ಚಿಕ್ಕಮಗಳೂರು: ಇಂದು ಶಾಸಕರಾಗಿರುವವರು ೧೫ ವರ್ಷ ಸಿ.ಟಿ.ರವಿಗೆ ಜೈ ಎಂದಿದ್ದರು. ಭಾರತ್ ಮಾತಾ ಕಿ ಜೈ, ಬಿಜೆಪಿ ಜೈ, ಸಿ.ಟಿ.ರವಿ ಜೈ ಎನ್ನುತ್ತಿದ್ದರು. ಇಂಥವರು ನನಗೆ ಪಾಠ ಹೇಳುವುದು ಬೇಡ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಹಿಂದಿನ ಫೋಟೋಗಳನ್ನು ತೆಗೆದು ನೋಡಿ. ಶೇ. ೫೦ರಷ್ಟು ಫೋಟೋಗಳಲ್ಲಿ ಇಂದಿನ ಶಾಸಕರ ಫೋಟೊಗಳು ಇವೆ. ಟೀಕೆ ಮಾಡುವಾಗ ನಾವು ಯಾರನ್ನು ಟೀಕೆ ಮಾಡುತ್ತೇವೆ ಎಂಬ ಎಚ್ಚರಿಕೆಯೂ ಇರಬೇಕು ಎಂದರು.
ಗುರುವಿಗೆ ತಿರುಮಂತ್ರ ಹಾಕಲು ಬಂದರೆ ಗುರು ಇನ್ನೂ ಮೂರ್ನಾಲ್ಕು ವಿದ್ಯೆ ಇಟ್ಟುಕೊಂಡಿರುತ್ತಾನೆ. ಕಾಲ ಬಂದಾಗ ಆ ವಿದ್ಯೆಗಳನ್ನು ಉಪಯೋಗ ಮಾಡಿಕೊಳ್ಳುತ್ತಾನೆ. ಗುರುವಿಗೆ ತಿರುಮಂತ್ರ ಹಾಕುವುದು ಬೇಡ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೆಸರನ್ನು ಹೇಳದೆ ಸಿ.ಟಿ.ರವಿ ಎಚ್ಚರಿಕೆ ನೀಡಿದರು.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ಪ್ರಕರಣಕ್ಕೆ ಸಂಬAಧಪಟ್ಟAತೆ ನಮ್ಮ ಆಕ್ಷೇಪ ಇರುವುದು ಧರ್ಮಸ್ಥಳದ ವಿರುದ್ಧ ಚ್ಯುತಿ ತರುವ ಷಡ್ಯಂತ್ರದ ವಿರುದ್ಧ. ತನಿಖೆ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ನಡೆಯಲಿ. ನಾವು ಯಾರು ಅಡ್ಡಗಾಲು ಹಾಕುವುದಿಲ್ಲ ಎಂದು ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿಗೆ ಮಸಿ ಬಳಿಯುವ ಷಡ್ಯಂತ್ರವನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಜನರೇ ಸಿಡಿದೇಳುತ್ತಾರೆ. ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆ ಆಗಲಿ. ತನಿಖಾ ಹಂತದಲ್ಲಿ ನಾನು ಏನು ಮಾತನಾಡುವುದಿಲ್ಲ.
ಆದರೆ ಷಡ್ಯಂತ್ರ ಮಾಡುತ್ತಿರುವವರು ಬಾಲ ಬಿಚ್ಚಿದರೆ ಸಮಾಜವೇ ಉತ್ತರ ಕೊಡುತ್ತದೆ. ಸಜ್ಜನರು ಸುಮ್ಮನಿದ್ದಾರೆ ಎಂದು ದುರ್ಜನರು ಮೆರೆಯಬಹುದು ಎಂದುಕೊAಡರೆ ಅದು ಒಳ್ಳೆಯದಲ್ಲ ಎಂದರು.
ಟಿಪ್ಪು ಸುಲ್ತಾನ್ ಹಿಂದೂ, ಕ್ರಿಶ್ವಿಯನ್ ಹಾಗೂ ಕನ್ನಡದ ಕೊಲೆಗೆ ಅಡಿಗಲ್ಲು ಹಾಕಿದ್ದ. ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್ಎಸ್ಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದ ಎನ್ನುವ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇತಿಹಾಸ ಅರಿಯದವರಿಂದ ಅಪಾಯವಿರುವುದಿಲ್ಲ. ತಿರುಚುವವರಿಂದ ಅಪಾಯ ಹೆಚ್ಚು. ಕೆಲವರು ಓಟು ಸಿಗುತ್ತದೆ ಎಂದರೆ ಟಿಪ್ಪುವೇ ನಮ್ಮಪ್ಪ ಎನ್ನುತ್ತಾರೆ ಎಂದು ಕಿಡಿಕಾರಿದರು.
ಟಿಪ್ಪು ಸತ್ತಿದ್ದರಿಂದ ಕನ್ನಡ ಉಳಿಯಿತು. ಇದು ಕನ್ನಡಿಗರ ಪುಣ್ಯ. ಬ್ರಿಟೀಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಟ ಮಾಡಿದ್ದ ಎಂದರೆ ಒಪ್ಪುತ್ತೇವೆ. ಸ್ವತಂತ್ರö್ಯ ಹೋರಾಟಗಾರ ಎಂದರೆ ಅದು ಒಪ್ಪಲು ಸಾಧ್ಯವಿಲ್ಲದ ಮಾತು. ಟಿಪ್ಪು ಅಡಳಿತದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ತೆಗೆದುಹಾಕಿ ಪರ್ಷಿಯನ್ ಭಾಷೆಯನ್ನು ಹೇರಿದ್ದ. ಆತ ಅಧಿಕಾರದಲ್ಲಿ ಮುಂದುವರಿದಿದ್ದರೆ ಕನ್ನಡಕ್ಕಾಗಿ ಕೈ ಎತ್ತಿದವರ ಕೈ ಮತ್ತು ಕೊರಳನ್ನು ಕತ್ತರಿಸುವ ಕೆಲಸ ನಡೆಯುತ್ತಿತ್ತು ಎಂದು ಹೇಳಿದರು.
MLAs should not chant Thirumantra for Guru
Leave a comment