್ತು ಲಾಭಿ ನಡೆಸಿ ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಿಸುವವರ ವಿರುದ್ದ ಕೆಲವರು ತಿರುಗಿ ಬಿದ್ದಿದ್ದರಿಂದ ಪ್ರಶಸ್ತಿ ನೀಡುವ ತೀರ್ಮಾನಕ್ಕೆ ಜಿಲ್ಲಾಡಳಿತ ಪುಲ್ ಸ್ಟಾಪ್ ನೀಡಿತ್ತು.
ಕಳೆದ ಹತ್ತು ವರ್ಷಗಳಿಂದ ನಿಂತಿರುವ ಪ್ರಶಸ್ತಿ ಕೊಡಿಸುವ ಪರಿ ಈ ಬಾರಿ ರಾಜ್ಯೋತ್ಸವ ಸಮಿತಿಯಲ್ಲಿ ಇರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ್ ನೇತೃತ್ವದಲ್ಲಿ ಸರ್ಕಸ್ ನಡೆಯುತ್ತಿದೆ ಇದಕ್ಕೆ ಕನ್ನಡದ ಕಟ್ಟಾಳು ಕಾಮಾತ್, ರಾಧಾಕೃಷ್ಣ, ಗ್ಯಾರಂಟಿ ಶಿವಾನಂದಸ್ವಾಮಿ, ಕನ್ನಡ ಪರ ಸಂಘಟನೆಯವರ ಪ್ರಯತ್ನ ಫಲಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಪಾಪ ಲಾಭಿ ಮಾಡಿ ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಿಸಲಾಗದೆ ಕೈ,ಕೈ ಹಿಸುಕಿ ಕೊಂಡವರು ಜಿಲ್ಲಾಡಳಿತದ ಕ್ರಮ ಸರಿಯಿಲ್ಲ ಎನ್ನುತ್ತಿದ್ದಾರಂತೆ, ಈ ನಡುವೆ ಜಿಲ್ಲಾಧಿಕಾರಿಗಳು ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆನ್ನುವ ಮಂದಿಯು ಇದ್ದಾರೆ.
ನಿನ್ನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಕೊಡುವ ಬಗ್ಗೆ ಸೂರಿ ಶ್ರೀನಿವಾಸ್ ಶಿಫಾರಸ್ಸು ಕುರಿತು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ಬರೆಯಲಿದ್ದು ಸ್ಥಗಿತಗೊಂಡಿರುವ ಪ್ರಶಸ್ತಿ ಈ ಬಾರಿಯಾದರೂ ಕೊಡುವ ತೀರ್ಮಾನ ಆಗಲಿದೆಯಾ ಎಂಬ ಕುತೂಹಲ ಜೀವಂತವಾಗಿದೆ. ಈ ನಡುವೆ ಪ್ರಶಸ್ತಿ ಕೊಡುವ ಬಗ್ಗೆ ಯಾರು ತಕರಾರು ಎತ್ತಿಲ್ಲವಾದರೂ ಸಾಮಾಜಿಕ ನ್ಯಾಯ ಹಾಗೂ ನಿಯಮಪಾಲನೆ ಮೂಲಕ ಪ್ರಶಸ್ತಿ ಪ್ರಕಟಿಸಲಿ ಎಂಬ ಮಾತುಗಳು ಕೇಳಿ ಬಂದಿವೆ.
ಪ್ರಶಸ್ತಿಗಳು ಹುಡುಕಿಕೊಂಡು ಬರುವ ಜಮಾನ ಮುಗಿದು ಹಲವು ವರ್ಷಗಳೇ ಆಗಿವೆ ಈಗೇನಿದ್ದರು ಲಾಬಿ, ಜಾತಿ, ಪ್ರಭಾವ ಕೊನೆಗೆ ಪಾರ್ಟಿ ಇಲ್ಲ ಎಂದರೆ ಪ್ರಶಸ್ತಿಯಲ್ಲಿ ಬರುವ ನಗದು ಹಣದಲ್ಲಿ ಹಂಚಿಕೆ ಇಲ್ಲ ಎಂದರೆ ಕೊನೆಗೆ ಬಕೇಟ್ ಹಿಡಿಯುವವರಿಗೆ ಎನ್ನುವಂತಾಗಿದೆ. ಎಲೆಮರೆಯಂತೆ ಕೆಲಸ ಮಾಡುವ ಸಮಾಜ ಸೇವಕರು, ಸಾಹಿತಿಗಳು, ಕ್ರೀಡಾಪಟುಗಳು, ಕಲಾವಿದರು, ಪತ್ರಕರ್ತರು ಮತ್ತಿತರರನ್ನು ಗೌರವಿಸವ ಕಾಲ ಇನ್ನೂ ಕಷ್ಟ,ಕಷ್ಟ ಅಲ್ಲವೇ, ಎನ್ನಿಸುತ್ತದೆ ನೀವು ಏನಂತಿರೀ?
Leave a comment