ಚಿಕ್ಕಮಗಳೂರು: ಹಾಲಿ ಚೋರಿ ಮತ್ತು ಮಾಜಿ ಚೋರಿಗಳ ಜಗಳ್ ಬಂಧಿ ದಿನೇ, ದೀನೇ ಹೆಚ್ಚಾಗುತ್ತಿದೆ. ಶಾಸಕ ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡರು ಒಂದೇ ನಾಣ್ಯದ ಮೂರು ಮುಖಗಳಂತೆ ಕಂಗೊಳಿಸುತ್ತಿದ್ದರು. ಆದರೆ ಕಳೆದ ಒಂದು ತಿಂಗಳಿಂದ ತಮ್ಮಯ್ಯ ಮತ್ತು ರವಿ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಇದನ್ನು ನೋಡಿ ಬೋಜೇಗೌಡರು ಮಾತ್ರ ಖುಷಿಪಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಸಕರಾದ ಹೆಚ್.ಡಿ.ತಮ್ಮಯ್ಯ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕಾಂಗ್ರೆಸ್, ಜನತಾದಳ, ಬಿಜೆಪಿ ಯಲ್ಲಿ ನಗರಸಭೆ ಸದಸ್ಯರಾಗಿ ಅಧ್ಯಕ್ಷರಾಗಿ ಬೋಜೇಗೌಡರು ಮತ್ತು ಸಿ.ಟಿ.ರವಿಯವರನ್ನು ಅರೆದು ಕುಡಿದಿರುವ ಫಲ ಜೆ.ಸಿ.ಬಿ ತಮ್ಮಯ್ಯ ಎನ್ನುವದರ ಜೊತೆಗೆ “ಪಲ್ಟಿ” ತಮ್ಮಯ್ಯ ಎಂದು ಅವರ ಅಭಿಮಾನಿಗಳು ಮತ್ತು ವಿರೋಧಿಗಳು ಕರೆಯುತ್ತಿರುವುದು ಮಾತ್ರ ಸತ್ಯ.ಸಿ.ಟಿ.ರವಿ ಸೋಲಿಸಿ ಗೆದ್ದ ವರು ಎಂಬ ಬಿರುದು ಪಡೆದುಕೊಂಡಿದ್ದಾರೆ.
ಗೆದ್ದ ಮೇಲೆ ಸಿ.ಟಿ.ರವಿ ಬಾವ ಸುದರ್ಶನ್ ಗುತ್ತಿಗೆ ಕೆಲಸ ನಿಲ್ಲಿಸಿ ಲಾರಿಗಳು “ಶೆಡ್” ಸೇರುವಂತೆ ಮಾಡಿದ್ದವರು ಎರಡು ತಿಂಗಳಲ್ಲಿ ಏನು ವ್ಯವಹಾರ ನಡೆಯಿತೋ ಲಾರಿಗಳು ಬಹು ರಭಸದಿಂದ ಓಡಾಡುವುದು ನೋಡಿ ವಾಸನೆ ಕಮಟು ಬೀಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿಯವರು ಮಾತನಾಡಿದ್ದು ನಿಜ. ಕಳೆದ ಒಂದು ವಾರದಿಂದ ಮೆಡಿಕಲ್ ಕಾಲೇಜ್ ಗಲಾಟೆ ನಡೆಯುತ್ತಿದ್ದು ಆರೋಪ ಪ್ರತ್ಯಾರೋಪ ನಡೆಯುತ್ತಿದೆ.
ಸಿ.ಟ.ರವಿ ಕಾಲೇಜ್ ಗೆ ಭೇಟಿ ನೀಡಿದಾಗ ಡಿನ್ ಹರೀಶ್ ತಮ್ಮಯ್ಯರ ಕಛೇರಿಯಲ್ಲಿ ಇದ್ದರೂ ಎಂಬುದರಿಂದ ಹಿಡಿದು ವಿದ್ಯಾರ್ಥಿಗಳಿಗೆ ಕುಡಿಯಲು ನೀರಿಲ್ಲ ಮೆಡಿಸಿನ್ ಖರೀದಿಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಕ್ಕೆ ತಮ್ಮಯ್ಯ ಕೆಂಡಮಂಡಲರಾಗಿ ಅವರೇ ಇದಕ್ಕೆ ಕಾರಣ ಎಂದು ತಿಪ್ಪೇ ಸಾರಿಸಿದರು. ಜಿಲ್ಲೆಗೆ ಮೆಡಿಕಲ್ ಕಾಲೇಜ್ ತರಲು ಸಿ.ಟಿ.ರವಿ ಶ್ರಮ ಇದೆ.ಅತುರಾತುರವಾಗಿ ಉದ್ಘಾಟನೆ ಮಾಡಿ ಹೆಸರು ಬರೆಸಿ ಕೊಂಡಿರಬಹುದು ಆದರೆ ಕಳೆದ ಎರಡುವರೆ ವರ್ಷಗಳಿಂದ ತಮ್ಮಯ್ಯ ಕಡೆದು ಕಟ್ಟೇ ಹಾಕಿರುವುದು ಏನು ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸದೆ
ಬುಲ್ಡೋಜರ್ ಹೊಡೆಯುತ್ತಿರುವುದು ನೋಡಿ ಸಿ.ಟಿ.ರವಿ ಆರೋಪ ನಗರಸಭೆಯ ಪೆಟ್ರೋಲ್ ಡಿಸೇಲ್ ಗಿರಾಕಿ,ಕಮಿಷನ್ ಗಿರಾಕಿ ಎಂದು ಹೇಳುತ್ತಿರುವುದು ನೋಡಿದರೆ ಇವರ ಜೊತೆಯಲ್ಲಿ ಇದ್ದ ತಮ್ಮಯ್ಯ ಮಾಡುತ್ತಿದ್ದ ಅವ್ಯವಹಾರ ನೋಡಿ ಸಹಿಸಿಕೊಂಡಿರುವುದು ತಪ್ಪು.
ಸಿ.ಟಿ.ರವಿ ಹೇಗಿದ್ದರು ಈಗ ಹೇಗಿದ್ದಾರೆ ತಮ್ಮಯ್ಯ ಹೇಗಿದ್ದರು ಈಗ ಹೇಗಿದ್ದಾರೆ ಎಂದು ಬರೆಯಲು ಹೊರಟರೆ ಒಂದು ವರ್ಷ ಒಂದು ಲೋಡ್ ಬರೆಯಬಹುದು .ಜಾಣಕುರಡರ ರೀತಿ ಅವರ ಮೇಲೆ ಇವರು,ಇವರ ಮೇಲೆ ಅವರು ಹೇಳಿಕೆ ನೀಡಿದರೆ ಜನ ನಂಬುತ್ತಾರೆ ಎಂದು ತಿಳಿಯುವುದು ತಪ್ಪು.
ಡೀನ್ ಹರೀಶ್ ಸಿ.ಟಿ.ರವಿ ಕೊಡಿಗೆ ಉಳಿಸಿ ಬೆಳೆಸುತ್ತಿರುವುದು ತಮ್ಮಯ್ಯ ಇದಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಮಾಗಡಿ ಶಾಸಕ ಬಾಲಕೃಷ್ಣರ ಹಿನ್ನೆಲೆ ಇದೆ.ಡೀನ್ ಬಳಿ ಇರುವ ದಿನಗೂಲಿ ವೆಂಕಟೇಶ್ ಗೆ ಹಗ್ಗ ಬಿಗಿದರೆ ಮೆಡಿಕಲ್ ಕಾಲೇಜ್ ಅವ್ಯವಹಾರ ಬಯಲಿಗೆ ಬರುತ್ತವೆ.ಎಲ್ಲಾ ತಿನ್ನಲು ಕುಳಿತಿರುವಾಗ ಹೇಳುವವರು ಯಾರು? ಕೇಳುವವರು ಯಾರು? ಕ್ವಾರಿ,ಬ್ರಾಂಡಿ ಶಾಪ್, ಆಸ್ತಿ ಖರೀದಿ ಮತ್ತು ವರ್ಗಾವಣೆ ದಂಧೆಯಲ್ಲಿ ಮುಳುಗಿರುವವರಿಗೆ ಜನರ ಸಮಸ್ಯೆಗಳು, ಕ್ಷೇತ್ರದ ಸಮಸ್ಯೆಗಳು ಮುಖ್ಯವಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿರುವುದು ಮಾತ್ರ ಸತ್ಯ.
MLA Thammaiyya’s “welfare” work – MLA C.T Ravi Sudarshan Chakra!
Leave a comment