Home namma chikmagalur ಉಪಟಳ ನೀಡುತ್ತಿದ್ದ ಒಂಟಿ ಸಲಗ ಸೆರೆಹಿಡಿಯಲು ಕಾರ್ಯಾಚರಣೆ
namma chikmagalurchikamagalurHomeLatest News

ಉಪಟಳ ನೀಡುತ್ತಿದ್ದ ಒಂಟಿ ಸಲಗ ಸೆರೆಹಿಡಿಯಲು ಕಾರ್ಯಾಚರಣೆ

Share
Share

ನರಸಿಂಹರಾಜಪುರ: ತಾಲ್ಲೂಕಿನ ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಸೆರೆಹಿಡಿಯಲು ಕಾರ್ಯಾಚರಣೆಗಿಳಿದ ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ತಾಲ್ಲೂಕಿನ ನರಸಿಂಹರಾಜಪುರ ಅರಣ್ಯ ವಲಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳೆದ ಆರು ತಿಂಗಳಿನಿಂದ ಉಪಟಳ ನೀಡುತ್ತಿದ್ದ ಒಂಟಿ ಸಲಗ ಸೆರೆ ಹಿಡಿಯಲು ಆಗಸ್ಟ್ 2ರಂದು ಅನುಮತಿ ದೊರೆತ್ತಿತ್ತು. ಆನೆ ಸೆರೆಹಿಡಿಯಲು ಶಿವಮೊಗ್ಗ ತಾಲ್ಲೂಕು ಸಕ್ರೆಬೈಲು ಆನೆ ಶಿಬಿರದಲ್ಲಿದ್ದ 4 ಹಾಗೂ ಕುಶಾಲಪುರದ ದುಬಾರೆ ಆನೆ ಶಿಬಿರದ 3 ಆನೆಗಳನ್ನು ಕಡಹಿನಬೈಲು ಗ್ರಾಮ ಪಂಚಾಯಿತಿಯ ಗಾಂಧಿ ಗ್ರಾಮಕ್ಕೆ ಭಾನುವಾರ ತರಿಸಲಾಗಿತ್ತು.

ಸೋಮವಾರ ಬೆಳಿಗ್ಗೆ 5ರ ವೇಳೆಗೆ ಆನೆ ಬೀಡುಬಿಟ್ಟಿರುವ ಸ್ಥಳವನ್ನು ಕಂಡು ಹಿಡಿಯಲು ಶಿವಮೊಗ್ಗದ ಅರವಳಿಕೆ ತಜ್ಞ ಡಾ. ಮುರುಳಿ ಮನೋಹರ, ಕೊಡಗಿನ ಉಪವಲಯ ಅರಣ್ಯಾಧಿಕಾರಿ, ಶಾರ್ಫ್ ಶೋಟರ್ ರಂಜನ್ ನೇತೃತ್ವದ ತಂಡ ತೆರಳಿತ್ತು.

ಬೆಳಿಗ್ಗೆ 10ರ ವೇಳೆಗೆ ಆನೆ ಇರುವ ಸ್ಥಳ ತಂಡ ಪತ್ತೆ ಮಾಡಿತು. ಹಳೇ ಹಾರೆಕೊಪ್ಪ ಭಾಗದ ಅರಣ್ಯ ಪ್ರದೇಶದಲ್ಲಿ ಆನೆ ಇರುವ ಸ್ಥಳದಲ್ಲಿ ಒಂದು ಕಡೆ ದೊಡ್ಡ ಕೆರೆಯಿತ್ತು. ಇನ್ನೊಂದು ಮಲ್ಲಂದೂರು ಗುಡ್ಡ ಇತ್ತು. ಆನೆ ಅರಣ್ಯ ಬಿಟ್ಟು ಎಲ್ಲಿ ಹೋಗದಂತೆ ಯೋಜನೆ ರೂಪಿಸಲಾಯಿತು. ಮಧ್ಯಾಹ್ನ 1 ಗಂಟೆ 5 ನಿಮಿಷ ಸಮಯದಲ್ಲಿ ಆನೆಗೆ ಅರವಳಿಕೆಯನ್ನು ಬಂದೂಕಿನ ಮೂಲಕ ನೀಡಲಾಯಿತು. ನಂತರ ಮಧ್ಯಾಹ್ನ 2ರ ವೇಳೆಗೆ 7 ಸಾಕಾನೆಗಳನ್ನು ಆನೆ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಪ್ರಜ್ಞೆ ತಪ್ಪಿದ್ದ ಒಂಟಿಸಲಗಕ್ಕೆ ಸರಪಳಿ ಬೀಗಿದು 4.30ರ ವೇಳೆಗೆ ಅರಣ್ಯದಿಂದ ಗ್ರಾಮದ ವ್ಯಾಪ್ತಿಗೆ ತರಲಾಯಿತು.

ಕಳೆದ 6 ತಿಂಗಳಿನಿಂದ ಒಂಟಿ ಸಲಗ ರೈತರು ಬೆಳೆದ ಬೆಳೆ ಹಾನಿ ಮಾಡುತ್ತಿತ್ತು. ಇದೇ ವ್ಯಾಪ್ತಿಯಲ್ಲಿ ಒಂಟಿ ಸಲಗ ಬೀಡುಬಿಟ್ಟಿರುವುದರಿಂದ ಸೀತೂರು ಗ್ರಾಮದ ಕೆರೆಗದ್ದೆ ಉಮೇಶ್ ಮತ್ತು ಮಡಬೂರು ಗ್ರಾಮದ ಎಕ್ಕಡ ಬೈಲಿನ ವರ್ಗೀಸ್ ಎಂಬುವರನ್ನು ಕೊಂದಿರಬಹುದು ಎಂಬ ಶಂಕೆಯಿದೆ. ಅಂದಾಜು 20 ವರ್ಷದ ಗಂಡಾನೆಯಾಗಿದೆ ಎಂದು ಕೊಪ್ಪ ಡಿಎಫ್‌ಒ ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಕೊಪ್ಪ ಎಸಿಎಫ್ ವಿಜಯಶಂಕರ್, ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ, ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್, ಭದ್ರಾ ಅಭಯಾರಣ್ಯದ ವಲಯ ಅರಣ್ಯಾಧಿಕಾರಿ ಗೌರವ್, ಸಕ್ರಬೈಲು ಮತ್ತು ದುಬಾರೆ ಆನೆ ಶಿಬಿರದ ಮಾವುತರೂ ಸೇರಿ 150 ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು. ಸಾವಿರಾರೂ ಸಂಖ್ಯೆ ಯಲ್ಲಿ ಗ್ರಾಮಸ್ಥರು ಸೆರೆಹಿಡಿದ ಒಂಟಿ ಸಲಗವನ್ನು ವೀಕ್ಷಿಸಲು ಜಮಾಯಿಸಿದ್ದರು.

Operation to capture a lone wolf who was causing trouble

Share

Leave a comment

Leave a Reply

Your email address will not be published. Required fields are marked *

Don't Miss

ತಾಯಿಗೆ ಬೆಂಕಿ ಹಾಕಿ ಕೊಂದ ಮಗ

ಚಿಕ್ಕಮಗಳೂರು: ತಾಯಿಯನ್ನು ಮಗ ಬೆಂಕಿ ಹಾಕಿ ಸುಟ್ಟು ಕೊಂದಿರುವ ಅಮಾನುಷ ಘಟನೆ ನಡೆದಿದೆ. ಆಲ್ದೂರು ಠಾಣೆ ವ್ಯಾಪ್ತಿಯ ಅರೆನೂರು ಗ್ರಾಮದಲ್ಲಿ ನಡೆದಿದ್ದು ವಿಷಯ ತಿಳಿದ ತಕ್ಷಣ ಪೊಲೀಸ್ ಸಿಬ್ಬಂದಿ ತೆರಳಿದ್ದಾರೆ. Son...

ಸಖರಾಯಪಟ್ಟಣದ ಅಗ್ರಹಾರ ಬಳಿ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: ಸಖರಾಯಪಟ್ಟಣ ಹೋಬಳಿ ಅಗ್ರಹಾರ ಗ್ರಾಮದ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗೆ ಪರ-ವಿರೋಧ ವ್ಯಕ್ತವಾಗಿದ್ದು, ಉಭಯ ಕಡೆ ಅಹಿತಕರ ಘಟನೆ ನಡೆಯುವ ಸಂಭವವಿರುವುದರಿಂದ ಸ್ಥಳದಿಂದ ಒಂದು ಕಿ.ಮೀ. ವ್ಯಾಪ್ತಿಯವರೆಗೆ ಜುಲೈ ೨೮ ರಿಂದ...

Related Articles

ಆ.10ಕ್ಕೆ ಬಸವ ಮಾಚಿದೇವ ಶ್ರೀಗಳ ಸಾಮೂಹಿಕ ಪಾದಪೂಜೆ

ಚಿಕ್ಕಮಗಳೂರು: ಶ್ರಾವಣ ಮಾಸದ ಪೂಜೆ ಕಾರ್ಯಕ್ರಮದ ಅಂಗವಾಗಿ ಬಸವನಹಳ್ಳಿಯ ಜಿಲ್ಲಾ ಮಡಿವಾಳರ ಸಂಘದ ಆವರಣದಲ್ಲಿ ಆ.೧೦...

ಸಮರ್ಪಕ ಪಡಿತರ ವಿತರಣೆಗೆ ರಾಜ್ಯ ಪಡಿತರ ಸಂಘ ಆಗ್ರಹ

ಚಿಕ್ಕಮಗಳೂರು:  ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ಪಡಿತರ ಹಂಚಿಕೆ ಮಾಡಬೇಕು. ಅನ್ನಭಾಗ್ಯ ಅಕ್ಕಿಯ...

ಆ.7-8 ಕ್ಕೆ ಸಿಪಿಐ ಸಮಾವೇಶ-ಬಹಿರಂಗ ಅಧಿವೇಶನ

ಚಿಕ್ಕಮಗಳೂರು: ಭಾರತ ಕಮ್ಯುನಿಷ್ಟ ಪಾರ್ಟಿ ಸ್ಥಾಪನೆಯಾಗಿ ೧೦೦ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆ.೭ ಮತ್ತು ೮...

ಬೀದಿಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳು-ಜಿಲ್ಲೆಯಾದ್ಯಂತ ಪರದಾಡಿದ ಪ್ರಯಾಣಿಕರು

ಚಿಕ್ಕಮಗಳೂರು: ವೇತನ ಪರಿಷ್ಕರಣೆ, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನೌಕರರು...