Home undercover police:ನಕ್ಸಲ್ ರವೀಂದ್ರ ಪತ್ತೆಗಾಗಿ ಮಾರುವೇಷ ಧರಿಸಿದ ಪೊಲೀಸರು
HomeLatest News

undercover police:ನಕ್ಸಲ್ ರವೀಂದ್ರ ಪತ್ತೆಗಾಗಿ ಮಾರುವೇಷ ಧರಿಸಿದ ಪೊಲೀಸರು

Share
????????????????????????????????????
Share

ಚಿಕ್ಕಮಗಳೂರು:  ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ ಎಂದು ಘೋಷಿಸಿಲು ಕೋಟೆ ತೋಟ ರವೀಂದ್ರ ಮತ್ತು ತೊಂಬಟ್ಟು ಲಕ್ಷ್ಮಿ ಎಂಬುವವರನ್ನು ಪತ್ತೆ ಹಚ್ಚ ಬೇಕಾಗಿತ್ತು.

ಅದು ಅಷ್ಟು ಸುಲಭವಾಗಿ ಇರಲಿಲ್ಲ ಕಾರಣ ರವೀಂದ್ರ ಪಶ್ಚಿಮ ಘಟ್ಟಗಳ ಕಾಡಿನ ಇಂಚು,ಇಂಚು ಮಾಹಿತಿ ಜೊತೆಗೆ ಪೊಲೀಸ್ ರಿಂದ ತಪ್ಪಿಸಿ ಕೊಳ್ಳುವ ಚಾಣಕ್ಯತೆ ಹೊಂದಿದ್ದ ಇದರಿಂದಾಗಿ ಪೊಲೀಸ್ ರು ಮಾರು ವೇಷಭದಲ್ಲಿ ಕಾಡು ಸುತ್ತಲೂ ಪ್ಲಾನ್ ಮಾಡಿಕೊಂಡಿದ್ದರು.

ಈ ವಿಚಾರ ಶಾಂತಿಗಾಗಿ ನಾಗರೀಕ ವೇದಿಕೆಯವರೆಗೆ ತಿಳಿದಿತ್ತು. ರವೀಂದ್ರ ಸಂಪರ್ಕ ಮಾಡಲು ಅಷ್ಟು ಸುಲಭವಿರಲಿಲ್ಲ ಏಕೆಂದರೆ ಕಾಡಿನ ಇಂಚು,ಇಂಚು ಜಾಗ ಮತ್ತು ಸ್ಥಳೀಯರ ಸಹಕಾರ ಪಡೆದಿದ್ದ

ಮುಂಡಗಾರು ಲತಾ ಟೀಮ್ ಜೊತೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಹೊಂದಿದ್ದರಿಂದ ಅವರ ಗುಂಪು ಬಿಟ್ಟು ಹೊರನಡೆದಿದ್ದ ಹೀಗಾಗಿ ಇವನನ್ನು ಸಂಪರ್ಕ ಮಾಡಲು ಸಮಸ್ಯೆ ಆಗಿತ್ತು. ಆದ್ದರಿಂದ ಪುನರ್ವಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ ವೇದಿಕೆಯವರಿಗೂ ತಲೆ ಬಿಸಿಯಾಗಿತ್ತು.

ಇದರ ಮಧ್ಯೆ ಗುಪ್ತಚರ ಇಲಾಖೆಯ ರಮೇಶ್ ರಾವ್ ಎಂಬುವರು ಗಡ್ಡ ಬಿಟ್ಟು ಮಾಸಿದ ಶರ್ಟ್, ಪಂಚೆ ಉಟ್ಟರೆ ಗಿರೀಶ್ ಎಂಬುವರು ಟೋಪಿ,ಕನ್ನಡಕ ನೀಟಾದ ಡ್ರೆಸ್ ಏಕೆಂದರೆ ಇವರು ಬುದ್ಧಿಜೀವಿ ರೀತಿಯಲ್ಲಿ ಕಾಣಿಸುವಂತೆ ಇದ್ದರು.

ಕಳೆದ ಒಂದು ತಿಂಗಳಿಂದ ಸುತ್ತಿ ರವೀಂದ್ರರ ಮನೆ ಮತ್ತು ಸಂಭಂಧಿಕರನ್ನು ಸಂಪರ್ಕ ಮಾಡಿ ಕೆಲ ಮಾಹಿತಿ ಪತ್ತೇಹಚ್ಚಿದರು ಶಾಂತಿಗಾಗಿ ನಾಗರೀಕ ವೇದಿಕೆ ಮತ್ತು ಪುನರ್ ವಸತಿ ಸಮಿತಿಯವರು ಸಹಕಾರ ಮತ್ತು ಸಲಹೆಗಳು ಅಂತಿಮವಾಗಿದ್ದವು ಎನ್ನಲಾಗಿದೆ ಅಂತೂ ಇಂತೂ ನಕ್ಸಲ್ ಕೊನೆಯ ಕೊಂಡಿ ಕಳಚಿ ಜಿಲ್ಲಾಡಳಿತ ಮುಂದೆ ತರುವಲ್ಲಿ  ಯಶಸ್ಸು ಸಾಧಿಸಿದರು.

Naxal Ravindra found by undercover police

Share

Leave a comment

Leave a Reply

Your email address will not be published. Required fields are marked *

Don't Miss

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿಯಾಗಿವೆ ಎಂದು ಭಾರತ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ...

ರಸ್ತೆ ಅಪಘಾತದಲ್ಲಿ ಬೈಕ್ ಸಾವಾರನ ಸಾವು

ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೃತರನ್ನು 21 ವರ್ಷದ ಗೋಕುಲ್ ಎಂದು...

Related Articles

ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?

ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು...

ಚಿಕ್ಕಮಗಳೂರು ನಗರ ಸಮೀಪಕ್ಕೆ ಬಂದ ಕಾಡಾನೆಗಳು

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಮೀ ದೂರದ...

ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ

ಚಿಕ್ಕಮಗಳೂರು:  ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ  ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಬಿಸಿಯೂಟದ...

ಸಂಸ್ಕೃತಿ, ಸಾಹಿತ್ಯ, ಕಲೆಯಿಂದ ಸುಸಂಸ್ಕೃತ ಸಮುದಾಯ ಕಟ್ಟಲು ಸಾಧ್ಯ

ಚಿಕ್ಕಮಗಳೂರು: ಸಂಸ್ಕೃತಿ, ಸಾಹಿತ್ಯ, ಕಲೆಯ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯವನ್ನು ಕಟ್ಟಬಹುದು ಎಂದು ಬಸವತತ್ವ ಪೀಠಾಧ್ಯಕ್ಷರಾದ...