ಚಿಕ್ಕಮಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ತಂದೆಗೆ ತಕ್ಕ ಮಗ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ.
80 ರ ದಶಕದಲ್ಲಿ ಜನತಾಪಕ್ಷದ ಮುಖಂಡರಾಗಿ ಕೋಲಾರ ಜಿಲ್ಲೆಯ ವೇಮಗಲ್ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಸತತವಾಗಿ ಅಯ್ಕೆಯಾಗುತ್ತಿದ್ದ ಬೈರೇಗೌಡರು ಮಂತ್ರಿಯಾಗಿ ದಕ್ಷತೆಗೆ ಹೆಸರುವಾಸಿಯಾಗಿದ್ದವರು. ಬೈರೇಗೌಡರು ಪ್ರವಾಸ ಮಾಡಿದ ಕಡೆ ಮತ್ತು ಕಛೇರಿಗೆ ಭೇಟಿ ಕೊಟ್ಟ ಕಡೆ ಅಧಿಕಾರಿಗಳು ಮತ್ತು ನೌಕರರಿಗೆ ಚಳಿ ಬಿಡಿಸುತ್ತಿದ್ದರು.ಹೀಗಾಗಿ ಬೈರೇಗೌಡರನ್ನು ಬೆಂಕಿ ಬೈರೇಗೌಡ ಎಂದು ಕರೆಯುತ್ತಿದ್ದರು.
ಬೈರೇಗೌಡರ ಮಗ ಕೃಷ್ಣ ಬೈರೇಗೌಡ ಇಂದು ಕಂದಾಯ ಸಚಿವರಾಗಿ ತಂದೆಯ ಸಾಲಿನಲ್ಲಿ ಸಾಗುತ್ತಿದ್ದಾರೆ.ಕೃಷ್ಣ ಬೈರೇಗೌಡ ಕೂಡ ಕಛೇರಿಗೆ ಭೇಟಿ ಕೊಡುವುದು ಅಲ್ಲಿನ ನ್ಯೂನತೆ ಬಗ್ಗೆ ಕೆಲಸದ ವೈಖರಿ ಯ ಬಗ್ಗೆ ಅಧಿಕಾರಿಗಳಿಗೆ ಬೆಂಡ್ ಎತ್ತುತ್ತಿದ್ದಾರೆ.ಮೀಟಿಂಗ್ ನಲ್ಲಿ ಅಧಿಕಾರಿ ನೌಕರರಿಗೆ ಚಳಿ ಜ್ವರ ಖಚಿತ.
ಕಂದಾಯ ಇಲಾಖೆ ಎಂದರೆ ಕಾಸಿನ ಕಣಜ ಎಂದು ಬಹುತೇಕ ಅಧಿಕಾರಿ ನೌಕರರು ಹಿಂದೆ ಮುಂದೆ ಒಂದೇ ಸಮನೆ ತಿನ್ನುತ್ತಿದ್ದಾರೆ ಎಂಬುದು ಸತ್ಯ.
ಗ್ರಾಮ ಸೇವಕನಿಂದ ತಹಶಿಲ್ದಾರ ಎ,ಸಿ.ಡಿ,ಸಿ ಸೆಕ್ರೆಟರಿ ವರೆಗೆ ಹೆಗ್ಗಿಲ್ಲದೆ ತಿನ್ನಬಹುದಾದ ಇಲಾಖೆ ಸ್ವಲ್ಪವಾದರು ಸ್ವಚ್ಛ ಮಾಡುವ ಕೆಲಸದಲ್ಲಿ ಸಚಿವರು ನಿರತರಾಗಿದ್ದಾರೆ.ಇಂದು ಚಿಕ್ಕಮಗಳೂರಿಗೆ ಬಂದು ಸಭೆ ನಡೆಸಿದ ಕೃಷ್ಣ ಬೈರೇಗೌಡ ಹಿಗ್ಗಮುಗ್ಗ ಬೆವರು ಇಳಿಸಿದ್ದಾರೆ.
ಕೃಷ್ಣ ಬೈರೇಗೌಡ ವಿದೇಶದಲ್ಲಿ ಕೆಲಸದಲ್ಲಿದ್ದವರು ತಂದೆಯ ಸಾವಿನ ನಂತರ ಊರಿಗೆ ಬಂದು ಕೃಷಿ ಕೆಲಸದ ಜೊತೆಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು ಆದರೆ ವೇಮಗಲ್ ಕ್ಷೇತ್ರ ರದ್ದಾಗಿದ್ದರಿಂದ ಕಣ್ಣು ಬೆಂಗಳೂರು ಕಡೆ ಬಿತ್ತು ಅದೇ ಬ್ಯಾಟರಾಯನಪುರ ಕ್ಷೇತ್ರದಿಂದ ಸತತ ಮೂರನೇ ಬಾರಿ ಗೆಲುವು ಸಾಧಿಸಿರುವ ಕೃಷ್ಣ ಬೈರೇಗೌಡ ಹಿಂದೆ ಕೂಡ ಸಚಿವರಾಗಿದ್ದರು ಪ್ರಸ್ತುತ ಕಂದಾಯ ಸಚಿವರಾಗಿ ಇಲಾಖೆಗೆ ಘನತೆ ತಂದು ಕೊಡಲು ಹೆಣಗಾಡುತ್ತಿದ್ದಾರೆ.
ಇಲಾಖೆಯಲ್ಲಿ ಹೊಸತನ ತರಲು ಪ್ರಯತ್ನ ನಡೆಸಿದ್ದಾರೆ.ಯಾರ ಒತ್ತಡಕ್ಕೂ ಮಣಿಯುವುದಿಲ್ಲ.ಸರಳರು ಯಾರಿಗೂ ಕಾಫಿ ಕುಡಿಸುವುದಿಲ್ಲ ಅವರು ಕುಡಿಯುವುದಿಲ್ಲ ಮನೆಯಿಂದ ಊಟ ತಂದು ಊಟ ಮಾಡುವಷ್ಟು ಸರಳರು ನೇರ ಮಾತು ,ಮಾತು ಕಮ್ಮಿ ಕೆಲಸ ಜಾಸ್ತಿ ಎಂದು ಕೊಂಡಿದ್ದಾರೆ.ಇದು ರಾಜಕೀಯ ದಲ್ಲಾಳಿಗಳು ರಿಯಲ್ ಎಸ್ಟೇಟ್ ನವರಿಗೆ ನುಂಗಲಾರದ ತುತ್ತಾಗಿದ್ದರೆ ಅಧಿಕಾರಿಗಳು ಬೇರೆ ಇಲಾಖೆಗೆ ಹೋಗಲು ಜಾಗ ಹುಡುಕುತ್ತಿದ್ದಾರೆ.
ಅಕ್ರಮ ಒತ್ತುವರಿ ಮಾಡಿಕೊಂಡವರು ಮತ್ತು ಕಳ್ಳದಾರಿಯಲ್ಲಿ ಸಾಗುವಳಿ ಪತ್ರ ನೀಡಲು ಪ್ಲಾನ್ ಮಾಡಿರುವ ಕೆಲವು ಶಾಸಕರುಗಳು ಪರದಾಡುತ್ತಿದ್ದಾರೆ.ಅಷ್ಟರ ಮಟ್ಟಿಗೆ ಕೃಷ್ಣ ಬೈರೇಗೌಡರ ಸಂಚಲನ ಸೃಷ್ಟಿಸಿದ್ದಾರೆ.
Minister Krishna Byre Gowda is a son worthy of his father.
Leave a comment