Home namma chikmagalur chikamagalur ಮಾ.11ಕ್ಕೆ ಲಿಂಗತ್ವ ಅಲ್ಪಸಂಖ್ಯಾತರ ಸ್ವಾಭಿಮಾನಿ ನಡಿಗೆ
chikamagalurHomeLatest Newsnamma chikmagalur

ಮಾ.11ಕ್ಕೆ ಲಿಂಗತ್ವ ಅಲ್ಪಸಂಖ್ಯಾತರ ಸ್ವಾಭಿಮಾನಿ ನಡಿಗೆ

Share
Oplus_16908288
Share

ಚಿಕ್ಕಮಗಳೂರು: ಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ನಾವು ಬದುಕಿದ್ದೇವೆ, ಅನ್ಯಾಯದ ವಿರುದ್ಧ ಪ್ರತಿರೋಧಿಸುತ್ತೇವೆ, ಅದಕ್ಕೆ ಹೆಮ್ಮೆಯಿಂದ ನಡೆಯುತ್ತಿದ್ದೇವೆ ಎಂಬ ಸ್ವಾಭಿಮಾನಿ ನಡಿಗೆ-೨೦೨೬ ನ್ನು ಮಾ.೧೧ ರಂದು ಬೆಳಗ್ಗೆ ೧೧ ಗಂಟೆಗೆ ಅಜಾದ್ ಪಾರ್ಕ್ ವೃತ್ತದಿಂದ ಸರ್ಕಾರಿ ನೌಕರರ ಭವನದವರೆಗೆ ನಡೆಯಲಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಿಂಗತ್ವ ಅಲ್ಪಸಂಖ್ಯಾತರ ಮುಖಂಡ ಮೇಘ ಮಲ್ನಾಡ್, ೨೦೨೬-೨೭ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾವುದೇ ಹೊಸ ಅನುದಾನ ಅಥವಾ ಸಮಗ್ರ ಕಾರ್ಯಕ್ರಮಗಳನ್ನು ಘೋಷಿಸದೇ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದನ್ನು ತೀವ್ರವಾಗಿ ಖಂಡಿಸಿದರು.

ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈಗಾಗಲೇ ಚಿಕ್ಕಮಗಳೂರಿನಲ್ಲಿ ಸ್ವಾಭಿಮಾನಿ ನಡಿಗೆಯನ್ನು ನಡೆಸಲಾಗುತ್ತಿದ್ದು, ಸತತ ಹೋರಾಟದ ಫಲವಾಗಿ ಕಳೆದ ದಶಕದಲ್ಲಿ ಒಂದೇ ಲಿಂಗದ ವ್ಯಕ್ತಿಗಳ ನಡುವಿನ ಸಮ್ಮತಿಯ ಲೈಂಗಿಕ ವರ್ತನೆಯ ನಿರಪರಾಧಿಕರಣ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಕ್ಕುಗಳ ಮಾನ್ಯತೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ.೧ ರಷ್ಟು ಮೀಸಲಾತಿ ಸೇರಿದಂತೆ ಪ್ರಮುಖ ಕಾನೂನು ನೀತಿಗಳು ಬದಲಾವಣೆಗಳಾಗಿವೆ ಎಂದರು.

ರಾಜ್ಯಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಲ್ಲಿ ಸೇರಿಸಿ ಸಮುದಾಯದ ಸರ್ವೆ ನಡೆಸಿ, ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ ಎಂದ ಅವರು, ಕೂಡಲೇ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು, ಸರ್ವತೋಮುಖ ಅಭಿವೃದ್ಧಿಗಾಗಿ ಕನಿಷ್ಠ ೨೫೦ ಕೋಟಿ ರೂಗಳನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.

ಸಮುದಾಯದವರಿಗಾಗಿ ವಸತಿ, ಹಾಸ್ಟೆಲ್, ಶಾರ್ಟ್ ಸ್ಟೇ ಹೋಂಗಳನ್ನು ತಕ್ಷಣ ಒದಗಿಸಬೇಕು, ಪ್ರತಿ ವರ್ಷ ಕನಿಷ್ಠ ೫೦೦ ಮನೆಗಳನ್ನು ಹಂಚಿಕೆ ಮಾಡಬೇಕು, ಜೀವನೋಪಾಯ, ಆಹಾರ ಮತ್ತು ಸಾಮಾಜಿಕ ಭದ್ರತೆಗಾಗಿ ಕನಿಷ್ಠ ಪ್ರತಿ ವ್ಯಕ್ತಿಗೆ ೨ ಎಕರೆ ಕೃಷಿ ಯೋಗ್ಯ ಭೂಮಿಯನ್ನು ನೀಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಫಾತಿಮಾನಾಜಿಯಾ, ಆದಿಲ್. ಪ್ರೀತಮ್, ಮೋಹನ್‌ಕುಮಾರ್ ಉಪಸ್ಥಿತರಿದ್ದರು.

Pride walk for gender minorities on March 11th

Share

Leave a comment

Leave a Reply

Your email address will not be published. Required fields are marked *

Don't Miss

ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹಿಲ್ ಷರೀಫ್‌ ಬಂದನಕ್ಕೆ ಬಿಜೆಪಿ ಆಗ್ರಹ

ಚಿಕ್ಕಮಗಳೂರು : ಇತ್ತೀಚೆಗೆ ದಲಿತ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿರುವ ಕಾಂಗ್ರೆಸ್‌ನ ಮುಸ್ಲಿಂ ಮುಖಂಡ ರಾಹಿಲ್ ಷರೀಫ್‌ನನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಪಿ ವೆಂಕಟೇಶ್ ಆಗ್ರಹಿಸಿದರು. ನಗರದ...

ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಹಿಲ್ ಶರೀಫ್ ಪಕ್ಷದಿಂದ ಉಚ್ಚಾಟನೆ

ಚಿಕ್ಕಮಗಳೂರು: ಜಿಲ್ಲಾ ಯುವ ಕಾಂಗ್ರೆಸ್ ಘಟಕದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅಸಭ್ಯ ವರ್ತನೆಯ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಹಿಲ್ ಶರೀಫ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ....

Related Articles

ಅಂತರ ಜಿಲ್ಲಾ ಕಳ್ಳರ ಜಾಲವನ್ನು ಭೇದಿಸಿದ ಜಿಲ್ಲಾ ಪೊಲೀಸರು

ಚಿಕ್ಕಮಗಳೂರು:  ಜಿಲ್ಲೆಯ ಸಬ್ಬರಾಯಪಟ್ಟಣ ಮತ್ತು ತರೀಕೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಮನೆಗಳ ಬೀಗ ಮುರಿದು ಕಳ್ಳತನ...

ಸದೃಢ ಭಾರತ ನಿರ್ಮಿಸುವ ಗುರಿ ಯುವಜನತೆ ಮೇಲಿದೆ

ಚಿಕ್ಕಮಗಳೂರು:  ಸದೃಢ ಭಾರತ ನಿರ್ಮಿಸುವ ಜವಾಬ್ದಾರಿ ಯುವಜನತೆಯ ಮೇಲಿ ದೆ. ಯುವಸಂಸತ್ ಒಂದು ಸ್ಪರ್ಧೆಯಲ್ಲ. ಸಂಸತ್ತಿನ...

ಬೈಕ್ -ಕಾರು ಡಿಕ್ಕಿಗೆ ಮಹಿಳೆ ಸಾವು

ಕಡೂರು:  ಬೀರೂರು ಸಮೀಪದ ಬಳ್ಳಿಗನೂರು ಗ್ರಾಮದಲ್ಲಿ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ನಲ್ಲಿದ್ದ...

ಅಕ್ರಮ ಇಸ್ಪೀಟು ಜೂಜಾಟ-9 ಜನ ಬಂಧನ

ಕೊಪ್ಪ: ತಾಲ್ಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಇಸ್ಪೀಟು ಜೂಜಾಟದ ಮೇಲೆ ಪೊಲೀಸರು ದಾಳಿ...