ಚಿಕ್ಕಮಗಳೂರು : ರಾಜ್ಯ ಸರ್ಕಾರಿ ನೌಕರರ ಸಂಘ ಗಳಿಗೆ ತಾಲ್ಲೂಕು ಮಟ್ಟದ ನಿರ್ದೇಶಕರ ಅಯ್ಕೆ ನಡೆದಿದ್ದು ಪದಾಧಿಕಾರಿಗಳ ಅಯ್ಕೆ ನಡೆಯಬೇಕಾಗಿದೆ. ಪ್ರಸ್ತುತ ಜಿಲ್ಲಾ ಮಟ್ಟದ ನಿರ್ದೇಶಕರ ಅಯ್ಕೆಗೆ ನಾಮ ಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಜಿದ್ದಾಜಿದ್ದಿ ಹಣಾಹಣಿ ನಡೆದಿದೆ.
ನೌಕರರ ತಾಲ್ಲೂಕು ಮಟ್ಟದ ಚುನಾವಣೆಯಲ್ಲಿ ಸ್ಥಳೀಯ ಶಾಸಕರುಗಳು ಪ್ರಭಾವ ಬೀರಿ ಅಯ್ಕೆ ಮಾಡಿದ್ದಾರೆ. ತರೀಕೆರೆ, ಕಡೂರು, ಅಜ್ಜಂಪುರ, ಶೃಂಗೇರಿ, ಕೊಪ್ಪ, ಎನ್.ಅರ್.ಪುರದಲ್ಲಿ ಶೇಕಡ ಎಪ್ಪತ್ತರಷ್ಟು ಅವಿರೋಧವಾಗಿ ಅಯ್ಕೆಯಾಗಿರುವುದು ನೋಡಿದರೆ ರಾಜಕೀಯ ಪ್ರವೇಶ ಅಗಿದೆ.ಶೃಂಗೇರಿ ಕ್ಷೇತ್ರದಲ್ಲಿ ಶಾಸಕರ ಆಪ್ತ ಸಹಾಯಕ ಒತ್ತಡ ತಂದರು ಎಂದು ಪೊಲೀಸ್ ಠಾಣೆ ತನಕ ಹೋಗಿದ್ದೆ ಸಾಕ್ಷಿ.
ಜಿಲ್ಲಾ ಮಟ್ಟದ ಚುನಾವಣೆ ಪ್ರಾರಂಭವಾಗಿದ್ದು ಹಾಲಿ ಅಧ್ಯಕ್ಷ ದೇವೇಂದ್ರರ ಅಣಿಯಲು ರಣ ವ್ಯೂಹ ರಚನೆಯಾಗಿದ್ದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಜಿಲ್ಲಾ ಮಟ್ಟದಲ್ಲಿ 66 ನಿರ್ದೇಶಕರ ಅಯ್ಕೆ ಆಗಬೇಕಾಗಿದ್ದು ಎಂಟು ತಾಲ್ಲೂಕಿನ ಅಧ್ಯಕ್ಷರ ಅಯ್ಕೆ ನಡದರೆ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಅಯ್ಕೆಗೆ ಪ್ರಕ್ರಿಯೆ ಆರಂಭವಾಗಲಿದೆ.
ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಿರಂಗ ವಾಗಿ ಸೂಚನೆ ನೀಡಿರುವುದು ಗುಟ್ಟಾಗಿ ಉಳಿದಿಲ್ಲ. ಹಾಲಿ ಅಧ್ಯಕ್ಷ ಷಡಕ್ಷರಿ ಬಿಜೆಪಿ ಬೆಂಬಲಿಗ ಎಂಬ ಹಿನ್ನೆಲೆಯಲ್ಲಿ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ನವರು ನೌಕರರ ಚುನಾವಣೆಗೆ ಎಂಟ್ರಿ ಕೊಟ್ಟಿದೆ.ಇದು ಹೊಸದೇನಲ್ಲ.ಕದ್ದು ಮುಚ್ಚಿ ರಾಜಕಾರಣಿಗಳು ನಡೆಸುತ್ತಿದ್ದ ಚಟುವಟಿಕೆಗಳನ್ನು ಕಾಂಗ್ರೆಸ್ ಬಹಿರಂಗವಾಗಿ ನಡೆಸುತ್ತಿದೆ.ಕೆಲ ಜೈ ಹೂಜೂರ್ ನೌಕರರು ಶಾಸಕರ ಹಿಂದೆ ಮುಂದೆ ತಿರುಗುವುದು ಗುಟ್ಟೇನಲ್ಲಾ ಒಟ್ಟಾರೆ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ನೌಕರರ ಸಂಘ ದ ಚುನಾವಣೆಗೆ ರಾಜಕೀಯ ರಂಗೇರಿರುವುದು ಮಾತ್ರ ಸತ್ಯ.
Leave a comment