ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ಮೋಟಮ್ಮಹಿಂದುವಿಚಾರಧಾರೆಯ ಪ್ರಮೋದ್ ಮುತಾಲಿಕ್ ವೇದಿಕೆ ಹಂಚಿಕೊಂಡು ನಂಜಿನ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ನಲ್ಲಿ ಕಿಚ್ಚು ಹಚ್ಚಿಕೊಂಡಿದೆ.
ನಯನ ಪ್ರಬಲ ಸಮರ್ಥನೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಶಾಸಕರ ಸಭೆಯಲ್ಲಿ ಹದಿನೈದು ನಿಮಿಷಗಳ ಕಾಲ ನಯನಗೆ ಬುದ್ದಿ ಹೇಳಿ ಅಸಮಾಧಾನ ಸೂಚಿಸಿ ಇನ್ನೂ ಮುಂದೆ ಇಂತಹ ಅನಾಹುತ ಸೃಷ್ಟಿಸಿಕೊಳ್ಳ ಬೇಡಿ ಎಂದು ಹೇಳಿರುವುದನ್ನು ಸಭೆಯಲ್ಲಿ ಇದ್ದ ಶಾಸಕರುಗಳು ಅಲ್ಲಿ ಇಲ್ಲಿ ಹೇಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಕಾಂಗ್ರೆಸ್ ವಕ್ತಾರ ಹೆಚ್.ಹೆಚ್.ದೇವರಾಜ್ ಒಂದು ಹೆಜ್ಜೆ ಮುಂದೆ ಹೋಗಿ ಇಂತವರ ಗೆಲುವಿಗೆ ಸಹಕರಿಸಿದ ಪ್ರಗತಿಪರರು, ದಲಿತ ಸಂಘಟನೆಗಳು ಮತ್ತು ರೈತ ಸಂಘದವರು ಗಾಂಧಿ ಪ್ರತಿಮೆಯ ಮುಂದೆ ಪಶ್ಚಾತ್ತಾಪ ಪಟ್ಟುಕೊಳ್ಳಲು ಮುಂದಾಗಿದ್ದಾರೆ.
ಗಣಪತಿ ಸಮಿತಿಯ ಸಭೆಯಲ್ಲಿ ರಾಜಕೀಯ ಮಾತು ಎಷ್ಟರಮಟ್ಟಿಗೆ ಸರಿ.ಮೂರು ವರ್ಷಗಳ ನಂತರ ಬಿಜೆಪಿ, ಬಿ.ಎಸ್.ಪಿ.ಮತ್ತು ಎಸ್.ಡಿ.ಪಿ.ಐ ಸೇರುವ ಮಾತು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿಂಬಾಲಕ ರಾದ ನಯನಮೋಟಮ್ಮ ಅಲಿಯಾಸ್ ನಯನಕಮಲಮ್ಮ ಆಗಲು ಈ ರೀತಿಯ ಹೇಳಿಕೆ ನೀಡಿರಬಹುದು ಎನ್ನುವವರು ಇದ್ದಾರೆ.ಏನೇ ಆಗಲಿ ವಕೀಲರಾಗಿದ್ದ ನಯನ ಕ್ಷೇತ್ರದಲ್ಲಿ ಪದೇ,ಪದೇ ಗೊಂದಲ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ನ ಹಲವು ಮುಖಂಡರಿಗೆ ಇರಿಸು ಮುರಿಸು ತಂದಿದೆ ಮುಂದೆ ಇದೆ ಹಬ್ಬ ಎನ್ನುತ್ತಿದ್ದಾರೆ.
Nayana Nanjindu
Leave a comment