ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಲಘು ವಿಮಾನವೊಂದು ತಳಮಟ್ಟದಲ್ಲಿ ಹಾರಾಟ ನಡೆಸಿ ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿದ್ದ ಲಘು ವಿಮಾನ ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಹಾರಾಟ ನಡೆಸಿದೆ ಎಂಬುದು ಲಭ್ಯ ಮೂಲಗಳಿಂದ ತಿಳಿದು ಬಂದಿದ್ದು ಇಲ್ಲಿನ ಜನರು ನಿರಾಳರಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಎರೆಡೆರೆಡು ಬಾರಿ ತಳಮಟ್ಟದಲ್ಲಿ ಹಾರಾಟ ನಡೆಸಿ ಸಂಚಲನ ಮೂಡಿಸಿತ್ತು. ಯಾವ ಉದ್ದೇಶಕ್ಕಾಗಿ ಲಘು ವಿಮಾನ ಹಾರಾಟ ನಡೆಸುತ್ತಿದೆ. ವಿಮಾನದಲ್ಲಿ ಯಾರಿದ್ದಾರೆ. ಎಲ್ಲಿಂದ ವಿಮಾನ ಬಂದಿತ್ತು ಎಂಬ ಹಲವು ಪ್ರಶ್ನೆಗಳು ಇಲ್ಲಿನ ಜನರಲ್ಲಿ ಮೂಡಿತ್ತು. ಅರಣ್ಯ, ಪೊಲೀಸ್ ಇಲಾಖೆಗೂ ಯಾವುದೇ ಮಾಹಿತಿ ಇರಲಿಲ್ಲ. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆತ್ತಿದ್ದು, ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಪಶ್ಚಿಮಘಟ್ಟ ಪ್ರದೇಶದಲ್ಲಿ ಹಾರಾಟ ನಡೆಸಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಬಾಳೆಹೊನ್ನೂರು ಮತ್ತು ಕಳಸ ತಾಲೂಕು ಭಾಗದಲ್ಲಿ ಸಂಚಲನ ಮೂಡಿಸಿದ್ದು ಅessಟಿಚಿ ೨೦೮ gಡಿಚಿಟಿಜ ಛಿಚಿಡಿಚಿvಚಿಟಿ ಸೆಣ್ಣ ವಿಮಾನವಾಗಿದ್ದು, ಈ ಪ್ರದೇಶದಲ್ಲಿ ವೈಜ್ಞಾನಿಕ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸಿದೆ ವಿಶೇಷವಾಗಿ ಭೂ ಭೌತಿಕ ಸಮೀಕ್ಷೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಭೂಮಿಯ ಅಡಿಭಾಗವನ್ನು ಗಾಳಿಯಿಂದ ಮ್ಯಾಪಿಂಗ್ ಮಾಡುವ ಕಂಪನಿ ಇದನ್ನು ನಿರ್ವಹಣೆ ಮಾಡಲಾಗುತ್ತಿದ್ದು, ವಿಮಾನದ ಹಿಂಭಾಗದಲ್ಲಿ ಉದ್ದವಾದ ಸೂಜಿತರಹ ಕಾಣುವ ಸಾಧನ ಇದೆ. ಇದನ್ನು ಮ್ಯಾಗ್ನೆಟೋಮೀಟರ್ ಸ್ಟಿಂಗರ್ ಎಂದು ಕರೆಯ ಲಾಗುತ್ತದೆ. ಇದು ಭೂಮಿಯ ಚುಂಬಕ ವ್ಯಾತ್ಯಾಸಗಳನ್ನು ಅಳೆಯಲು ಬಳಸಲಾಗುತ್ತದೆ ಎಂದು ಹೇಳ ಲಾಗುತ್ತದೆ.
ಈ ಲಘು ವಿಮಾನವೂ ಮಂಗಳೂರು(ಐಎಕ್ಸ್ಇ) ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿ ಚಿಕ್ಕಮಗ ಳೂರು ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಈ ವಿಮಾನವು ಕಡಿಮೆ ಎತ್ತರದಲ್ಲಿ ಹಾರಾಡುವಂತಹ ವಿಮಾನವಾಗಿದ್ದು, ಜಿಗ್ ಜಾಗ್ ಅಥವಾ ಜಾಲರಿಯ ರೀತಿಯಲ್ಲಿ ಹಾರಾಟ ನಡೆಸುತ್ತದೆ. ಒಂದೇ ಪ್ರದೇಶದ ಮೇಲೆ ಮತ್ತೇ ಮತ್ತೇ ಹಾರಾಟ ನಡೆಸುತ್ತದೆ ಎಂದು ತಿಳಿದು ಬಂದಿದೆ.
ಈ ಲಘು ವಿಮಾನವೂ ಖನಿಜ ಸಂಪತ್ತು. ಭೂಗರ್ಭ ರಚನೆ, ಭೂಗರ್ಭ ಜಲ ಸಂಪನ್ಮೂಲ, ಚುಂಬಕ ಕ್ಷೇತ್ರದ ಬದಲಾವಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಈ ಹಿನ್ನಲೆಯಲ್ಲಿ ಲಘು ವಿಮಾನ ಹಾರಾಟ ನಡೆಸಿದೆ ಎಂಬುದು ಲಭ್ಯ ಮೂಲಗಳಿಂದ ತಿಳಿದು ಬಂದಿದ್ದು, ಒಟ್ಟಾರೆ ಕಳೆದ ಮೂರು ದಿನಗಳ ಹಿಂದೆ ತಳ ಮಟ್ಟದಲ್ಲಿ ಹಾರಾಟ ನಡೆಸಿ ಜನರ ಆತಂಕಕ್ಕೆ ಕಾರಣವಾಗಿದ್ದ ವಿಮಾನವೂ ಭೂ ಭೌತಿಕ ಸಮೀಕ್ಷೆಗೆ ಹಾರಾಟ ನಡೆಸಿದ್ದೆಂದು ತಿಳಿದು ಇಲ್ಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
Online phishing fraud for a person from Balehonnur
Leave a comment