ಚಿಕ್ಕಮಗಳೂರು: ಆಕಾಶದಲ್ಲಿ ಹಾರುತ್ತಿದ್ದ ಹುಲಿ, ಜಿಂಕೆ, ಆನೆ, ಸಿಂಹ, ಚಿಟ್ಟೆಗಳು, ಪಕ್ಷಿಗಳು, ಗಿಡಮರಗಳು ಸೇರಿದಂತೆ ವಿವಿಧ ಬಣ್ಣದ ಗಾಳಿಪಟಗಳು ನೋಡುಗರ ಗಮನಸೆಳೆದವು.
ನಗರದ ಪಟಾಕಿ ಮೈದಾನದಲ್ಲಿ ಭೂಮಿಕ ಸಂಸ್ಥೆ ವಾರ್ಷಿಕೋತ್ಸವ, ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತೋತ್ಸವ ಅಂಗವಾಗಿ ಆಯೋಜಿಸಿದ್ದ ಗಾಳಿಪಟ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯವಿದು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸುನಿಲ್ ಕುಮಾರ್ ಅವರು ಗಾಳಿಪಟ ಸ್ಪರ್ಧೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ, ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಗಾಳಿಪಟ ಹಾರಿಸುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದರು
ಈ ನಿಟ್ಟಿನಲ್ಲಿ ಭೂಮಿಕ ಟಿವಿ ವಾರ್ಷಿಕೋತ್ಸವದ ಅಂಗವಾಗಿ ಒಂದು ವಾರಗಳ ಕಾಲ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಸಾರ್ವಜನಿಕರಿಗೆ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಿ ಯಶಸ್ವಿಯಾಗಿ ನಡೆದಿದ್ದು, ನಶಿಸುತ್ತಿರುವ ಸ್ಪರ್ಧೆಯನ್ನು ಪುನಹ ನೆನಪು ಮಾಡಿಕೊಂಡು ಗಾಳಿಪಟ ಸ್ಪರ್ಧೆ ನಡೆಸುತ್ತಿರುವ ಭೂಮಿಕಾ ಟಿವಿ ಕಾರ್ಯ ಶ್ಲಾಘನೀಯ ಎಂದರು.
ಭೂಮಿಕಾ ಟಿ.ವಿ. ಸಂಸ್ಥಾಪಕರಾದ ಅನಿಲ್ ಆನಂದ್ ಅವರು ಮಾತನಾಡಿ ಗಾಳಿಪಟ ಹಾರಿಸುವುದು ಮನರಂಜನೆಯ ಜೊತೆಗೆ ಆರೋಗ್ಯ, ಸಂಸ್ಕೃತಿ ಮತ್ತು ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸುತ್ತದೆ ಈ ನಿಟ್ಟಿನಲ್ಲಿ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಅಧ್ಯಕ್ಷರಾದ ಹನುಮಂತಪ್ಪ ಅವರು ಮಾತನಾಡಿ ಸಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮ ಸಂಘಟನೆ ಅನೇಕ ಹೋರಾಟಗಳನ್ನ ಮಾಡುತ್ತಿದ್ದು, ಭೂಮಿಕ ಟಿವಿ ಸದಾ ನಮ್ಮ ಹೋರಾಟದ ಸುದ್ದಿಗಳನ್ನು ಪ್ರಸಾರ ಮಾಡುವುದರ ಜೊತೆಗೆ ಅರಣ್ಯ ಸಂರಕ್ಷಣೆ ಕುರಿತು ಅನೇಕ ಕಾರ್ಯಕ್ರಮಗಳನ್ನ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಚಂದನ ವಾಹಿನಿ ನಿರೂಪಕ ಕೃಷ್ಣಮೂರ್ತಿ ಮಾತನಾಡಿ ರಾಜಕೀಯ ಕಿತ್ತಾಟದ ಸುದ್ದಿಗಳನ್ನೇ ಹೆಚ್ಚಾಗಿ ತೋರಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಬಡವರ ದೀನದಲಿತರ ಪರ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಭೂಮಿಕ ಟಿವಿ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ದಿವಾಕರ್, ಸಾಮಾಜಿಕ ನ್ಯಾಯ ಸಮಿತಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನಾಗರಾಜ್, ರೈತ ಸಂಘ ತಾಲೂಕು ಉಪಾಧ್ಯಕ್ಷ ಚಂದ್ರಶೇಖರ್, ಕಾಂತರಾಜ್, ಕಾರ್ಯದರ್ಶಿ ಲೋಕೇಶ್, ಸ್ವಸ್ಥಭೂಮಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ಗುರುಮೂರ್ತಿ ನಾಡಿಗ್ ,ಭಾರತೀಯ ಕಿಸಾನ್ ಸಂಘ ಜಿಲ್ಲಾಧ್ಯಕ್ಷ ರಾಘವೇಂದ್ರ ಮತ್ತವರ, ಸವಿತಾ ಸಮಾಜ ಜಿಲ್ಲಾಧ್ಯಕ್ಷ ವಿಶ್ವನಾಥ್ ಸಂಕಲ್ಪ, ಜೆಸಿಐ ಚಿಕ್ಕಮಗಳೂರು, ಮಲ್ನಾಡ್ ಅಧ್ಯಕ್ಷರಾದ ತಿಲಕ್‌ದತ್ ಉಪಸ್ಥಿತರಿದ್ದರು.
People who are passionate about kite flying
Leave a comment