ಚಿಕ್ಕಮಗಳೂರು : ಸರ್ಕಾರ ರೈತರ ಅನುಕೂಲಕ್ಕಾಗಿ ರಾಗಿ ಖರೀದಿ ಕೇಂದ್ರಗಳನ್ನು ರಾಜ್ಯ ಸಹಕಾರ ಮಹಾ ಮಂಡಳದ ಮೂಲಕ ತೆರೆದಿದೆ, ರಾಗಿ ಬೆಳೆಯುವ ಪ್ರದೇಶದಲ್ಲಿ ಖರೀದಿ ಕೇಂದ್ರ ಕೆಲ ದಿನಗಳು ಮಾತ್ರ ತೆರೆದಿತ್ತವೆ. ನಂತರ ಇಲ್ಲಿನ ಗೋಳು ಕೇಳುವವರಿಲ್ಲ,
ಜಿಲ್ಲೆಯ ಚಿಕ್ಕಮಗಳೂರು, ಕಡೂರು, ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರಗಳನ್ನ ತೆರೆಯಲಾಗಿದೆ, ಇಲ್ಲಿ ರೈತರು ಸಾಲುಗಟ್ಟಿ ನಿಂತು ಪರದಾಡುವುದು ನೋಡಿದರೆ ಅಯ್ಯೋ ಪಾಪ ಎನ್ನಿಸುವುದರ ಜೊತೆಗೆ ಜನಪ್ರತಿನಿಧಿಗಳು ಅಧಿಕಾರಿಗಳು ಬದುಕಿದ್ದಾರಾ ಎಂಬ ಆಕ್ರೋಶ ಬರುತ್ತದೆ. ಇನ್ನು ವಿರೋಧ ಪಕ್ಷದವರು ತುಟಿ ಬಿಚ್ಚುವುದಿಲ್ಲ. ರೈತ ಸಂಘಗಳ ಕೂಗು ಇವರಿಗೆ ಕೇಳಿಸುವುದಿಲ್ಲ. ಖಾತೆದಾರ ರೈತರು ಖರೀದಿ ಕೇಂದ್ರಗಳಲ್ಲಿ ಮೊದಲು ರಿಜಿಸ್ಟರ್ ಮಾಡಿಸಬೇಕು. ರೈತರು ಬೆಳಗ್ಗೆ ನಾಲ್ಕು ಗಂಟೆಗೆ ಸರದಿ ಸಾಲಿನಲ್ಲಿ ನಿಂತರೆ ಮುಗಿತು ದಿನವೂ ಕಾಫಿ,ತಿಂಡಿ,ಊಟ ಇಲ್ಲ ಕೊನೆಗೆ ನೀರು ಸಿಗುವುದಿಲ್ಲ. ಈ ಚಳಿಯಲ್ಲಿ ಗಡಗಡ ನಡುಗುವ ಹಿರಿಯ ವಯಸ್ಸಿನವರು ಮತ್ತು ಮಹಿಳೆಯರ ಪರದಾಟ ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ .ಇದರ ಮಧ್ಯೆ ಪದೇ,ಪದೇ ಕೈಕೊಡುವ ವಿದ್ಯುತ್ ಮತ್ತು ಸರ್ವರ್ ರಿಂದಾಗಿ ದಿನವೂ ಸರದಿ ಸಾಲಿನಲ್ಲಿ ನಿಲ್ಲಲೇ ಬೇಕು.
ಮಾರ್ಕೆಟಿನಲ್ಲಿ ರಾಗಿ ಬೆಲೆ ಮೂರು ಸಾವಿರ ಸಿಕ್ಕರೆ ಹೆಚ್ಚು ಸರ್ಕಾರ ಬೆಂಬಲ ಬೆಲೆ ಕೊಡುವುದರಿಂದ 4290 ರೂ ಸಿಗುತ್ತದೆ ಎಂದು ರೈತರು ಪರದಾಡುತ್ತಿದ್ದಾರೆ. ಕಳೆದ ವರ್ಷ ರಿಜಿಸ್ಟರ್ ಮಾಡಿಸಿದ ಹಲವು ರೈತರಿಗೆ ಇನ್ನೂ ಹಣ ಪಾವತಿ ಆಗಿಲ್ಲ ಎಂಬ ದೂರುಗಳು ಸಾಕಷ್ಟು ಇವೆ.
ಇನ್ನು ಜನಪ್ರತಿನಿಧಿಗಳು ರೈತರೇ ದೇಶದ ಬೆನ್ನೆಲುಬು ಎಂದು ಭಾಷಣ ಮಾಡಿ ಹೋದವನು ಬಾರ್_ಟೂರು ಕ್ವಾರೆ ಕಮೀಷನ್ ಲೆಕ್ಕಾಚಾರದಲ್ಲಿ ಇದ್ದಾರೆ. ವಿರೋಧ ಪಕ್ಷದವರು ಇವರ ಜೊತೆಗೆ ಸಾಟಿ ವ್ಯವಹಾರದಲ್ಲಿ ಇದ್ದರೆ ರೈತ ಸಂಘದ ಮಾತುಗಳು ಕೇಳುವವರೇ ಇಲ್ಲ ಜೊತೆಗೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ರೈತರು ಮಾತ್ರ ಜೀವನ ಪೂರ ಪರದಾಡುತ್ತಲೇ ಜೀವ ಬಿಡಬೇಕಾಗಿದೆ.
Leave a comment